BSNL ನಿಂದ ಕೊಡುಗೆಗಳ ಸುರಿಮಳೆ, ಕೇವಲ 56 ರೂ.ಗಳಲ್ಲಿ 10 GB ಉಚಿತ ಇಂಟರ್ನೆಟ್, ಇನ್ನೂ ಹಲವು Benefits

BSNL Recharge Plans - BSNL ಇತ್ತೀಚೆಗಷ್ಟೇ ತನ್ನ 100 ರೂ.ಗಳಿಗಿಂತ ಕಣಿಮೆ ಬೆಲೆ ಹೊಂದಿರುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮತ್ತಷ್ಟು ಕಡಿಮೆ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ರೋಮಿಂಗ್ ಮತ್ತು ಕರೆ ಮಾಡುವ ಪ್ರಯೋಜನಗಳನ್ನು ಹೊಂದಿರುವ ಕೆಲವು ಯೋಜನೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಪ್ರಯತ್ನಿಸಿದೆ.  ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

Written by - Nitin Tabib | Last Updated : Oct 18, 2021, 06:57 PM IST
  • BSNL ರಿಚಾರ್ಜ್ ಪ್ಲಾನ್ ಗಳ ಬೆಲೆಯಲ್ಲಿ ಇಳಿಕೆ.
  • 56ರೂ.ಗಳಲ್ಲಿ 10 ಜಿಬಿ ಡೇಟಾ ಉಚಿತ.
  • ಇಂಟರ್ನ್ಯಾಷನಲ್ ರೋಮಿಂಗ್ ಪ್ಲಾನ್ ಕುರಿತು ಕೂಡ ಇಲ್ಲಿ ತಿಳಿಯಿರಿ.
BSNL ನಿಂದ ಕೊಡುಗೆಗಳ ಸುರಿಮಳೆ, ಕೇವಲ 56 ರೂ.ಗಳಲ್ಲಿ 10 GB ಉಚಿತ ಇಂಟರ್ನೆಟ್, ಇನ್ನೂ ಹಲವು Benefits title=
BSNL Prepaid Recharge plans (File Photo)

BSNL Prepaid Recharge Plans - ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಕೆಲವು 100 ರೂ.ಗಳಿಗಿಂತ ಕಡಿಮೆ ಬೆಲೆಯ (BSNL Plans Under Rs 100) ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಮತ್ತಷ್ಟು ಇಳಿಸಿದೆ. ಇದರೊಂದಿಗೆ, BSNL ಹಲವು ಹೊಸ ಕೊಡುಗೆಗಳನ್ನು ಮತ್ತು ಯೋಜನೆಗಳನ್ನು ಸಹ ಹೊತ್ತು ತಂದಿದೆ. ಈ ಯೋಜನೆಗಳಿಗೆ ಬಳಕೆದಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತಿದೆ.

ಕೇವಲ 56 ರೂ.ಗಳಲ್ಲಿ 10 ಜಿಬಿ ಉಚಿತ ಇಂಟರ್ನೆಟ್
ಬಿಎಸ್‌ಎನ್‌ಎಲ್‌ನ 57 ರೂ.ಗಳ ಸ್ಪೆಷಲ್ ಟ್ಯಾರಿಫ್ ವೌಚರ್ (STV) ಪ್ಲಾನ್‌ನ ಬೆಲೆಯನ್ನು 56 ರೂ.ಗೆ ಇಳಿಸಲಾಗಿದೆ. ಈ ಯೋಜನೆಯಲ್ಲಿ, BSNL 10GB ಉಚಿತ ಡೇಟಾ ಮತ್ತು ಜಿಂಗ್ ಮ್ಯೂಸಿಕ್ ಆಪ್‌ನ ಚಂದಾದಾರಿಕೆಯನ್ನು ಬಳಕೆದಾರರಿಗೆ ಹತ್ತು ದಿನಗಳವರೆಗೆ ನೀಡುತ್ತದೆ.

ಕೇವಲ 54 ರೂಗಳಲ್ಲಿ ಈ ಕಾಲಿಂಗ್ ಬೆನಿಫಿಟ್ಸ್ ಪಡೆಯಿರಿ
BSNL ತನ್ನ ರೂ. 56 STV (BSNL STV) ಬೆಲೆಯನ್ನು ಕಡಿಮೆ ಮಾಡಿದೆ. ಇದೀಗ ಈಯೋಜನೆಗಾಗಿ, ಗ್ರಾಹಕರು 54 ರೂಪಾಯಿಗಳನ್ನು ಪಾವತಿಸಬೇಕಾಗಲಿದೆ ಮತ್ತು ಪ್ರಯೋಜನಗಳ ಪ್ರಕಾರ, ಎಂಟು ದಿನಗಳವರೆಗೆ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಸ್ಥಳೀಯ ಅಥವಾ ಎಸ್‌ಟಿಡಿ ಕರೆಗಳನ್ನು ಮಾಡಲು 5,600 ಸೆಕೆಂಡುಗಳನ್ನು ಪಡೆಯಲಿದ್ದಾರೆ. 

