ಆಧಾರ್ ಬಗ್ಗೆ ಬಿಗ್ ಅಪ್ಡೇಟ್ : ಸರ್ಕಾರ ನೀಡಿದ ಈ ಮಾಹಿತಿ ಕೇಳಿದ್ರೆ ಶಾಕ್ ಆಗ್ತೀರಾ!

Aadhaar Card : ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ನಮಗೆಲ್ಲರಿಗೂ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಕಾರ್ಡ್ ಇಲ್ಲದೆ ನಾವು ನಮ್ಮ ಮನೆಯಿಂದ ಬ್ಯಾಂಕಿನವರೆಗೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.

Written by - Channabasava A Kashinakunti | Last Updated : Jan 27, 2023, 11:19 PM IST
  • ಆಧಾರ್​ ಇ-ಕೆವೈಸಿಯಲ್ಲಿ ವೇಗ
  • ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು
  • ಪರಿಶೀಲನೆ ಅಗತ್ಯವಿಲ್ಲ
ಆಧಾರ್ ಬಗ್ಗೆ ಬಿಗ್ ಅಪ್ಡೇಟ್ : ಸರ್ಕಾರ ನೀಡಿದ ಈ ಮಾಹಿತಿ ಕೇಳಿದ್ರೆ ಶಾಕ್ ಆಗ್ತೀರಾ! title=

Aadhaar Card Latest News : ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ನಮಗೆಲ್ಲರಿಗೂ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಕಾರ್ಡ್ ಇಲ್ಲದೆ ನಾವು ನಮ್ಮ ಮನೆಯಿಂದ ಬ್ಯಾಂಕಿನವರೆಗೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಎಲ್ಲ ಕೆಲಸಗಳಿಗೂ ಆಧಾರ್ ಅಗತ್ಯವಾಗಿದೆ. ಈ ಮಧ್ಯೆ ಆಧಾರ್‌ಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಆಧಾರ್ ಮೂಲಕ ಇ-ಕೆವೈಸಿ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ.

ಆಧಾರ್​ ಇ-ಕೆವೈಸಿಯಲ್ಲಿ ವೇಗ

ಆರ್ಥಿಕ ವರ್ಷ 2022-23 ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 84.8 ಕೋಟಿಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಬಳಸಿಕೊಂಡು ಮಾಡಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ (ಜುಲೈ-ಸೆಪ್ಟೆಂಬರ್) ಹೋಲಿಸಿದರೆ ಶೇ.18.53ರಷ್ಟು ಹೆಚ್ಚು. ಡಿಸೆಂಬರ್‌ನಲ್ಲಿಯೇ 32.49 ಕೋಟಿ ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಮೂಲಕ ಮಾಡಲಾಗಿದೆ, ಇದು ಹಿಂದಿನ ತಿಂಗಳಿಗಿಂತ ಶೇ. 13 ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ : Income Tax : ಕೇಂದ್ರ ಬಜೆಟ್‌ನಲ್ಲಿ ಸಂಬಳ ಪಡೆಯುವ ವರ್ಗದವರಿಗೆ ಭರ್ಜರಿ ಸಿಹಿ ಸುದ್ದಿ!

ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು

ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸೇವೆಗಳಿಗೆ ಪಾರದರ್ಶಕ ಮತ್ತು ಉತ್ತಮ ಗ್ರಾಹಕರ ಅನುಭವವನ್ನು ಒದಗಿಸುವ ಮೂಲಕ ಮತ್ತು ಸುಲಭವಾಗಿ ವ್ಯಾಪಾರ ಮಾಡಲು ಸಹಾಯ ಮಾಡುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 23.56 ಕೋಟಿಯಷ್ಟಿತ್ತು ಮತ್ತು ಅಂತಹ ವಹಿವಾಟುಗಳು ನವೆಂಬರ್‌ನಲ್ಲಿ 28.75 ಕೋಟಿಗೆ ಏರಿದೆ, ಡಿಸೆಂಬರ್‌ನಲ್ಲಿ ಮತ್ತಷ್ಟು ಏರಿಕೆಯಾಗುವ ಮೊದಲು, ಆರ್ಥಿಕತೆಯಲ್ಲಿ ಅದರ ಹೆಚ್ಚುತ್ತಿರುವ ಬಳಕೆ ಮತ್ತು ಉಪಯುಕ್ತತೆಯನ್ನು ಈ ಮೂಲಕ ಅರ್ಥ ಮಾಡಿಕೊಳ್ಳಬಹುದು.

ಪರಿಶೀಲನೆ ಅಗತ್ಯವಿಲ್ಲ

ಡಿಸೆಂಬರ್ 2022 ರ ಅಂತ್ಯದ ವೇಳೆಗೆ, ಒಟ್ಟು ಆಧಾರ್ ಇ-ಕೆವೈಸಿ ವಹಿವಾಟುಗಳ ಸಂಖ್ಯೆ 1,382.73 ಕೋಟಿಗೆ ಏರಿದೆ. ಇ-ಕೆವೈಸಿ ವಹಿವಾಟುಗಳನ್ನು ಆಧಾರ್ ಹೊಂದಿರುವವರ ಸ್ಪಷ್ಟ ಒಪ್ಪಿಗೆಯ ನಂತರ ಮಾತ್ರ ಮಾಡಲಾಗುತ್ತದೆ ಮತ್ತು ನಂತರ ಕೆವೈಸಿಗಾಗಿ ಭೌತಿಕ ದಾಖಲೆಗಳು ಮತ್ತು ವೈಯಕ್ತಿಕ ಪರಿಶೀಲನೆಯ ಅಗತ್ಯವಿಲ್ಲ.

ಎಲ್ಲೆಡೆ ಡಿಜಿಟಲ್ ಐಡಿ ಬಳಕೆ

ಡಿಸೆಂಬರ್ 2022 ರ ಅಂತ್ಯದವರೆಗೆ ಸುಮಾರು 8,829.66 ಕೋಟಿ ಆಧಾರ್ ದೃಢೀಕರಣ ವಹಿವಾಟುಗಳನ್ನು ಮಾಡಲಾಗಿದೆ. ಆರ್ಥಿಕ ಸೇರ್ಪಡೆ, ಕಲ್ಯಾಣ ವಿತರಣೆ ಮತ್ತು ಇತರ ಹಲವು ಸೇವೆಗಳನ್ನು ಪಡೆಯುವಲ್ಲಿ ಆಧಾರ್ ಹೇಗೆ ಬೆಳೆಯುತ್ತಿರುವ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ಈ ಮೂಲಕ ಕಾಣಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ದೇಶದ 1,100 ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಆಧಾರ್ ಬಳಸಲು ಸೂಚನೆ ನೀಡಲಾಗಿದೆ. ಉದ್ದೇಶಿತ ಫಲಾನುಭವಿಗಳಿಗೆ ದಕ್ಷತೆ, ಪಾರದರ್ಶಕತೆ ಮತ್ತು ಕಲ್ಯಾಣ ಸೇವೆಗಳ ವಿತರಣೆಯನ್ನು ಸುಧಾರಿಸಲು ಕೇಂದ್ರ ಮತ್ತು ರಾಜ್ಯಗಳಲ್ಲಿನ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಡಿಜಿಟಲ್ ಐಡಿ ಸಹಾಯವಾಗುತ್ತಿದೆ.

ಇದನ್ನೂ ಓದಿ : ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್! ಪೆನ್ಶನ್ ಮೊತ್ತ ಇಳಿಸಲು ಮುಂದಾದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News