PM Jan Dhan Account: ಪಿಎಂ ಜನಧನ ಖಾತೆ ಮೂಲಕ ಸಿಗಲಿದೆ ಬಂಪರ್ ಲಾಭ

Pradhan Mantri Jan Dhan Yojana : ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ನೊಂದಿಗೆ ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯಾಗಿದೆ.  

Written by - Ranjitha R K | Last Updated : Jun 21, 2021, 01:00 PM IST
  • ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯಿಂದ ಅನೇಕ ಪ್ರಯೋಜನಗಳಿವೆ
  • ಸರ್ಕಾರ ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಹಣಕಾಸು ಕಾರ್ಯಕ್ರಮ ಇದಾಗಿದೆ.
  • ಈ ಯೋಜನೆಯಡಿ ಬಡವನು ಸುಲಭವಾಗಿ ತನ್ನ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
PM Jan Dhan Account: ಪಿಎಂ ಜನಧನ ಖಾತೆ ಮೂಲಕ ಸಿಗಲಿದೆ ಬಂಪರ್ ಲಾಭ  title=
ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯಿಂದ ಅನೇಕ ಪ್ರಯೋಜನಗಳಿವೆ (photo zee news)

ನವದೆಹಲಿ : Pradhan Mantri Jan Dhan Yojana : ಪ್ರಧಾನ್ ಮಂತ್ರಿ ಜನ ಧನ್ ಖಾತೆ ಎಂದರೆ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ನೊಂದಿಗೆ ದೇಶದ ಬಡವರಿಗಾಗಿ ಖಾತೆ ತೆರೆಯುವ ಯೋಜನೆಯಾಗಿದೆ. ಸರ್ಕಾರ ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈ ಯೋಜನೆಯಡಿ ಬಡವನು ಸುಲಭವಾಗಿ ತನ್ನ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಈ ಯೋಜನೆಯಡಿ ಅನೇಕ ರೀತಿಯ ಆರ್ಥಿಕ ಲಾಭಗಳು ಕೂಡಾ ಲಭ್ಯವಿದೆ. 

ಸಿಗಲಿದೆ 1.30 ಲಕ್ಷ ರೂಪಾಯಿ : 
ಪ್ರಧಾನ್ ಮಂತ್ರಿ ಧನ್ ಯೋಜನೆ (Pradhan Mantri Jan Dhan Yojana) ಅಡಿಯಲ್ಲಿ ತೆರೆಯಲಾದ ಖಾತೆಯಲ್ಲಿ, ಖಾತೆದಾರರಿಗೆ ಒಟ್ಟು 1.30 ಲಕ್ಷ ರೂ.  ಸಿಗಲಿದೆ. ಇದಲ್ಲದೆ ಅಪಘಾತ ವಿಮೆ ಕೂಡ ಇದರಲ್ಲಿ ಲಭ್ಯವಿದೆ. ಖಾತೆದಾರರಿಗೆ 1,00,000 ರೂ.ಗಳ ಅಪಘಾತ ವಿಮೆ ಮತ್ತು 30,000 ರೂ.ಗಳ ಜನರಲ್ ಇನ್ಶುರೆನ್ಸ್ (Insurance) ಸಿಗಲಿದೆ.  ಒಂದು ವೇಳೆ, ಖಾತೆದಾರರಿಗೆ ಅಪಘಾತವಾದರೆ, 30,000 ರೂ. ಸಿಗಲಿದೆ. ಅಪಗಾತದಲ್ಲಿ ಖಾತೆದಾರನ ಸಾವು ಸಂಭವಿಸಿದರೆ, ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಸಿಗುತ್ತದೆ.

ಇದನ್ನೂ ಓದಿ : New Jeevan Shanti Policy: ಒಮ್ಮೆ ಹೂಡಿಕೆ ಮಾಡಿದರೆ ಸಾಕು ಜೀವನಪೂರ್ತಿ ಸಿಗಲಿದೆ ಪಿಂಚಣಿ

ಜನ ಧನ್ ಖಾತೆ ಎಂದರೇನು?
ಪ್ರಧಾನ್ ಮಂತ್ರಿ ಧನ್ ಯೋಜನೆ (PMJDY) ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಹಣಕಾಸು ಕಾರ್ಯಕ್ರಮವಾಗಿದೆ. ಇದರ ಅಡಿಯಲ್ಲಿ, ಬ್ಯಾಂಕುಗಳು (Bank), ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಿರೋ ಬ್ಯಾಲೆನ್ಸ್ನೊಂದಿಗೆ (Zero balance account) ಖಾತೆಯನ್ನು ತೆರೆಯಲಾಗುತ್ತದೆ. ಈ ಖಾತೆಯನ್ನು ಯಾವುದೇ ಬ್ಯಾಂಕ್ ಶಾಖೆ ಅಥವಾ ವ್ಯವಸಾಯ ಪ್ರಾತಿನಿಧಿಕ ಟ್ ಲೆಟ್ ನಲ್ಲಿ ತೆರೆಯಬಹುದಾಗಿದೆ. 

