ಸರ್ಕಾರಿ ನೌಕರರಿಗೆ ಬಂಪರ್ ಲಾಭ, 56,900 ಬೇಸಿಕ್ ಸ್ಯಾಲರಿ ಇರುವವರ ಡಿಎ 3,14,088 ರೂ.ಗಳಿಗೆ ತಲುಪಲಿದೆ!

7th Pay Commission: ಮುಂಬರುವ ತಿಂಗಳು ಕೇಂದ್ರ ಉದ್ಯೋಗಿಗಳಿಗೆ ಬಂಬಾಟಾಗಿರಲಿದೆ. ನವೆಂಬರ್ ನಿಂದ ಅವರ ಜೇಬಿಗೆ ಹೆಚ್ಚು ಹಣ ಬರಲಿದೆ. ಪರಿಷ್ಕೃತ ತುಟ್ಟಿಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದೊಂದಿಗೆ ಬರುವ ಸಾಧ್ಯತೆ ಇದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಅವರ ಸಂಬಳದಲ್ಲಿ ದೊಡ್ಡ ಹೆಚ್ಚಳ ಉಂಟಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. Business News In kannada  

Written by - Nitin Tabib | Last Updated : Oct 12, 2023, 09:53 PM IST
  • 4% ರಷ್ಟು ಡಿಎ ಹೆಚ್ಚಳದ ಬಳಿಕ, ನೌಕರರ ವೇತನವು ವಿವಿಧ ವರ್ಗಗಳ ಪ್ರಕಾರ ಹೆಚ್ಚಾಗಲಿದೆ.
  • ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ.
  • ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಪ್ರಸ್ತುತ ಶೇಕಡಾ 42ರ ದರದಲ್ಲಿ ಲಭ್ಯವಿದೆ.
ಸರ್ಕಾರಿ ನೌಕರರಿಗೆ ಬಂಪರ್ ಲಾಭ, 56,900 ಬೇಸಿಕ್ ಸ್ಯಾಲರಿ ಇರುವವರ ಡಿಎ 3,14,088 ರೂ.ಗಳಿಗೆ ತಲುಪಲಿದೆ! title=

DA Hike: ಮುಂಬರುವ ತಿಂಗಳು ಕೇಂದ್ರ ಉದ್ಯೋಗಿಗಳಿಗೆ ಬಂಬಾಟಾಗಿರಲಿದೆ. ನವೆಂಬರ್ ನಿಂದ ಅವರ ಜೇಬಿಗೆ ಹೆಚ್ಚು ಹಣ ಬರಲಿದೆ. ಪರಿಷ್ಕೃತ ತುಟ್ಟಿಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದೊಂದಿಗೆ ಬರುವ ಸಾಧ್ಯತೆ ಇದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಅವರ ಸಂಬಳದಲ್ಲಿ ದೊಡ್ಡ ಹೆಚ್ಚಳ ಉಂಟಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. Business News In Kannada

ಸಂಬಳದಲ್ಲಿ ಭಾರಿ ಏರಿಕೆ
ಜುಲೈ 2023ರ ತುಟ್ಟಿ ಭತ್ಯೆ (ಡಿಎ ಹೆಚ್ಚಳ) ಹೆಚ್ಚಳಕ್ಕಾಗಿ ಕೇಂದ್ರ ನೌಕರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶೇ.4ರಷ್ಟು ಡಿಎ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಡಿಎ ಹೆಚ್ಚಳದ ನಂತರ ಕೇಂದ್ರ ನೌಕರರ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ. ಇದುವರೆಗೆ ನೌಕರರು ತುಟ್ಟಿಭತ್ಯೆಯನ್ನು ಶೇಕಡಾ 42 ರ ದರದಲ್ಲಿ ಪಡೆಯುತ್ತಿದ್ದಾರೆ. ಆದರೆ, ಅದಕ್ಕೆ ಶೇ.4ರಷ್ಟು ಹೆಚ್ಚಾದರೆ, ಡಿಎ ಶೇ.46ಕ್ಕೆ ಏರಿಕೆಯಾಗಲಿದೆ. ಮೂರು ತಿಂಗಳ ಬಾಕಿ ವೇತನವೂ ಕೂಡ ಅದರೊಂದಿಗೆ ಬರುವ ಸಾಧ್ಯತೆ ಇದೆ.

4% ಹೆಚ್ಚಾದರೆ ವೇತನ ಎಷ್ಟು ಹೆಚ್ಚಾಗಲಿದೆ?
4% ರಷ್ಟು ಡಿಎ ಹೆಚ್ಚಳದ ಬಳಿಕ, ನೌಕರರ ವೇತನವು ವಿವಿಧ ವರ್ಗಗಳ ಪ್ರಕಾರ ಹೆಚ್ಚಾಗಲಿದೆ. ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಪ್ರಸ್ತುತ ಶೇಕಡಾ 42ರ ದರದಲ್ಲಿ ಲಭ್ಯವಿದೆ. ಡಿಎ ಹೆಚ್ಚಳದಿಂದ ವೇತನವೂ ಕೂಡ ನೇರವಾಗಿ ಹೆಚ್ಚಾಗಲಿದೆ. ಆದರೆ, ನೇರವಾಗಿ ಶೇ.4ರಷ್ಟು ಡಿಎ ಹೆಚ್ಚಾದರೆ ಎಷ್ಟು ವೇತನ ಸಿಗಲಿದೆ ಎಂಬುದನ್ನು ನೀವು ಈ ಕೆಳಗೆ ನೀಡಲಾಗಿರುವ ಲೆಕ್ಕಾಚಾರದಿಂದ ಪರಿಶೀಲಿಸಬಹುದು.

