ಶೀಘ್ರದಲ್ಲಿಯೇ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಬಂಬಾಟ್ ಹೆಚ್ಚಳ ಸಾಧ್ಯತೆ!

Salary Hike: ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ)ಗೆ ಸಂಬಂಧಿಸಿದಂತೆ ಕೆಲವು ವರದಿಗಳಲ್ಲಿ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ಈಗಿನ ದರ ಶೇ.42ರಿಂದ ಶೇ.45ಕ್ಕೆ ಏರಿಕೆಯಾಗಲಿದೆ. ಆದರೆ, ಇದು ಆಧಾರ ರಹಿತ ಹೇಳಿಕೆಯಾಗಿದೆ ಎಂದೂ ಕೂಡ ವರದಿಯಾಗಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ(Business News In Kannada)  

Written by - Nitin Tabib | Last Updated : Aug 17, 2023, 11:40 PM IST
  • ಮಾಧ್ಯಮಗಳಲ್ಲಿ ಪ್ರಕಟಗೊಂಡ ಇಂತಹ ವರದಿಗಳಿಂದ ಕೇಂದ್ರ ನೌಕರರಿಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.
  • ಕೆಲ ದಿನಗಳ ಹಿಂದೆ ಅವರ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಪರಿಷ್ಕರಣೆ ಆಗಲಿದೆ ಎಂಬ ವರದಿ ಬಂದಿತ್ತು.
  • ಆದರೆ, ಈ ಶೇಕಡಾ 3 ರ ಲೆಕ್ಕಾಚಾರ ಎಲ್ಲಿಂದ ಬಂತು, ಇದರ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
  • ಲೆಕ್ಕಾಚಾರ ನೋಡಿದರೆ ಈ ಬಾರಿಯೂ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಕಾಣುವುದು ಖಚಿತವಾಗಿದೆ.
ಶೀಘ್ರದಲ್ಲಿಯೇ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಬಂಬಾಟ್ ಹೆಚ್ಚಳ ಸಾಧ್ಯತೆ! title=

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಪ್ರಕಟವಾಗಿದೆ. ಜುಲೈ 2023 ರಿಂದ ಹೆಚ್ಚಾಗಲಿರುವ ಡಿಎ ಹೆಚ್ಚಳದ ನಿರೀಕ್ಷೆಗೆ ಶೀಘ್ರದಲ್ಲಿಯೇ ತೆರೆಬೀಳಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. AICPI ಸೂಚ್ಯಂಕದ ಅಂಕ್ತಿ ಅಂಶಗಳು ಪ್ರಕಟಗೊಂಡ ಬಳಿಕ, ಅವರ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಾಗುತ್ತದೆ ಎಂದು ಸೂಚಿಸಲಾಗುತ್ತದೆ (Business News In Kannada). ಆದರೆ, ಅದನ್ನು ಸರ್ಕಾರ ನಿರ್ಧರಿಸುತ್ತದೆ ಮತ್ತು ಸಂಪುಟದ ಅನುಮೋದನೆಯ ನಂತರ ಅದನ್ನು ಮುಂದುವರಿಸಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಗೊಂದಲದ ಸ್ಥಿತಿ ಇದೆ. ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ)ಗೆ ಸಂಬಂಧಿಸಿದ ಕೆಲವು ವರದಿಗಳಲ್ಲಿ ಶೇ 3ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಅಂದರೆ ಈಗಿನ ದರ ಶೇ.42ರಿಂದ ಶೇ.45ಕ್ಕೆ ಏರಿಕೆಯಾಗಲಿದೆ. ಆದರೆ, ಇದು ಆಧಾರ ರಹಿತ ಹೇಳಿಕೆ ಎಂದೂ ಕೂಡ ವರದಿಯಾಗುತ್ತಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ,

