Cabinet Meeting : ಕ್ಯಾಬಿನೆಟ್ ಸಭೆಯಲ್ಲಿ DA ಹೆಚ್ಚಳ, ಉಚಿತ ಪಡಿತರ ಸೇರಿದಂತೆ, ರೈಲ್ವೆ ನೌಕರರಿಗೆ ಬಿಗ್ ಗಿಫ್ಟ್!

ಇದಲ್ಲದೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ)ಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ, ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನವನ್ನು ವಿಸ್ತರಿಸಲಾಗಿದೆ. ಇದಲ್ಲದೇ ರೈಲ್ವೆಗೆ ಭರ್ಜರಿ ಗಿಫ್ಟ್ ಕೂಡ ಸಿಕ್ಕಿದೆ.

Written by - Channabasava A Kashinakunti | Last Updated : Sep 28, 2022, 05:23 PM IST
  • ಶೇ.4 ರಷ್ಟು ಡಿಎ ಹೆಚ್ಚಳ ಘೋಷಿಸಲಾಗಿದೆ
  • ಡಿಸೆಂಬರ್ ವರೆಗೆ ಉಚಿತ ಪಡಿತರ ದೊರೆಯಲಿದೆ
  • ರೈಲ್ವೆಗೆ ಭರ್ಜರಿ ಉಡುಗೊರೆ ಸಿಕ್ಕಿದೆ
Cabinet Meeting : ಕ್ಯಾಬಿನೆಟ್ ಸಭೆಯಲ್ಲಿ DA ಹೆಚ್ಚಳ, ಉಚಿತ ಪಡಿತರ ಸೇರಿದಂತೆ, ರೈಲ್ವೆ ನೌಕರರಿಗೆ ಬಿಗ್ ಗಿಫ್ಟ್! title=

Cabinet Meeting Update : ಹಬ್ಬದ ನಡುವೆಯೇ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದರು. ಇಂದು ಮೋದಿ ಸರ್ಕಾರದ ಸಂಪುಟದಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲಾಗಿದ್ದು, ಆ ಬಳಿಕ ಇದೀಗ ಶೇ.38ಕ್ಕೆ ಏರಿಕೆಯಾಗಿದೆ. ಇದಲ್ಲದೇ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ)ಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈಗ ಈ ಯೋಜನೆಯಡಿ, ಪಡಿತರ ಚೀಟಿದಾರರು ಡಿಸೆಂಬರ್‌ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನವನ್ನು ವಿಸ್ತರಿಸಲಾಗಿದೆ. ಇದಲ್ಲದೇ ರೈಲ್ವೆಗೆ ಭರ್ಜರಿ ಗಿಫ್ಟ್ ಕೂಡ ಸಿಕ್ಕಿದೆ.

ಶೇ.4 ರಷ್ಟು ಡಿಎ ಹೆಚ್ಚಳ ಘೋಷಿಸಲಾಗಿದೆ

ಪ್ರಸ್ತುತ ತುಟ್ಟಿಭತ್ಯೆ ಶೇ.34ರಷ್ಟಿದ್ದು, ಈಗ ಶೇ.4ರಿಂದ ಶೇ.38ಕ್ಕೆ ಏರಿಕೆಯಾಗಿದೆ ಎಂಬುದು ಗಮನಾರ್ಹ. ಸರ್ಕಾರದ ಈ ನಿರ್ಧಾರದಿಂದ ಅಸ್ತಿತ್ವದಲ್ಲಿರುವ 50 ಲಕ್ಷ ಕೇಂದ್ರ ನೌಕರರು ಮತ್ತು 62 ಲಕ್ಷ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ. ಜುಲೈನಿಂದ ಈ ಹೆಚ್ಚಳಕ್ಕಾಗಿ ನೌಕರರು ಕಾಯುತ್ತಿದ್ದರು. ಸರ್ಕಾರದ ಡಿಎ ಹೆಚ್ಚಳವು ಜುಲೈ 1, 2022 ರಿಂದ ಅನ್ವಯವಾಗುತ್ತದೆ. ಈ ಹಿಂದೆ ಮಾರ್ಚ್ 2022 ರಲ್ಲಿ, ಜನವರಿಯಿಂದ ಡಿಎ ಹೆಚ್ಚಿಸಲು ಸರ್ಕಾರ ಘೋಷಿಸಿತ್ತು. ಆಗ ಕೇಂದ್ರ ನೌಕರರ ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿತ್ತು. ಈಗ ಅದು ಶೇ.38ಕ್ಕೆ ಏರಿಕೆಯಾಗಿದೆ. ಇದರ ಪ್ರಕಾರ ಸೆಪ್ಟಂಬರ್ ತಿಂಗಳ ಸಂಬಳದಲ್ಲಿ ನೌಕರರಿಗೆ ಎರಡು ತಿಂಗಳ ಡಿಎ ಅರಿಯರ್ ಸಿಗಲಿದೆ.

