ನವದೆಹಲಿ: ಹಲವು ಬಾರಿ ವಿವಿಧ ಕಾರಣಾಂತರದಿಂದ ನೌಕರಿಯಿಂದ ಜನ ಬೇಸತ್ತು ಹೋಗಿರುತ್ತಾರೆ ಮತ್ತು ಸ್ವಂತ ವ್ಯಾಪಾರ ಆರಂಭಿಸಲು ಅವರ ಬಳಿ ಬ್ಯಾಂಕ್ ನಲ್ಲಿ 10 ರಿಂದ 15 ಲಕ್ಷ ರೂ.ಗಳ ನಿಧಿ ಕೂಡ ಇರುತ್ತದೆ ಮತ್ತು ಅದರಿಂದ ಬಡ್ಡಿ ರೂಪದಲ್ಲಿ ಅತ್ಯಲ್ಪ ಆದಾಯ ಬರುತ್ತಿರುತ್ತದೆ. ಪರಿಕಲ್ಪನೆಯ ಕೊರೆತೆಯ ಕಾರಣ ಅವರಿಗೆ ಧೈರ್ಯ ಸಾಲುವುದಿಲ್ಲ. ಇದಕ್ಕೆ ಕಾರಣ ಎಂದರೆ ಈ ಹಣವನ್ನು ಸ್ಟಾರ್ಟ್ಅಪ್ನಲ್ಲಿ ಹೇಗೆ ಹೂಡಿಕೆ ಮಾಡಬೇಕೆಂದು ಅವರಿಗೆ ತಿಳಿದಿರುವುದಿಲ್ಲ. ಹೆಚ್ಚಿನ ಜನರಲ್ಲಿ ಈ ಸಮಸ್ಯೆ ಮುಂದುವರಿದಿದೆ. ನೀವು ಸರಿಯಾದ ಸಮಯದಲ್ಲಿ ಸರಿಯಾದ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಬಾಕಿ ಉಳಿದಿರುವ ಬ್ಯಾಂಕ್ ಬ್ಯಾಲೆನ್ಸ್ ಗಮನಾರ್ಹವಾಗಿ ಹೆಚ್ಚಾಗಬಹುದು. ನೀವು ಹೂಡಿಕೆಗಾಗಿ ಪರಿಪೂರ್ಣವಾದ ವ್ಯಾಪಾರ ಕಲ್ಪನೆಯನ್ನು ಸಹ ಹುಡುಕುತ್ತಿದ್ದರೆ, ಇಂದು ನಾವು ನಿಮಗೆ ಒಳ್ಳೆಯ ಹಣವನ್ನು ಗಳಿಸುವ ಕೆಲವು ವ್ಯವಹಾರ ಕಲ್ಪನೆಗಳ ಬಗ್ಗೆ ಹೇಳಲಿದ್ದೇವೆ.(Business News In Kannada)
ಆಹಾರ ಪ್ಯಾಕೇಜಿಂಗ್ ಉದ್ಯಮ
ಬದಲಾಗುತ್ತಿರುವ ಜನರ ಆಹಾರ ಪದ್ಧತಿ ಮತ್ತು ವೇಗವಾಗಿ ಬೆಳೆಯುತ್ತಿರುವ ಆಹಾರ ವ್ಯಾಪಾರದಿಂದಾಗಿ ನಮ್ಮ ದೇಶದಲ್ಲಿ ಆಹಾರ ಪದಾರ್ಥಗಳ ಬಳಕೆ ವೇಗವಾಗಿ ಹೆಚ್ಚುತ್ತಿದೆ, ಇದಕ್ಕೆ ಕಾರಣ ಎಂದರೆ ಜನರ ಬದಲಾಗುತಿರುವ ಈಟಿಂಗ್ ಹ್ಯಾಬಿಟ್ಸ್. ಇಂತಹ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಸಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ತಲುಪಿಸುವುದು ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸುವಲ್ಲಿ ಆಹಾರ ಪ್ಯಾಕೇಜಿಂಗ್ ಉದ್ಯಮವು ಪ್ರಮುಖ ಕೊಡುಗೆಯನ್ನು ಹೊಂದಿದೆ ಮತ್ತು ಆದರೆ ಬೇಡಿಕೆಯು ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂದರೆ ನೀವು ಅದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ. ಹೂಡಿಕೆಗಾಗಿ ನೀವು ದೊಡ್ಡ ಮೊತ್ತವನ್ನು ಹೊಂದಿದ್ದರೆ, ನೀವು ಅದರ ಹೆಚ್ಚಿನ ಭಾಗವನ್ನು ಆಹಾರ ಪ್ಯಾಕೇಜಿಂಗ್ ಉದ್ಯಮದಲ್ಲಿ ಹೂಡಿಕೆ ಮಾಡಬಹುದು ಮತ್ತು ಅದರಿಂದ ಉತ್ತಮ ಮೊತ್ತವನ್ನು ಗಳಿಸಬಹುದು.