ವಾಸ್ತವದಲ್ಲಿ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (AICPI) ಮಾಸಿಕ ಅಂಕಿಅಂಶಗಳ ಆಧಾರದ ಮೇಲೆ ತುಟ್ಟಿ ಭತ್ಯೆ (DA) ನಿರ್ಧರಿಸಲಾಗುತ್ತದೆ. ಜುಲೈ 2023 ರಿಂದ ಅನ್ವಯವಾಗುವ ತುಟ್ಟಿಭತ್ಯೆಯ AICPI ಸೂಚ್ಯಂಕವು ಜನವರಿಯಿಂದ ಜೂನ್‌ವರೆಗೆ ನಿರ್ಧರಿಸುತ್ತದೆ. ಆರು ತಿಂಗಳ ಅಂಕಿಅಂಶಗಳ ಟ್ರೆಂಡ್ ನೋಡಿದರೆ, ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದಕ್ಕಾಗಿ ನಾವು ಈ ಕೆಳಗೆ ಕೊಟ್ಟಿರುವ ಲೆಕ್ಕಾಚಾರವನ್ನು ಗಮನಿಸಿ. ಇಂತಹ ಪರಿಸ್ಥಿತಿಯಲ್ಲಿ ಶೇ.3ರಷ್ಟು ಹೆಚ್ಚಳದ ಮಾತು ಬಹುತೇಕ ಅಲ್ಲಗಳೆದಂತಾಗಲಿದೆ. ಆದರೆ, ಅಂತಿಮ ನಿರ್ಧಾರ ಸರ್ಕಾರದ ಮೇಲಿದೆ. ಆದರೆ, ಸಂಪುಟದಿಂದ ಒಪ್ಪಿಗೆ ಸಿಗುವವರೆಗೆ ಏನನ್ನೂ ಹೇಳುವುದು ಸ್ವಲ್ಪ ತರಾತುರಿ ಎಂದು ಹೇಳಿದರೆ ತಪ್ಪಾಗಲಾರದು.

ನಿಸಂಶಯವಾಗಿ ಶೇ.4 ರಷ್ಟು ಹೆಚ್ಚಳ ಸರಿಯಾಗಿದೆ
ಮಾಧ್ಯಮಗಳಲ್ಲಿ ಪ್ರಕಟಗೊಂಡ ಇಂತಹ ವರದಿಗಳಿಂದ ಕೇಂದ್ರ ನೌಕರರಿಗೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಅವರ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಪರಿಷ್ಕರಣೆ ಆಗಲಿದೆ ಎಂಬ ವರದಿ ಬಂದಿತ್ತು. ಆದರೆ, ಈ ಶೇಕಡಾ 3 ರ ಲೆಕ್ಕಾಚಾರ ಎಲ್ಲಿಂದ ಬಂತು, ಇದರ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಲೆಕ್ಕಾಚಾರ ನೋಡಿದರೆ ಈ ಬಾರಿಯೂ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಕಾಣುವುದು ಖಚಿತವಾಗಿದೆ.

DA ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ತಜ್ಞರ ಪ್ರಕಾರ, ಜುಲೈ 2023 ರಲ್ಲಿ, ತುಟ್ಟಿಭತ್ಯೆ ಶೇಕಡಾ 4 ಕ್ಕಿಂತ ಕಡಿಮೆ ಹೆಚ್ಚಾಗುವುದಿಲ್ಲ. ಇದರ ಹಿಂದಿರುವ ತರ್ಕವೆಂದರೆ ಬೆಲೆ ಸೂಚ್ಯಂಕ ಅನುಪಾತದಲ್ಲಿ ತೋರಿದ ಚಲನೆಯಿಂದಾಗಿ, ಡಿಎ ಅಂಕಿಅಂಶ ಶೇಕಡಾ 46 ಅನ್ನು ದಾಟಿದೆ. ಜೂನ್‌ನಲ್ಲಿ ಸೂಚ್ಯಂಕದ ಸಂಖ್ಯೆ 136.4 ಪಾಯಿಂಟ್‌ಗಳಷ್ಟಿತ್ತು. ಇದರ ಆಧಾರದಲ್ಲಿ ಲೆಕ್ಕಾಚಾರ ನೋಡಿದರೆ ಡಿಎ ಸ್ಕೋರ್ 46.24ಕ್ಕೆ ತಲುಪಿದೆ. ಅಂದರೆ ಡಿಎಯಲ್ಲಿ ಒಟ್ಟು ಶೇ.4ರಷ್ಟು ಹೆಚ್ಚಳವಾಗಲಿದೆ. ಏಕೆಂದರೆ, DA ಅನ್ನು ರೌಂಡ್ ಫಿಗರ್‌ನಲ್ಲಿ ನೀಡಲಾಗುತ್ತದೆ ಮತ್ತು ಅದು 0.51 ಕ್ಕಿಂತ ಕಡಿಮೆಯಿದ್ದರೆ ಅದನ್ನು 46 ಪ್ರತಿಶತ ಎಂದು ಪರಿಗಣಿಸಲಾಗುತ್ತದೆ.