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ

ಡಿಸೆಂಬರ್ ವರೆಗೆ ಉಚಿತ ಪಡಿತರ ದೊರೆಯಲಿದೆ

ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ಮೂರು ತಿಂಗಳವರೆಗೆ ವಿಸ್ತರಿಸುವ ಘೋಷಣೆಯ ನಂತರ, ಪಡಿತರ ಚೀಟಿದಾರರು ಡಿಸೆಂಬರ್ ವರೆಗೆ ಸರ್ಕಾರದಿಂದ ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಾರೆ. ಇದರಿಂದ 80 ಕೋಟಿ ಜನರಿಗೆ ನೇರ ಪ್ರಯೋಜನವಾಗಲಿದೆ. ಸರ್ಕಾರದಿಂದ ಈ ಯೋಜನೆ ಹೆಚ್ಚಿಸುವ ಸುಳಿವು ಈಗಾಗಲೇ ನೀಡಲಾಗಿತ್ತು. ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿಯೂ ಈ ಬಗ್ಗೆ ಸೂಚಿಸಿದ್ದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ವಿಶ್ವದ ಅತಿದೊಡ್ಡ ಆಹಾರ ಯೋಜನೆಯಾಗಿದೆ.

2020 ರಲ್ಲಿ ಪ್ರಾರಂಭವಾಯಿತು ಈ ಯೋಜನೆ

ಕೋವಿಡ್-19 ಅವಧಿಯಲ್ಲಿ ಕೇಂದ್ರ ಸರ್ಕಾರವು ಏಪ್ರಿಲ್ 2020 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು ಎಂಬುದು ಗಮನಾರ್ಹ. ನಂತರ ಮಾರ್ಚ್ 2022 ರಲ್ಲಿ ಆರು ತಿಂಗಳವರೆಗೆ ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಯಿತು. ಇದೀಗ ಸರ್ಕಾರ ಮತ್ತೊಮ್ಮೆ 2022ರ ಡಿಸೆಂಬರ್‌ವರೆಗೆ ಮೂರು ತಿಂಗಳ ಕಾಲ ವಿಸ್ತರಿಸಿದೆ. ಆದರೆ, ಮಾಧ್ಯಮ ವರದಿಯಲ್ಲಿ ಆರು ತಿಂಗಳು ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿದೆ.

ರೈಲ್ವೆಗೆ ಭರ್ಜರಿ ಉಡುಗೊರೆ ಸಿಕ್ಕಿದೆ

ಹೊಸ ದೆಹಲಿ, ಅಹಮದಾಬಾದ್ ಮತ್ತು CSMT, ಮುಂಬೈ ಎಂಬ ಮೂರು ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಭಾರತೀಯ ರೈಲ್ವೆಯ ಪ್ರಸ್ತಾವನೆಯನ್ನು ಸಂಪುಟ ಅನುಮೋದಿಸಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಅಶ್ವಿನಿ ವೈಷ್ಣವ್, ಈ ಯೋಜನೆಯಲ್ಲಿ ಸುಮಾರು 10,000 ಕೋಟಿ ರೂಪಾಯಿ ಹೂಡಿಕೆಯಾಗಿದೆ.

ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಫ್ರೀ ರೇಷನ್ ಕುರಿತು ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ಈ ರೈಲು ನಿಲ್ದಾಣಗಳ ಪುನರಾಭಿವೃದ್ಧಿ

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ''ನವದೆಹಲಿ, ಛತ್ರಪತಿ ಶಿವಾಜಿ ಮತ್ತು ಅಹಮದಾಬಾದ್ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕೇಂದ್ರ ಸರ್ಕಾರ 10,000 ಕೋಟಿ ರೂ. ನೀಡಲಿದೆ. ಸದ್ಯ ಒಟ್ಟು 199 ರೈಲು ನಿಲ್ದಾಣಗಳ ಪುನರ್ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, 'ನವದೆಹಲಿ ರೈಲು ನಿಲ್ದಾಣವು ಬಸ್‌ಗಳು, ಆಟೋ ಮತ್ತು ಮೆಟ್ರೋ ರೈಲು ಸೇವೆಗಳೊಂದಿಗೆ ರೈಲು ಸೇವೆಗಳನ್ನು ಸಂಯೋಜಿಸುತ್ತದೆ. ಅಹಮದಾಬಾದ್ ರೈಲು ನಿಲ್ದಾಣದ ಮರುವಿನ್ಯಾಸವು ಮೋಡೆರಾದ ಸೂರ್ಯ ದೇವಾಲಯದಿಂದ ಪ್ರೇರಿತವಾಗಿದೆ ಮತ್ತು CSMT ಯ ಪಾರಂಪರಿಕ ಕಟ್ಟಡಕ್ಕೆ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ, ಅದರ ಸುತ್ತಲಿನ ಕಟ್ಟಡಗಳನ್ನು ಮಾತ್ರ ಮರುಅಭಿವೃದ್ಧಿ ಮಾಡಲಾಗುತ್ತದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News