LIC Policy : ಈ ಯೋಜನೆಯಡಿ ಪ್ರತಿದಿನ ₹ 150 ಹೂಡಿಕೆ ಮಾಡಿ, ಮಗಳ ಮದುವೆ ವೇಳೆಗೆ ಪಡೆಯಿರಿ ₹ 22 ಲಕ್ಷ!

ಎಲ್‌ಐಸಿ ಹೆಣ್ಣುಮಕ್ಕಳ ಮದುವೆಗಾಗಿ ಈ ವಿಶೇಷ ಯೋಜನೆಯಲ್ಲಿ ನಿಮಗೆ ಒಟ್ಟು 22 ಲಕ್ಷ ರೂ. ಸಿಗುತ್ತವೆ. ಪಾಲಿಸಿಯಡಿಯಲ್ಲಿ ನೀವು ಪ್ರತಿದಿನ 150 ರೂ. ಮಾತ್ರ ಹೂಡಿಕೆ ಮಾಡಬೇಕು

Last Updated : May 22, 2021, 05:16 PM IST
  • ಹೆಣ್ಣುಮಕ್ಕಳಿಗಾಗಿ LIC ನಡೆಸುತ್ತಿರುವ ವಿಶೇಷ ಪಾಲಿಸಿ
  • ಎಲ್‌ಐಸಿ ಹೆಣ್ಣುಮಕ್ಕಳ ಮದುವೆಗಾಗಿ ಈ ವಿಶೇಷ ಯೋಜನೆ
  • ನೀವು ಪ್ರತಿದಿನ 150 ರೂ. ಮಾತ್ರ ಹೂಡಿಕೆ ಮಾಡಬೇಕು
LIC  Policy : ಈ ಯೋಜನೆಯಡಿ ಪ್ರತಿದಿನ ₹ 150 ಹೂಡಿಕೆ ಮಾಡಿ, ಮಗಳ ಮದುವೆ ವೇಳೆಗೆ ಪಡೆಯಿರಿ ₹ 22 ಲಕ್ಷ! title=

ನವದೆಹಲಿ: ಭಾರತದಲ್ಲಿ ಹೆಚ್ಚಿನ ಜನರು ಹೆಣ್ಣು ಮಕ್ಕಳು ಜನಿಸಿದ ಕೂಡಲೇ ತಮ್ಮ ಉತ್ತಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲುಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಪೋಷಕರು ಮಗಳ ಶಿಕ್ಷಣ, ವಿವಾಹದವರೆಗಿನ ಅಂದಾಜು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಹಣ ಕೂಡಿಡಲು ಶುರು ಮಾಡುತ್ತಾರೆ. ಹೆಣ್ಣುಮಕ್ಕಳಿಗಾಗಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಡೆಸುತ್ತಿರುವ ವಿಶೇಷ ಪಾಲಿಸಿಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಈ ಯೋಜನೆಯಡಿಯಲ್ಲಿ, ಪ್ರತಿದಿನ ಸಣ್ಣ ಮೊತ್ತವನ್ನ ಉಳಿಸುವ ಮೂಲಕ ನಿಮ್ಮ ಮಗಳ ಭವಿಷ್ಯವನ್ನ ನೀವು ಭದ್ರಪಡಿಸಬಹುದು.

ಎಲ್‌ಐಸಿ(Life Insurance Corporation of India) ಹೆಣ್ಣುಮಕ್ಕಳ ಮದುವೆಗಾಗಿ ಈ ವಿಶೇಷ ಯೋಜನೆಯಲ್ಲಿ ನಿಮಗೆ ಒಟ್ಟು 22 ಲಕ್ಷ ರೂ. ಸಿಗುತ್ತವೆ. ಪಾಲಿಸಿಯಡಿಯಲ್ಲಿ ನೀವು ಪ್ರತಿದಿನ 150 ರೂ. ಮಾತ್ರ ಹೂಡಿಕೆ ಮಾಡಬೇಕು. ನೀವು ಮಗಳ ಮದುವೆ ಮಾಡುವ ವೇಳೆಗೆ ನಿಮಗೆ 22 ಲಕ್ಷ ರೂ. ಸಿಗುತ್ತದೆ.

ಇದನ್ನೂ ಓದಿ : ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ

ಈ ಪಾಲಿಸಿ ತೆಗೆದುಕೊಂಡ ನಂತ್ರ ತಂದೆ ಸತ್ತರೆ, ಯಾವುದೇ ಹೂಡಿಕೆ(Investment) ಮಾಡುವ ಅವಶ್ಯಕತೆಯಿಲ್ಲ. ಹೆಣ್ಣು ಮಗಳ ತಂದೆಯ ಮರಣದ ನಂತರ ಪ್ರೀಮಿಯಂ ಪಾವತಿಸದಿದ್ದರೂ ಸಹ ಪಾಲಿಸಿ ಮುಂದುವರಿಯುತ್ತದೆ. ಅಷ್ಟೇ ಅಲ್ಲ, ತಂದೆಯ ಮರಣದ ನಂತರ ನಿಮಗೆ ಕೂಡಲೇ 10 ಲಕ್ಷ ರೂ. ಸಿಗುತ್ತದೆ. ಇದಲ್ಲದೆ, ತಂದೆ ಅಪಘಾತದಲ್ಲಿ ಸತ್ತರೆ, ಅವರಿಗೆ 20 ಲಕ್ಷ ರೂ. ಸಿಗುತ್ತದೆ.

ಇದನ್ನೂ ಓದಿ : 'PM Kisanʼ 8ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿಲ್ಲವೇ? ಹಾಗಿದ್ರೆ ತಕ್ಷಣ ಈ ನಂಬರ್ ಗೆ ಕರೆ ಮಾಡಿ!

ಈ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಎಲ್‌ಐಸಿ(LIC)ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಇದಲ್ಲದೆ, ನೀವು ಹತ್ತಿರದ ಎಲ್‌ಐಸಿ ಏಜೆಂಟರಿಂದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ : PPF vs NPS ಇವೆರಡರಲ್ಲಿ ನಿವೃತ್ತಿ ಜೀವನಕ್ಕೆ ಯಾವುದು ಉತ್ತಮ, ತಿಂಗಳಿಗೆ 3000 ರೂ. ಜಮಾ ಮಾಡಿ, 44 ಲಕ್ಷ ರೂ. ಗಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News