ಈಗ ಈ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳಿ
ಡಿಸೆಂಬರ್ 2023 ರಲ್ಲಿ ಸೂಚ್ಯಂಕ ಸಂಖ್ಯೆಯು 132.3 ಪಾಯಿಂಟ್‌ಗಳಾಗಿದ್ದು, ಒಟ್ಟು ಡಿಎ ಸ್ಕೋರ್ 42.37 ಪ್ರತಿಶತವಾಗಿದೆ. ಇದರ ನಂತರ, ಜನವರಿಯಲ್ಲಿ ಸೂಚ್ಯಂಕವು 132.8 ತಲುಪಿತು ಮತ್ತು ಡಿಎ ಸ್ಕೋರ್ 43.08 ಕ್ಕೆ ಏರಿಕೆಯಾಗಿದೆ. ಅಂತೆಯೇ, ಪ್ರತಿ ತಿಂಗಳ ಈ ಅಂಕಿ ಅಂಶವನ್ನು ನಿರ್ಧರಿಸಲಾಗುತ್ತದೆ. ಕೆಳಗಿನ ಲೆಕ್ಕಾಚಾರವನ್ನು ನೋಡಿ

ತಿಂಗಳ                  AICPI ಸೂಚ್ಯಂಕ          DA % ಹೆಚ್ಚಳ
ಜನವರಿ-2023             132.8                    43.08
ಫೆಬ್ರವರಿ-2023            132.7                    43.79
ಮಾರ್ಚ್-2023            133.3                   44.46
ಏಪ್ರಿಲ್-2023              134.2                   45.06
ಮೇ-2023                  134.7                    45.58
ಜೂನ್-2023               136.4                   46.24

46 ರಷ್ಟು ತುಟ್ಟಿ ಭತ್ಯೆ ಗ್ಯಾರಂಟಿ!
ನಾವು ಮೇಲೆ ನೀಡಿರುವ ಲೆಕ್ಕಾಚಾರವನ್ನು ನೋಡಿದರೆ, ಮತ್ತೊಮ್ಮೆ 7 ನೇ ವೇತನ ಆಯೋಗದ ಅಡಿಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರಿಂದ ತುಟ್ಟಿ ಭತ್ಯೆ ಶೇ.46ಕ್ಕೆ ಏರಿಕೆಯಾಗಲಿದೆ. ಇದು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಆದರೆ, ಅದರ ಘೋಷಣೆಗಾಗಿ ನಾವು ಸ್ವಲ್ಪ ಕಾಯಬೇಕಾಗಿದೆ. ಇದನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಘೋಷಿಸಬಹುದು. ಜುಲೈನಿಂದ ಘೋಷಣೆಯಾಗುವವರೆಗೆ ಕೇಂದ್ರ ನೌಕರರಿಗೆ ಬಾಕಿ (ಡಿಎ ಬಾಕಿ) ನೀಡಲಾಗುವುದು.

ಇದನ್ನೂ ಓದಿ-ಮನೆಯ ಟೆರೇಸ್ ನಿಂದ ಈ ಉದ್ಯಮಗಳನ್ನು ಆರಂಭಿಸಿ ನೀವು ಸಾಕಷ್ಟು ಆದಾಯ ಗಳಿಕೆ ಮಾಡಬಹುದು!

ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ?
1. ಉದ್ಯೋಗಿಯ ಮೂಲ ವೇತನ 18,000 ರೂ
2. ಹೊಸ ತುಟ್ಟಿಭತ್ಯೆ (46%) ರೂ.8280/ತಿಂಗಳು
3. ಇಲ್ಲಿಯವರೆಗಿನ ತುಟ್ಟಿಭತ್ಯೆ (42%) ರೂ.7560/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಿದೆ 8280-7560= ರೂ 720/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12 = 8640 ರೂ

ಇದನ್ನೂ ಓದಿ-ಕೇವಲ 50 ಸಾವಿರ ರೂ. ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಿ, ಲಕ್ಷಾಂತರ ರೂಪಾಯಿ ಸಂಪಾದಿಸಿ!

ರೂ.56900 ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ 56,900 ರೂ
2. ಹೊಸ ತುಟ್ಟಿಭತ್ಯೆ (46%) ರೂ 26,174/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (42%) ರೂ 23,898/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಾಗಿದೆ 26,174-23,898= ರೂ 2276/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 2276X12 = 27312 ರೂ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News