ಬೆಂಗಳೂರು : ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದೆ. ನೀವೂ ಸಹ ರೈತರಾಗಿದ್ದು, ಕೆಸಿಸಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ನಿಮಗೆ ಸರ್ಕಾರಿ ಬ್ಯಾಂಕ್ನಿಂದ ಮತ್ತೊಂದು ದೊಡ್ಡ ಲಾಭ ಸಿಗಲಿದೆ. ಈ ಬಗ್ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸರ್ಕಾರದಿಂದ ಅನೇಕ ಸವಲತ್ತುಗಳು ಸಿಗುತ್ತಿವೆ.
ಟ್ವೀಟ್ ಮಾಡಿರುವ PNB :
ಕಿಸಾನ್ ಕ್ರೆಡಿಟ್ ಕಾರ್ಡ್ ರೈತನ ನಿಜವಾದ ಸ್ನೇಹಿತ ಎಂದು ಪಿಎನ್ಬಿ ತನ್ನ ಅಧಿಕೃತ ಟ್ವೀಟ್ನಲ್ಲಿ ಬರೆದುಕೊಂಡಿದೆ.
Kisan Credit Card
Kisan ka hai sacha dost!Visit PNB Corporate Website, PNB One App, PNB Internet Banking & click on "KCC Digital Renewal" enter "KCC Account Number" verify through OTP, & click "Renew"
To download PNB One, visit: https://t.co/ooMU8QmmVb #Kisaan… pic.twitter.com/bxk9ZUilX1
— Punjab National Bank (@pnbindia) August 23, 2023
ಈ ಕಾರ್ಡ್ ಅನ್ನು ನವೀಕರಿಸುವುದು ಹೇಗೆ ? :
ಈಗ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನವೀಕರಿಸುವುದು ತುಂಬಾ ಸುಲಭವಾಗಿದೆ. ರೈತರು ತಮ್ಮ ಕಾರ್ಡ್ಗಳನ್ನು PNB ಕಾರ್ಪೊರೇಟ್ ವೆಬ್ಸೈಟ್, PNB One App, PNB ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ನವೀಕರಿಸಬಹುದು. ಇದಕ್ಕಾಗಿ ನೀವು "KCC Digital Renewal"ಗೆ ಹೋಗಬೇಕು. ನಂತರ "ಕೆಸಿಸಿ ಖಾತೆ ಸಂಖ್ಯೆ" ಅನ್ನು ನಮೂದಿಸಬೇಕು. ಇದರ ನಂತರ OTP ಅನ್ನು ನಮೂದಿಸಬೇಕಾಗುತ್ತದೆ.
ಇದನ್ನೂ ಓದಿ : ಅಡಿಕೆಗೆ ಹಳದಿ ಎಲೆ ರೋಗ: ಮಲೆನಾಡ ಜನರಲ್ಲಿ ಆತಂಕ
SMS ಮೂಲಕವೂ ನಿಮ್ಮ ಕಾರ್ಡ್ ಅನ್ನು ನವೀಕರಿಸಬಹುದು :
SMS ಮೂಲಕವೂ ನಿಮ್ಮ ಕಾರ್ಡ್ ಅನ್ನು ರಿನ್ಯೂ ಮಾಡಬಹುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ. ಇದಕ್ಕಾಗಿ, ನೀವು SMS ನಲ್ಲಿ Y ಎಂದು ಬರೆದು 5607040 ಗೆ ಕಳುಹಿಸಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು ಈ ಸಂದೇಶವನ್ನು ಕಳುಹಿಸಬೇಕು.
ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೂಡಾ ಕೊಡಬಹುದು :
ಇದಲ್ಲದೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9266921359 ಗೆ ಮಿಸ್ಡ್ ಕಾಲ್ ಮಾಡಬಹುದು. ನೀವು OVIR ಕರೆಯನ್ನು ಬಳಸುತ್ತಿದ್ದರೆ ನೀವು 1 ಅನ್ನು ಒತ್ತಬೇಕು.
ಇದನ್ನೂ ಓದಿ : ಅಡಿಕೆ ರೇಟ್: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ :
ಇದರ ಹೊರತಾಗಿ, ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. bit.ly/3WwQ4igನಲ್ಲಿ ಭೇಟಿ ನೀಡಬಹುದು. ಇಲ್ಲಿ ನೀವು ಸಂಪೂರ್ಣ ಮಾಹಿತಿ ಸಿಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನಗಳು :
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು 4 ಪ್ರತಿಶತ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲವನ್ನು ಪಡೆಯುತ್ತಾರೆ. ಇದಲ್ಲದೆ, ಕೆಸಿಸಿ ಹೊಂದಿರುವವರು ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ 50,000 ರೂ ವರೆಗೆ, ಎರಡನೇ ಅಪಾಯದ ಸಂದರ್ಭದಲ್ಲಿ 25,000 ರೂ ವರೆಗೆ ಕವರೇಜ್ ಪಡೆಯುತ್ತಾರೆ. ಈ ಕಾರ್ಡ್ ಮೂಲಕ ಪಡೆಯುವ 1.60 ಲಕ್ಷದವರೆಗಿನ ಸಾಲಕ್ಕೆ ರೈತರು ಯಾವುದೇ ಜಾಮೀನು ನೀಡಬೇಕಾಗಿಲ್ಲ.
ಇದನ್ನೂ ಓದಿ : ಕೇವಲ 25 ಸಾವಿರ ರೂ.ಗಳ ಆರಂಭಿಕ ಹೂಡಿಕೆಯಿಂದ ಈ ಉದ್ಯಮ ಆರಂಭಿಸಿ, 70 ಲಕ್ಷಕ್ಕೂ ಅಧಿಕ ಸಂಪಾದಿಸಬಹುದು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.