Tata Cheapest Car: 1.5 ಲಕ್ಷ ರೂ.ಗೆ ಟಾಟಾದ ಅಗ್ಗದ ಕಾರನ್ನು ಮನೆಗೆ ತನ್ನಿ..!

ಟಾಟಾ ಅಗ್ಗದ ಕಾರು: ಟಾಟಾ ಮೋಟಾರ್ಸ್ ವಿವಿಧ ಬೆಲೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಹಲವು ಮಾದರಿಗಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳಲ್ಲಿ ಅತ್ಯಂತ ಅಗ್ಗದ ಕಾರು ಟಾಟಾ ಟಿಯಾಗೊ. ಕಂಪನಿಯ ಈ ಹ್ಯಾಚ್‌ಬ್ಯಾಕ್‌ನಲ್ಲಿ 5 ಜನರು ಕುಳಿತುಕೊಳ್ಳಬಹುದು.

Written by - Puttaraj K Alur | Last Updated : Mar 6, 2023, 07:25 PM IST
  • 5 ಸೀಟ್ ಸೌಲಭ್ಯ ಹೊಂದಿರುವ ಟಾಟಾ ಟಿಯಾಗೊ ಟಾಟಾದ ಅಗ್ಗದ ಕಾರಾಗಿದೆ
  • ಕೇವಲ 1.5 ಲಕ್ಷ ರೂ. ಖರ್ಚು ಮಾಡಿ ಈ ಕಾರನ್ನು ನೀವು ಮನೆಗೆ ತರಬಹುದು
  • ಕಡಿಮೆ ಡೌನ್‍ಪೇಮೆಂಟ್ ಮಾಡುವ ಮೂಲಕ ನಿಮ್ಮಿಷ್ಟದ EMI ಆಯ್ಕೆ ಮಾಡಬಹುದು
Tata Cheapest Car: 1.5 ಲಕ್ಷ ರೂ.ಗೆ ಟಾಟಾದ ಅಗ್ಗದ ಕಾರನ್ನು ಮನೆಗೆ ತನ್ನಿ..!  title=
ಟಾಟಾ ಅಗ್ಗದ ಕಾರು

ನವದೆಹಲಿ: ಟಾಟಾ ಮೋಟಾರ್ಸ್ ವಾಹನಗಳು ದೇಶದ ಜನರಿಗೆ ತುಂಬಾ ಇಷ್ಟವಾಗುತ್ತಿವೆ. ಹೆಚ್ಚಿನ ಕಾರುಗಳ ಮಾರಾಟದಿಂದ ಟಾಟಾ ದೇಶದಲ್ಲಿ 3ನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿದೆ. 2ನೇ ಸ್ಥಾನದಲ್ಲಿ ಹ್ಯುಂಡೈ ಇದೆ. ಟಾಟಾ ಮೋಟಾರ್ಸ್ ವಿವಿಧ ಬೆಲೆಗಳು ಮತ್ತು ವೈಶಿಷ್ಟ್ಯಗಳೊಂದಿಗೆ ಅನೇಕ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಅತ್ಯಂತ ಅಗ್ಗದ ಕಾರು ಅಂದ್ರೆ ಅದುವೇ ಟಾಟಾ ಟಿಯಾಗೊ. ಕಂಪನಿಯ ಈ ಹ್ಯಾಚ್‌ಬ್ಯಾಕ್‌ನಲ್ಲಿ 5 ಜನರು ಕುಳಿತುಕೊಳ್ಳಬಹುದು. ಮಾರುತಿ ಸೆಲೆರಿಯೊ ಮತ್ತು ವ್ಯಾಗನ್‌ಆರ್‌ನಂತಹ ಕಾರುಗಳೊಂದಿಗೆ ಈ ವಾಹನವು ನೇರ ಸ್ಪರ್ಧೆ ಹೊಂದಿದೆ. ಕೇವಲ 1.5 ಲಕ್ಷ ರೂ. ಖರ್ಚು ಮಾಡಿ ಈ ಕಾರನ್ನು ನೀವು ಮನೆಗೆ ತರಬಹುದು. ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.  

ಇದರ ಬೆಲೆ ಎಷ್ಟು?

