Budget 2021: ಕೇಂದ್ರ ವಿತ್ತ ಸಚಿವಾಲಯದಲ್ಲಿ ಇಂದು ಹಲ್ವಾ ಸೆರೆಮನಿ ನಡೆಸಲಾಗುತ್ತದೆ. 23 ಜನವರಿ 3.30 ರ ಸುಮಾರಿಗೆ ವಿತ್ತ ಸಚಿವಾಲಯದಲ್ಲಿ ಹಲ್ವಾ ವಿತರಣಾ ಸಮಾರಂಭದ ಜೊತೆಗೆ ಬಜೆಟ್ ಪೆಪೆರ್ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ ಈ ಬಾರಿ ಕೊವಿಡ್ 19 ಕಾರಣ ಬಜೆಟ್ ಡಾಕ್ಯುಮೆಂಟ್ ಮುದ್ರಣ ಪ್ರಕ್ರಿಯೆ ನಡೆಸಲಾಗುತ್ತಿಲ್ಲ. ಈ ಬಾರಿಯ ಬಜೆಟ್ ಆನ್ಲೈನ್ ನಲ್ಲಿ ಮಂಡಿಸಲಾಗುತ್ತಿದೆ.
Budget 2021: ಪ್ರತಿ ವರ್ಷ ಜನವರಿ 23ಕ್ಕೆ ಹಲ್ವಾ ವಿತರಣಾ ಸಮಾರಂಭದ ಜೊತೆಗೆ ಬಜೆಟ್ ಪೇಪರ್ ಮುದ್ರಣಾ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಈ ಬಾರಿ ಫೆಬ್ರುವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ತಮ್ಮ ಮೂರನೇ ಬಜೆಟ್ ಮಂಡಿಸುತ್ತಿದ್ದಾರೆ. ಪ್ರತಿವರ್ಷ ಬಜೆಟ್ ಪೇಪರ್ ಮುದ್ರಣಕ್ಕೂ ಮುನ್ನ ಕೇಂದ್ರ ವಿತ್ತ ಸಚಿವಾಲಯದಲ್ಲಿ ಹಲ್ವಾ ತಯಾರಿಸಿ ವಿತರಿಸಲಾಗುತ್ತದೆ. ಇದರೊಂದಿಗೆ ಬಜೆಟ್ ಪೇಪರ್ ಮುದ್ರಣಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ನಾರ್ತ್ ಬ್ಲಾಕ್ ನಲ್ಲಿದ್ದುಕೊಂಡು ಈ ಕೆಲಸ ಪೂರೈಸುತ್ತಾರೆ. ಬಜೆಟ್ ಮಂಡನೆಯಾಗುವವರೆಗೆ ಅವರು ಇಲ್ಲಿಂದ ಕದಲುವ ಹಾಗಿಲ್ಲ. ಆದರೆ ಈ ಬಾರಿ ಕೊರೊನಾ ಕಾರಣ ಇದರಲ್ಲಿ ತುಂಬಾ ಕಡಿಮೆ ಜನ ಭಾಗವಹಿಸಿದ್ದರು.
80 ಜನರು ಸಚಿವಾಲಯದಲ್ಲಿಯೇ ಬಂಧಿಯಾಗಲಿದ್ದಾರೆ.
Budget-2021: ಪ್ರತಿವರ್ಷ ವಿತ್ತ ಸಚಿವಾಲಯದ ಕೆಲ ಆಯ್ದ ಅಧಿಕಾರಿಗಳು ಬಜೆಟ್ ಪೇಪರ್ ಸಿದ್ಧಪಡಿಸುತ್ತಾರೆ. ಈ ಸಂದರ್ಭದಲ್ಲಿ ಬಜೆಟ್ ಸಿದ್ಧಗೊಳ್ಳುವ ಕಂಪ್ಯೂಟರ್ ಅನ್ನು ನೆಟ್ವರ್ಕ್ ಕಂಪ್ಯೂಟರ್ ಗಳಿಂದ ಬೇರ್ಪಡಿಸಲಾಗುತ್ತದೆ. ಬಜೆಟ್ ಮಾಹಿತಿ ಸೋರಿಕೆಯಾಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ. ಸುಮಾರು 80 ಜನರು ಹಗಲು-ರಾತ್ರಿ ಬಜೆಟ್ ಪೇಪರ್ ಮುದ್ರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಈ ಬಾರಿ ಟೈಪಿಂಗ್ ಹಾಗೂ ಅಪ್ಲೋಡಿಂಗ್ ಕುರಿತು ಹೇಳಲಾಗುತ್ತಿದೆ. ಈ ವೇಳೆ ಅವರಿಗೆ 10 ದಿನಗಳ ಕಾಲ ಮನೆಗೆ ಹೋಗಲು ಅವಕಾಶ ಇರುವುದಿಲ್ಲ. ಮುದ್ರಣದ ಕೊನೆಯ ದಿನಗಳಲ್ಲಂತೂ ಇವರಿಗೆ ಮನೆ ಸದಸ್ಯರ ಜೊತೆಗೆ ಸಂಪರ್ಕಿಸುವ ಅವಕಾಶ ಕೂಡ ನೀಡಲಾಗುವುದಿಲ್ಲ. ಕೇವಲ ತುರ್ತುಪರಿಸ್ಥಿಯ ಸಂದರ್ಭದಲ್ಲಿ ಮಾತ್ರ ಸಚಿವಾಲಯದ ಲ್ಯಾಂಡ್ ಲೈನ್ ನಂಬರ್ ಮೂಲಕ ಮಾತನಾಡಲು ಅವಕಾಶ ನೀಡಲಾಗುತ್ತದೆ. ಆದರೆ, ಅವರ ಮಾತುಕತೆಗಳ ಮೇಲೆ ಕಣ್ಣಿನಲಾಗುತ್ತದೆ.