ಮೂಲ 56,900 ಸಾವಿರದ ಮೇಲೆ ಹಣ ಎಷ್ಟು ಹೆಚ್ಚಾಗಲಿದೆ?
ನಮ್ಮ ಸಹಯೋಗಿ ವೆಬ್ಸೈಟ್ ಜೀ ಬಿಸಿನೆಸ್ ಗೆ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಜುಲೈ 2023 ಕ್ಕೆ ತುಟ್ಟಿ ಭತ್ಯೆಯಲ್ಲಿ ಹೆಚ್ಚಳವಾಗುವುದು ಬಹುತೇಕ ಹಚ್ಚಿತವಾಗಿದೆ. ಜೂನ್ ವೇಳೆಗೆ ಎಐಸಿಪಿಐ ಸೂಚ್ಯಂಕ 136.4 ತಲುಪಿದೆ. ಅದರ ಲೆಕ್ಕಾಚಾರದ ಆಧಾರದ ಮೇಲೆ, DA ಯಲ್ಲಿನ ಒಟ್ಟು ಹೆಚ್ಚಳವು 4 ಪ್ರತಿಶತ ಹೆಚ್ಚಳವಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಡಿಎ ಶೇ 46ಕ್ಕೆ ಏರಿಕೆಯಾಗಲಿದೆ. ಈಗ ನಾವು 56,900 ರೂಗಳ ಮೂಲದಲ್ಲಿ ಡಿಎಯನ್ನು ಲೆಕ್ಕ ಹಾಕಿದರೆ, ಕೇಂದ್ರ ನೌಕರರ ಖಾತೆಯಲ್ಲಿ ವೇತನದೊಂದಿಗೆ ಒಟ್ಟು ತುಟ್ಟಿ ಭತ್ಯೆ 26,174 ರೂ. ಹೆಚ್ಚಾಗಲಿದೆ. ಅಂದರೆ, 56,900*46/100=26,174 ರೂ. ವಾರ್ಷಿಕ ಆಧಾರದಲ್ಲಿ ನೋಡುವುದಾದರೆ, ರೂ 26,174*12= ರೂ 314,088 ಆಗುತ್ತದೆ. ಆದಾಗ್ಯೂ, ತುಟ್ಟಿಭತ್ಯೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಆದ್ದರಿಂದ, ಈ ವಾರ್ಷಿಕ ಲೆಕ್ಕಾಚಾರವನ್ನು ಅಂದಾಜುಗಾಗಿ ಮಾತ್ರ ಲೆಕ್ಕಹಾಕಲಾಗಿದೆ.

ಇದನ್ನೂ ನೋಡಿ-

1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ
ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳದಿಂದ 50 ಲಕ್ಷಕ್ಕೂ ಹೆಚ್ಚು ಖಾಯಂ ಕೇಂದ್ರ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಅದರ ಪ್ರಯೋಜನ ಪಡೆಯಲಿದ್ದಾರೆ. ಇದು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಅಕ್ಟೋಬರ್ ಅಂತ್ಯದೊಳಗೆ ಅದರ ಘೋಷಣೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ನಂತರ, ಪಾವತಿಯೊಂದಿಗೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಡಿಎ ಬಾಕಿಯನ್ನು ಸಹ ಸೇರಿಸಲಾಗುತ್ತದೆ. ಈ ಹಿಂದೆ ಮಾರ್ಚ್ 2023 ರಲ್ಲಿ ಸಹ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿತ್ತು.

ಇದನ್ನೂ ಓದಿ-ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ ಈ 4 ಬ್ಯಾಂಕ್ ಗಳು! ಇಲ್ಲಿದೆ ವರದಿ

ಜುಲೈ ಮತ್ತು ಡಿಸೆಂಬರ್ ನಡುವೆ ಎಷ್ಟು ಲಾಭ ಇರಲಿದೆ?
ಜುಲೈನಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಮರುಸ್ಥಾಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ ಮೊದಲು ಡಿಎ ಲೆಕ್ಕ ಹಾಕಿದರೆ...
ಉದ್ಯೋಗಿಯ ಮೂಲ ವೇತನ - ರೂ 18000 (ಕನಿಷ್ಠ ಮೂಲ ವೇತನ)
ತುಟ್ಟಿಭತ್ಯೆ 46 ಶೇಕಡಾ (ಅಂದಾಜು ಹೆಚ್ಚಳ) - ರೂ 8280
ತುಟ್ಟಿಭತ್ಯೆ 42% (ಜುಲೈ ಮೊದಲು) - ರೂ 7560
ಒಟ್ಟು ಡಿಎ ಹೆಚ್ಚಳ - 8280-7560= ರೂ 720
ವಾರ್ಷಿಕ ವೇತನ ಹೆಚ್ಚಳ - 720X12= ರೂ 8,640

ಇದನ್ನೂ ಓದಿ-ಅಗ್ಗದ ಮದ್ಯ ವಿಷಯದಲ್ಲಿ ಯಾವ ರಾಜ್ಯ ನಂಬರ್ 1 ಗೊತ್ತಾ? ಕರ್ನಾಟಕದಲ್ಲಿ ಎಷ್ಟು ತೆರಿಗೆ ಬೀಳುತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News