Maruti Car: ಕೇವಲ 40 ಸಾವಿರ ಪಾವತಿಸಿ ಮಾರುತಿಯ ನಂ.1 ಫ್ಯಾಮಿಲಿ ಕಾರನ್ನು ಮನೆಗೆ ತನ್ನಿ!

ಇಂದು ನಾವು ನಿಮಗೆ ಮಾರುತಿ ಸುಜುಕಿಯ ಕಾರಿನ ಬಗ್ಗೆ ಹೇಳಲಿದ್ದೇವೆ. ಇದನ್ನು ನೀವು ಕೇವಲ 40 ಸಾವಿರ ರೂ. ಪಾವತಿಸಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ಮೈಲೇಜ್ ವಿಚಾರದಲ್ಲಿ ಅತ್ಯುತ್ತಮವಾಗಿದ್ದು, ಇದರ ಮೈಲೇಜ್ 33KMPLಗಿಂತಲೂ ಹೆಚ್ಚಿದೆ.

Written by - Puttaraj K Alur | Last Updated : Jan 21, 2023, 08:41 AM IST
  • ಭಾರತದಲ್ಲಿ ಹೊಸ ಕಾರನ್ನು ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ
  • ಕೈಗೆಟುಕುವ & ಕುಟುಂಬಕ್ಕೆ ಪರಿಪೂರ್ಣವಾದ ಕಾರು ಖರೀದಿಸಲು ಗ್ರಾಹಕರು ಇಷ್ಟಪಡುತ್ತಾರೆ
  • ಕೇವಲ 40 ಸಾವಿರ ರೂ. ಡೌನ್ ಪೇಮೆಂಟ್‌ ಪಾವತಿಸಿ ಮಾರುತಿ ಸುಜುಕಿ ಆಲ್ಟೊ K10 ಕಾರು ಖರೀದಿಸಿ
Maruti Car: ಕೇವಲ 40 ಸಾವಿರ ಪಾವತಿಸಿ ಮಾರುತಿಯ ನಂ.1 ಫ್ಯಾಮಿಲಿ ಕಾರನ್ನು ಮನೆಗೆ ತನ್ನಿ!   title=
ಮಾರುತಿ ಸುಜುಕಿ ಆಲ್ಟೊ K10

ನವದೆಹಲಿ: ಭಾರತದಲ್ಲಿ ಹೊಸ ಕಾರನ್ನು ಖರೀದಿಸುವುದು ಪ್ರತಿಯೊಬ್ಬರ ಕನಸು. ಹೆಚ್ಚಿನ ಸಂಖ್ಯೆಯ ಗ್ರಾಹಕರು ಕೈಗೆಟುಕುವ ಮತ್ತು ತಮ್ಮ ಕುಟುಂಬಕ್ಕೆ ಪರಿಪೂರ್ಣವಾದ ಕಾರನ್ನು ಹುಡುಕುತ್ತಿರುತ್ತಾರೆ. ಇಂದು ನಾವು ನಿಮಗೆ ಮಾರುತಿ ಸುಜುಕಿಯ ಕಾರಿನ ಬಗ್ಗೆ ಹೇಳಲಿದ್ದೇವೆ. ಇದನ್ನು ನೀವು ಕೇವಲ 40 ಸಾವಿರ ರೂ.ನಲ್ಲಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ಮೈಲೇಜ್ ವಿಚಾರದಲ್ಲಿ ಅತ್ಯುತ್ತಮವಾಗಿದ್ದು, ಇದರ ಮೈಲೇಜ್ 33 ಕೆಎಂಪಿಎಲ್ ಗಿಂತಲೂ ಹೆಚ್ಚಿದೆ.

ನಾವು ಮಾತನಾಡುತ್ತಿರುವ ಕಾರು ಮಾರುತಿ ಸುಜುಕಿ ಆಲ್ಟೊ K10. ಈ ಕಾರಿನ ಬೆಲೆಯು 3.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 5.95 ರೂ. ಲಕ್ಷಗಳವರೆಗೆ (ಎಕ್ಸ್ ಶೋರೂಂ)ವರೆಗೆ ಇರುತ್ತದೆ. ನೀವು ಈ ಕಾರಿನ ಮೂಲ ರೂಪಾಂತರವನ್ನು ಡೌನ್ ಪೇಮೆಂಟ್‌ನಲ್ಲಿ ಖರೀದಿಸಬಯಸಿದ್ರೆ, ನಾವು ನಿಮಗಾಗಿ ಅದರ EMI ಕ್ಯಾಲ್ಕುಲೇಟರ್ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಗಮನಕ್ಕೆ : ಸರ್ಕಾರಿ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ!

ಉದಾಹರಣೆಗೆ ನೀವು ಅದನ್ನು ಶೇ.10ರಷ್ಟು ಡೌನ್ ಪೇಮೆಂಟ್‌ನಲ್ಲಿ ತೆಗೆದುಕೊಂಡರೆ, ಅಂದರೆ ಸುಮಾರು 40 ಸಾವಿರ ರೂ. ಪಾವತಿಸಿದರೆ ಶೇ.9.5% ಬಡ್ಡಿ ದರದಲ್ಲಿ, ನೀವು 5 ವರ್ಷಗಳ ಅವಧಿಗೆ ಸುಮಾರು 7500 ರೂ.ಗಳ EMI ಪಾವತಿಸಬೇಕಾಗುತ್ತದೆ. .

ಎಂಜಿನ್ ಮತ್ತು ಮೈಲೇಜ್

ಮಾರುತಿ ಆಲ್ಟೊ K10 1-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ (67PS ಮತ್ತು 89Nm) ಹೊಂದಿದೆ. ಇದು 5-ವೇಗದ ಮ್ಯಾನುವಲ್ ಟ್ರಾನ್ಸ್ಮಿಷನ್ ಮತ್ತು 5-ಸ್ಪೀಡ್ AMTಯ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ವಿಶೇಷವೆಂದರೆ ಇದು ಸಿಎನ್‌ಜಿ ಕಿಟ್‌ನ ಆಯ್ಕೆಯನ್ನು ಸಹ ಹೊಂದಿದೆ. ಇದರೊಂದಿಗೆ ಎಂಜಿನ್ 57 ಪಿಎಸ್ ಮತ್ತು 82.1NM ಅನ್ನು ಉತ್ಪಾದಿಸುತ್ತದೆ. ಇದು ಪೆಟ್ರೋಲ್ ಮೋಡ್‌ನಲ್ಲಿ 24.90 km/l ವರೆಗೆ ಮೈಲೇಜ್ ನೀಡುತ್ತದೆ, ಇದು CNGಯೊಂದಿಗೆ 33.85 km/kgವರೆಗೆ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: Budget 2023: ಕೇಂದ್ರ ಸರ್ಕಾರವು ಈ ವಸ್ತುಗಳ ಬಗ್ಗೆ ದೊಡ್ಡ ಘೋಷಣೆ ಮಾಡಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News