ಖಾತೆ ತೆರೆಯುವುದು ಹೇಗೆ?
ಜನ ಧನ್ ಖಾತೆಯನ್ನು (jan dhan account) ತೆರೆಯಲು ಹತ್ತಿರದ ಬ್ಯಾಂಕ್‌ಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ನಲ್ಲಿಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ಉದ್ಯೋಗ, ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, ಎಸ್‌ಎಸ್‌ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕಾಗುತ್ತದೆ. 10 ವರ್ಷಕ್ಕಿಂತ ,ಮೇಲ್ಪಟ್ಟವರ ಭಾರತೀಯ ನಾಗರೀಕರ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು. 

ಇದನ್ನೂ ಓದಿ : ದುಬಾರಿ ಪೆಟ್ರೋಲ್ ಜಾಗಕ್ಕೆ ಬರಲಿದೆ ಪರ್ಯಾಯ ಇಂಧನ. ಬೆಲೆ ಕೇವಲ 62 ರೂ./ಲೀ

ಈ ದಾಖಲೆಗಳು ಕಡ್ಡಾಯ : 
ಆಧಾರ್ ಕಾರ್ಡ್ (Aadhaar), ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ವೋಟರ್ ಐಡಿ, NREGA ಜಾಬ್ ಕಾರ್ಡ್, ಗೆಜೆಟೆಡ್ ಆಫೀಸರ್ ಮೂಲಕ ಜಾರಿ ಮಾಡಲಾದ ಲೆಟರ್, ಈ ದಾಖಲೆಗಳು ಜನಧನ ಖಾತೆ ತೆರಯವ ಸಂದರ್ಭದಲ್ಲಿ ಅಗತ್ಯವಿರುತ್ತದೆ. 

ಈ ಖಾತೆಯ ಪ್ರಯೋಜನಗಳು (PM Jan Dhan Account Benifits)  :
1. ಈ ಖಾತೆಯನ್ನು ತೆರೆದ 6 ತಿಂಗಳ ನಂತರ ಓವರ್‌ಡ್ರಾಫ್ಟ್ ಸೌಲಭ್ಯ
2. ಆಕಸ್ಮಿಕ ವಿಮೆ 2 ಲಕ್ಷ ರೂ
3 .30,000ರೂ. ವರೆಗೆ ಲೈಫ್ ಕವರ್
4. ಠೇವಣಿ ಮೇಲಿನ ಬಡ್ಡಿ
5. ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ
6. ರೂಪೇ ಡೆಬಿಟ್ ಕಾರ್ಡ್‌ನ (debit card) ಸೌಲಭ್ಯ 
7. ಈ ಮೂಲಕ ವಿಮೆ, ಪಿಂಚಣಿ ಉತ್ಪನ್ನಗಳನ್ನು ಖರೀದಿಸುವುದು ಸುಲಭ
8. ಪಿಎಂ ಕಿಸಾನ್ (PM Kissan) ಮತ್ತು ಶ್ರಮ್ಯೋಗಿ ಮಾನ್ ಧನ್ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆ ತೆರೆಯುವುದು ಸುಲಭ
9. ದೇಶಾದ್ಯಂತ ಹಣವನ್ನು ವರ್ಗಾಯಿಸಲು ಉತ್ತಮ ಸೌಲಭ್ಯ
10. ಸರ್ಕಾರಿ ಯೋಜನೆಗಳ ಪ್ರಯೋಜನಗಳ ಹಣ ನೇರ ಖಾತೆಗೆ ಬರುತ್ತದೆ.

ಇದನ್ನೂ ಓದಿ : LIC Policy: LICಯ ಈ ಪಾಲಸಿಯಲ್ಲಿ ನಿತ್ಯ ರೂ.30 ಹೂಡಿಕೆ ಮಾಡಿ ಲಕ್ಷಾಧಿಪತಿಯಾಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News