ವಿದ್ಯುತ್ ವಾಹನ ಚಾರ್ಜಿಂಗ್ ಸ್ಟೇಷನ್
ನಮ್ಮ ದೇಶದಲ್ಲಿ, ಜನರು ಇನ್ನೂ ವೇಗವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿಲ್ಲ, ಆದರೆ ಮೆಟ್ರೋ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಯಶಸ್ವಿಯಾಗಲು, ಭಾರತೀಯ ರಸ್ತೆಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳನ್ನು ಹೊಂದಿರುವುದು ಬಹಳ ಮುಖ್ಯ. ಅಸ್ತಿತ್ವದಲ್ಲಿರುವ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆಯಿಂದಾಗಿ, ಜನರು ಇದೀಗ ಎಲೆಕ್ಟ್ರಿಕ್ ವಾಹನಗಳನ್ನು ಇನ್ನೂ ನಂಬುತ್ತಿಲ್ಲ, ಆದರೆ ನೀವು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳಲ್ಲಿ ಹೂಡಿಕೆ ಮಾಡಿದರೆ ಮತ್ತು ನಿಮ್ಮಂತಹ ಇತರ ಹೂಡಿಕೆದಾರರು ಈ ಕ್ಷೇತ್ರಕ್ಕೆ ಕಾಲಿಟ್ಟರೆ, ಮುಂದಿನ 5 ವರ್ಷಗಳಲ್ಲಿ ಈ ವ್ಯವಹಾರವು ಬೆಳೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಮತ್ತು ಜನರಿಗೆ ಇದು ಆದಾಯದ ಒಂದು ಮಾರ್ಗವಾಗುತ್ತದೆ ಎಂಬುದಂತೂ ನಿಜ.
ನೀರಿನ ಸಂಸ್ಕರಣಾ ಘಟಕ
ಇಂದಿನ ದಿನಗಳಲ್ಲಿ ನೀರಿನ ಪರಿಶುದ್ಧತೆ ಕಾಪಾಡುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಒಂದು ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ, ಇದರಿಂದ ನೀವು ಸಾಕಷ್ಟು ಹಣವನ್ನು ಗಳಿಸಬಹುದು. ನಿಮ್ಮ ಬಳಿ ಹಣವಿದ್ದರೆ ಮತ್ತು ನೀವು ನೀರಿನ ಶುದ್ಧೀಕರಣದ ವ್ಯವಹಾರಕ್ಕೆ ಬಂದರೆ, ಈ ವ್ಯವಹಾರವು ಮುಂದಿನ ಎರಡರಿಂದ ಐದು ವರ್ಷಗಳಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡಲಿದೆ.
ಇದನ್ನೂ ಓದಿ-ನಿಮ್ಮ 1000 ರೂ.ಗಳನ್ನು ಈ ಫಾರ್ಮ್ಯೂಲಾ ಬಳಸಿ ರಾಕೆಟ್ ವೇಗದಲ್ಲಿ 5.32 ಲಕ್ಷ ರೂ.ಗಳಾಗಿಸಿ!
ಆರೋಗ್ಯ ರಕ್ಷಣಾ ವಲಯ
ಬದಲಾಗುತ್ತಿರುವ ಜನರ ಜೀವನಶೈಲಿಯಿಂದಾಗಿ, ಜನರು ಮೊದಲಿಗಿಂತ ಇದೀಗ ಹೆಚ್ಚು ರೋಗಗಳ ಅಪಾಯದಲ್ಲಿದ್ದಾರೆ. ಆರೋಗ್ಯ ರಕ್ಷಣಾ ವಲಯವು ಈ ಬೆದರಿಕೆಯನ್ನು ಎದುರಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ, ಆದರೆ ಚಿಕಿತ್ಸೆಯು ತುಂಬಾ ದುಬಾರಿಯಾಗಿರುವುದರಿಂದ ಜನರು ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜನರ ಕಲ್ಯಾಣಕ್ಕಾಗಿ ಮತ್ತು ನಿಮ್ಮ ಆದಾಯಕ್ಕಾಗಿ ನೀವು ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ, ಈ ಕ್ಷೇತ್ರವು ಎರಡು ಮೂರು ವರ್ಷಗಳಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡಲು ಪ್ರಾರಂಭಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನು ನೀಡುತ್ತದೆ.
ಇದನ್ನೂ ಓದಿ -ಚುನಾವಣೆ ಮುಗಿದ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ, ಶೇ.49 ಕ್ಕೇರಿದ ತುಟ್ಟಿಭತ್ಯೆ!
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಲೇಖನ ಕೇವಲ ನಿಮ್ಮ ಮಾಹಿತಿಯಾಗಿ ಮಾತ್ರ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ನಿಮಗೆ ಯಾವುದೇ ರೀತಿಯ ಹೂಡಿಕೆಯ ಸಲಹೆಯನ್ನು ನೀಡುವುದಿಲ್ಲ ಮತ್ತು ಅದರಿಂದ ಸಿಗುವ ಲಾಭ ನಷ್ಟದ ಹೊಣೆಯನ್ನು ಕೂಡ ಹೊರುವುದಿಲ್ಲ. ಹಣ ಹೂಡಿಕೆ ಮಾಡುವ ಮುನ್ನ ಒಮ್ಮೆ ವಿಷಯ ತಜ್ಞರನ್ನು ಸಂಪರ್ಕಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳಲು ಸೂಚಿಸಲಾಗುತ್ತದೆ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI