ತೆರಿಗೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ : ಐಟಿಆರ್ ಸಲ್ಲಿಕೆಗೆ ಸಂಬಂಧಿಸಿದಂತೆ ಇಲ್ಲಿದೆ ಬಿಗ್ ಅಪ್ಡೇಟ್

ಈ ಬಾರಿ ಯಾವುದೇ ಕಾರಣಕ್ಕೂ ಐಟಿಆರ್ ಸಲ್ಲಿಸುವ ದಿನಾಂಕವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.

Written by - Ranjitha R K | Last Updated : Jul 29, 2022, 09:44 AM IST
  • ಐಟಿಆರ್ ಸಲ್ಲಿಸಲು 31 ಜುಲೈ ಕೊನೆಯ ದಿನ
  • ಸೈಟ್ ನಲ್ಲಿ ಎದುರಾಗುತ್ತಿವೆ ಸಮಸ್ಯೆಗಳು
  • ದಿನಾಂಕ ವಿಸ್ತರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟನೆ
ತೆರಿಗೆದಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ : ಐಟಿಆರ್ ಸಲ್ಲಿಕೆಗೆ ಸಂಬಂಧಿಸಿದಂತೆ ಇಲ್ಲಿದೆ ಬಿಗ್ ಅಪ್ಡೇಟ್   title=
update on itr filling (file photo)

ನವದೆಹಲಿ : 2021-22  ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೆಲಸವು ಭರದಿಂದ ಸಾಗುತ್ತಿದೆ. ಜುಲೈ 31 ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಸೈಟ್ ಕೂಡಾ ಹ್ಯಾಂಗ್ ಆಗುತ್ತಿದೆ ಮಾತ್ರವಲ್ಲ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಆದಾಯ ತೆರಿಗೆ ಇಲಾಖೆ ನೀಡಿರುವ ಇತ್ತೀಚಿನ ಅಪ್‌ಡೇಟ್ ಪ್ರಕಾರ, 2021-22ನೇ ಹಣಕಾಸು ವರ್ಷಕ್ಕೆ ಜುಲೈ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ 3.4 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಸಲಾಗಿದೆ.

ಈ ಬಾರಿ ಕೊನೆಯ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಮಾಡಿದ ಟ್ವೀಟ್‌ನಲ್ಲಿ ಹೇಳಿದೆ.  ಜುಲೈ 26, 2022 ರವರೆಗೆ 3.4 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ. . ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31, 2022 ಕೊನೆಯ ದಿನಾಂಕವಾಗಿದೆ.  ಯಾವುದೇ ವಿಳಂಬ ಶುಲ್ಕವನ್ನು ತಪ್ಪಿಸಲು ಜುಲೈ 31 ರ ಮೊದಲು ನಿಮ್ಮ ರಿಟರ್ನ್ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಐಟಿಆರ್ ಸಲ್ಲಿಸುವ ದಿನಾಂಕವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ : Gold Price Today : ಚಿನ್ನ ಪ್ರಿಯರಿಗೆ ಶಾಕಿಂಗ್ ; ಭಾರೀ ದುಬಾರಿಯಾಯಿತು ಚಿನ್ನ

2020-21ರಲ್ಲಿ 5.89 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದ್ದು, 2021-22ನೇ
ಹಣಕಾಸು ವರ್ಷಕ್ಕೆ ಜುಲೈ 20ರವರೆಗೆ 2.3 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಕಳೆದ ಹಣಕಾಸು ವರ್ಷದಲ್ಲಿ (2020- 21) ವಿಸ್ತರಿಸಿದ ದಿನಾಂಕದೊಂದಿಗೆ ಡಿಸೆಂಬರ್ 31, 2021 ರವರೆಗೆ ಒಟ್ಟು 5.89 ಕೋಟಿ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. 2021-22 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ  ಜುಲೈ 26ರವರೆಗೆ 3.4 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಜುಲೈ 31ರ ವೇಳೆಗೆ ಈ ಸಂಖ್ಯೆ 5 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಆದರೆ, ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿವೆ ಎಂಬ ದೂರು ಕೇಳಿ ಬಂದಿದೆ. 

ವೈಯಕ್ತಿಕ HUF ಗಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31. ಆದರೆ ಆಡಿಟ್ ಅಗತ್ಯವಿರುವವರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31, 2022 ಆಗಿದೆ.  ಇನ್ನು ವ್ಯಾಪಾರಸ್ಥರಿಗೆ ಟಿಪಿ ವರದಿ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನವೆಂಬರ್ 30, 2022 ಕೊನೆಯ ದಿನಾಂಕ  ಆಗಿದೆ.

ಇದನ್ನೂ ಓದಿ : Vegetable Price: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಳ! ಇಲ್ಲಿದೆ ನೋಡಿ ತರಕಾರಿಗಳ ದರ ವಿವರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News