ಇದನ್ನು ಓದಿ- RBI Latest Update: ಸ್ಥಗಿತಗೊಳ್ಳಲಿವೆಯೇ ರೂ.100 ಮುಖಬೆಲೆಯ ಹಳೆ ನೋಟುಗಳು...! RBI ಹೇಳಿದ್ದೇನು?
ಹಲ್ವಾ ಸೆರೆಮನಿ ಏನು?
Budget-2021: ಪ್ರತಿ ವರ್ಷ ಬಜೆಟ್ ಗೆ ಅಂತಿಮ ರೂಪ ನೀಡುವ ಕೆಲ ದಿನಗಳು ಮುಂಚಿತವಾಗಿ ನಾರ್ತ್ ಬ್ಲಾಕ್ ನಲ್ಲಿ ವಿತ್ತ ಸಚಿವಾಲಯದಲ್ಲಿ ದೊಡ್ಡ ಗಾತ್ರದ ಬಾಣಲೆಯಲ್ಲಿ ಹಲ್ವಾ ಸಿದ್ಧಪಡಿಸಲಾಗುತ್ತದೆ. ಈ ಹಲ್ವಾ ವಿತರಣೆ ಸಮಾರಂಭದಲ್ಲಿ ಕೇಂದ್ರ ವಿತ್ತ ಸಚಿವರು ಕೂಡ ಪಾಲ್ಗೊಳ್ಳುತ್ತಾರೆ. ಭಾರತೀಯ ಪರಂಪರೆಯಲ್ಲಿ ಯಾವುದಾದರೊಂದು ಶುಭ ಕಾರ್ಯವನ್ನು ಸಿಹಿ ಹಂಚುವ ಮೂಲಕ ಆರಂಭಿಸಲಾಗುತ್ತದೆ. ವಿತ್ತ ಸಚಿವರು ಖುದ್ದಾಗಿ ಈ ಸಂದರ್ಭದಲ್ಲಿ ವಿತ್ತ ಸಚಿವಾಲಯದ ಸಿಬ್ಬಂದಿ, ಅಧಿಕಾರಿಗಳಿಗೆ ಹಲ್ವಾ ಹಂಚುವ ಮೂಲಕ ಬಜೆಟ್ ಪೇಪರ್ ಮುದ್ರಣ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.
ಇದನ್ನುಓದಿ- Low Cost Housing Tips: ಕನಸಿನ ಮನೆ ನಿರ್ಮಾಣ ವೆಚ್ಚ ತಗ್ಗಿಸಲು ಇಲ್ಲಿವೆ ಟಿಪ್ಸ್
ಬೇಸ್ ಮೆಂಟ್ ನಲ್ಲಿ ಮುದ್ರಣ ಕಾರ್ಯ ನಡೆಯುತ್ತದೆ
Budget-2021: ಬಜೆಟ್ ಪೇಪರ್ ಮುದ್ರಣ ಕಾರ್ಯ ಸಚಿವಾಲಯದ ಬೇಸ್ ಮೆಂಟ್ ನಲ್ಲಿ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. 1980 ರಿಂದ ಸಚಿವಾಲಯದ ಬೇಸ್ ಮೆಂಟ್ ನಲ್ಲಿ ಬಜೆಟ್ ಪೇಪರ್ ಮುದ್ರಣ ಕಾರ್ಯ ನಡೆಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನು ಓದಿ- Amazon-Flipkart ಮೇಲೆ Shopping ಮಾಡುವ ವೇಳೆ ಎಚ್ಚರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.