ಕಂಪನಿಯು ಇತ್ತೀಚೆಗೆ ಟಾಟಾ ಟಿಯಾಗೊ ಬೆಲೆಯನ್ನು 15,000 ರೂ.ವರೆಗೆ ಹೆಚ್ಚಿಸಿದೆ. ಈಗ ಇದರ ಬೆಲೆ 5.54 ಲಕ್ಷ ರೂ.ನಿಂದ ಆರಂಭವಾಗಿ 8.05 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ ದರ) ಇದೆ. ಇದನ್ನು XE, XM, XT(O), XT, XZ ಮತ್ತು XZ+ ಎಂಬ 6 ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಈ ಕಾರನ್ನು ಲೋನ್‌ನಲ್ಲಿ ಖರೀದಿಸಬಯಸಿದರೆ, 1.5 ಲಕ್ಷ ರೂ. ಪಾವತಿಸುವ ಮೂಲಕವೂ ನಿಮ್ಮದಾಗಿಸಿಕೊಳ್ಳಬಹುದು. ಇದರ EMIನ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಇದನ್ನೂ ಓದಿ: Cheap And Best Mileage Car: ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚ, ಇದುವೇ ನೋಡಿ ಅತ್ಯುತ್ತಮ ಮೈಲೇಜ್ ನೀಡುವ ಅಗ್ಗದ ಕಾರ್!

1.5 ಲಕ್ಷ ರೂ.ಗೆ ಕಾರನ್ನು ಮನೆಗೆ ತನ್ನಿ

ನೀವು ಕಾರಿನ ಮೂಲ ರೂಪಾಂತರ ಖರೀದಿಸಬೇಕಾದರೆ 6.35 ಲಕ್ಷ ರೂ. ಆಗುತ್ತದೆ. ಇದನ್ನು ನೀವು ಲೋನ್ ಮೇಲೆ ಖರೀದಿಸಿದರೆ ಉತ್ತಮ EMI ಸೌಲಭ್ಯವಿದೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಹೆಚ್ಚು ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು. ವಿವಿಧ ಬ್ಯಾಂಕ್‌ಗಳಲ್ಲಿ ಬಡ್ಡಿ ದರವು ವಿಭಿನ್ನವಾಗಿರುತ್ತದೆ. ಅಲ್ಲದೇ ಸಾಲದ ಅವಧಿಯನ್ನು 1 ರಿಂದ 7 ವರ್ಷಗಳವರೆಗೆ ಆಯ್ಕೆ ಮಾಡಬಹುದು.

ಉದಾಹರಣೆಗೆ ನೀವು 1.5 ಲಕ್ಷ ರೂ.ಗಳ ಡೌನ್ ಪೇಮೆಂಟ್ ಮಾಡಿ 5 ವರ್ಷಗಳ ಸಾಲದ ಅವಧಿಗೆ ಶೇ.9.8ರ ಬಡ್ಡಿದರ ಆಯ್ಕೆ ಮಾಡಿಕೊಂಡರೆ, ಪ್ರತಿ ತಿಂಗಳು 10,262 ರೂ.ಗಳ EMI ಪಾವತಿಸಬೇಕಾಗುತ್ತದೆ. ನೀವು ಒಟ್ಟು ಸಾಲದ ಮೊತ್ತಕ್ಕೆ (4.85 ಲಕ್ಷ ರೂ.) ಹೆಚ್ಚುವರಿಯಾಗಿ 1.30 ಲಕ್ಷ ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಗ್ರಾಹಕರೇ ಗಮನಿಸಿ : ಇನ್ನು ಮುಂದೆ ಬದಲಾಗಲಿದೆ ಬ್ಯಾಂಕ್ ತೆರೆಯುವ ಮತ್ತು ಮುಚ್ಚುವ ಸಮಯ

Tata Tiagoನ ವೈಶಿಷ್ಟ್ಯಗಳು

Apple CarPlay ಮತ್ತು Android Auto ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, LED DRLಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ವೈಪರ್‌ಗಳೊಂದಿಗೆ ಹಿಂಭಾಗದ ಡಿಫಾಗರ್ ಒಳಗೊಂಡಿದೆ. ಇದು 8-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಸಹ ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News