ಅಂತಾರಾಷ್ಟ್ರೀಯ ರೋಮಿಂಗ್ ಸೌಲಭ್ಯವಿರುವ ಪ್ಲಾನ್ ಗಳು
ರೂ. 58 ಬೆಲೆಯಲ್ಲಿ ಲಭ್ಯವಿರುವ ಈ ಪ್ಲಾನ್ ಇದೀಗ ರೂ. 57 ಕ್ಕೆ ಗ್ರಾಹಕರಿಗೆ ಲಭ್ಯವಿರಲಿದೆ ಇದರಲ್ಲಿ, ಗ್ರಾಹಕರ ಅಂತರಾಷ್ಟ್ರೀಯ ರೋಮಿಂಗ್ ಸೌಲಭ್ಯವನ್ನು 30 ದಿನಗಳವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ-Knowledge News:ರೂಪಾಯಿ ನೋಟಿನ ಈ ವೈಶಿಷ್ಟ್ಯ ನಿಮಗೂ ಗೊತ್ತಿರಲಿಕ್ಕಿಲ್ಲ, ಏಕೆಂದರೆ ಈ ಸಂಗತಿ ತುಂಬಾ ಸಿಕ್ರೆಟ್

ಇದಲ್ಲದೆ ಇನ್ಮುಂದೆ BSNL ಗ್ರಾಹಕರು ತಮ್ಮ ಹಳೆಯ SIM ಕಾರ್ಡ್ ಅನ್ನು ಅಂತಾರಾಷ್ಟ್ರೀಯ ರೋಮಿಂಗ್ SIM ಕಾರ್ಡ್ನೊಂದಿಗೆ ಕೇವಲ 50 ರೂಪಾಯಿಗೆ ಸಕ್ರಿಯಗೊಳಿಸಲು ಸಾಧ್ಯವಾಗಲಿದೆ.  ಈ ರೀತಿಯಾಗಿ ಅವರು ತಮ್ಮ ಸ್ನೇಹಿತ ಅಥವಾ ಸಂಬಂಧಿಕರೊಂದಿಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಮಾತನಾಡಲು ಸಾಧ್ಯವಾಗಲಿದೆ. ಇದನ್ನು ಮಾಡಲು, ಗ್ರಾಹಕರು ರೂ 57 ಅಥವಾ ರೂ 168 ಯೋಜನೆಯನ್ನು ಖರೀದಿಸಬೇಕು. 57 ರೂ. ಗಳ ಪ್ಲಾನ್ 30 ದಿನಗಳು ಮತ್ತು ರೂ.168 ಪ್ಲಾನ್ 90 ದಿನಗಳವರೆಗೆ ಸಿಂಧುತ್ವ ಹೊಂದಿದೆ.

ಇದನ್ನೂ ಓದಿ- WhatsApp New Feature: ಒಂದು ಮೋಜಿನ ಫೀಚರ್ ಬಿಡುಗಡೆ ಮಾಡಲು ವಾಟ್ಸಾಪ್ ಸಿದ್ಧತೆ

ಪ್ರಸ್ತುತ, ರೀಚಾರ್ಜ್ ಯೋಜನೆಗಳ ಈ ಬದಲಾವಣೆಗಳನ್ನು BSNL ಕೇರಳ ವಲಯಕ್ಕೆ ಮಾತ್ರ ಸೀಮಿತಗೊಳಿಸಿದೆ ಮತ್ತು ಇತರ ವಲಯಗಳಲ್ಲಿ ಯಾವಾಗ ಮಾಡಲಾಗುವುದು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಸಂಸ್ಥೆ ಹಂಚಿಕೊಂಡಿಲ್ಲ.

ಇದನ್ನೂ ಓದಿ-T20 World Cup 2021: ನೀವು ಈ ರೀತಿ T20 World Cup Live ಅನ್ನು ಫ್ರೀ ಆಗಿ ವೀಕ್ಷಿಸಬಹುದು, ಒಂದೇ ಕ್ಲಿಕ್‌ನಲ್ಲಿ ವೀಕ್ಷಿಸಿ Ind Vs Pak ಮ್ಯಾಚ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News