Bikes Sales: ಕೇವಲ 5 ಸಾವಿರಕ್ಕೆ ಈ ಅಗ್ಗದ ಮತ್ತು ಶಕ್ತಿಶಾಲಿ ಬೈಕ್ ಮನೆಗೆ ತನ್ನಿ..!

Best Selling Motorcycles: ಹೀರೊ, ಹೋಂಡಾ, ಟಿವಿಎಸ್ ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಟಾಪ್ 10 ಬೈಕ್‌ಗಳಲ್ಲಿ 2-2 ಬೈಕ್‌ಗಳನ್ನು ಹೊಂದಿವೆ. ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್‌ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.

Written by - Puttaraj K Alur | Last Updated : Jan 23, 2023, 10:38 PM IST
  • ಹೀರೋ, ಹೋಂಡಾ, ಟಿವಿಎಸ್, ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಟಾಪ್ 10 ಬೈಕ್‌ಗಳಲ್ಲಿ ಸ್ಥಾನ
  • ಹೀರೋ ಸ್ಪ್ಲೆಂಡರ್‍ಗೆ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಬೈಕ್ ಎಂಬ ಹೆಗ್ಗಳಿಕೆ
  • ಹೀರೋ ಮೋಟೋಕಾರ್ಪ್‌ನ ಹೆಚ್‌ಎಫ್ ಡಿಲಕ್ಸ್ ಅತಿಹೆಚ್ಚು ಮಾರಾಟದ 2ನೇ ಬೈಕ್
Bikes Sales: ಕೇವಲ 5 ಸಾವಿರಕ್ಕೆ ಈ ಅಗ್ಗದ ಮತ್ತು ಶಕ್ತಿಶಾಲಿ ಬೈಕ್ ಮನೆಗೆ ತನ್ನಿ..! title=
Best Selling Motorcycles

ನವದೆಹಲಿ: 2022ರ ಡಿಸೆಂಬರ್‍ನಲ್ಲಿ ಬೈಕ್ ಮಾರಾಟದ ಅಂಕಿಅಂಶಗಳ ಇಲ್ಲಿದೆ. ಹೀರೋ, ಹೋಂಡಾ, ಟಿವಿಎಸ್ ಬಜಾಜ್ ಮತ್ತು ರಾಯಲ್ ಎನ್‌ಫೀಲ್ಡ್ ಟಾಪ್ 10 ಬೈಕ್‌ಗಳಲ್ಲಿ 2-2 ಬೈಕ್‌ಗಳನ್ನು ಹೊಂದಿವೆ. 2022ರ ಡಿಸೆಂಬರ್‌ನಲ್ಲಿ 2,25,443 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾದ ಬೈಕ್ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಡಿಸೆಂಬರ್ 2021ರ ಮಾರಾಟಕ್ಕೆ ಹೋಲಿಸಿದರೆ ಸ್ಪ್ಲೆಂಡರ್ ಮಾರಾಟದಲ್ಲಿ ಶೇ.0.58ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್‌ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.

ಇದು ಕಂಪನಿಯ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್ ಆಗಿದ್ದು, ಡಿಸೆಂಬರ್ 2022ರಲ್ಲಿ 1,07,755 ಯುನಿಟ್‌ಗಳನ್ನು ಮಾರಾಟ ಮಾಡಿದೆ. ವಿಶೇಷವೆಂದರೆ ಡಿಸೆಂಬರ್ 2021ಕ್ಕೆ ಹೋಲಿಸಿದರೆ, ಈ ಬೈಕ್ ಸುಮಾರು ಶೇ.30ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಡಿಸೆಂಬರ್ 2021ರಲ್ಲಿ ಈ ಬೈಕಿನ ಕೇವಲ 24675 ಯುನಿಟ್‌ಗಳು ಮಾರಾಟವಾಗಿವೆ. ಹೀರೋ ಎಚ್‌ಎಫ್ ಡಿಲಕ್ಸ್ ಮಾರಾಟದಲ್ಲಿ ಹೋಂಡಾ ಆಕ್ಟಿವಾವನ್ನು ಹಿಂದಿಕ್ಕಿದೆ, ಈ ಬಾರಿ 3ನೇ ಸ್ಥಾನಕ್ಕೆ ತಲುಪಿದೆ.

ಇದನ್ನೂ ಓದಿ: Rahul Gandhi Marriage : ʼನಾನು ಮದುವೆ ವಿರೋಧಿ ಅಲ್ಲ, ಹುಡುಗಿ ಹೀಗಿದ್ರೆ ವಿವಾಹ ಆಗ್ತೀನಿʼ

5 ಸಾವಿರಕ್ಕೆ ಬೈಕ್ ಮನೆಗೆ ತನ್ನಿ

ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್‌ನ ಮೂಲ ರೂಪಾಂತರದ ಬೆಲೆ ಸುಮಾರು 60 ಸಾವಿರ ರೂ.ಗಳು. ಈ ಬೆಲೆಯು ಕಿಕ್ ಸ್ಟಾರ್ಟ್ ಡ್ರಮ್ ಅಲಾಯ್ ವೀಲ್ ರೂಪಾಂತರವಾಗಿದೆ. ನೀವು ಈ ರೂಪಾಂತರವನ್ನು EMIನಲ್ಲಿ ಸಹ ಖರೀದಿಸಬಹುದು. ನೀವು ಅದನ್ನು 5000 ರೂ. ಡೌನ್ ಪೇಮೆಂಟ್‍ನಲ್ಲಿ ಖರೀದಿಸಬಹುದು. ಇದಕ್ಕೆ ಬ್ಯಾಂಕ್ ಬಡ್ಡಿ ದರವು ಶೇ.9:30ರಷ್ಟು ಮತ್ತು ಸಾಲದ ಅವಧಿಯು 3 ವರ್ಷ ಆಗಿರುತ್ತದೆ. ನೀವು ಪ್ರತಿ ತಿಂಗಳು ಕೇವಲ 2,120 ರೂ.ಗಳ EMI ಪಾವತಿಸಬೇಕಾಗುತ್ತದೆ.

ಈ ಬೈಕ್ 97.2 ಸಿಸಿ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಆವೃತ್ತಿಗಳಲ್ಲಿ ಬರುತ್ತದೆ. ಇದಕ್ಕೆ i3S ತಂತ್ರಜ್ಞಾನವನ್ನು ನೀಡಲಾಗಿದೆ, ಇದು ಶೇ.9ರಷ್ಟು ಇಂಧನವನ್ನು ಉಳಿಸುತ್ತದೆ.

ಇದನ್ನೂ ಓದಿ: ರಸ್ತೆ ಮಧ್ಯ ಕಾರ್‌ ನಿಲ್ಲಿಸಿ ರಿಲ್ಸ್‌ ಮಾಡಿದ ಬ್ಯೂಟಿಗೆ 17 ಸಾವಿರ ರೂ. ದಂಡ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News