Manvitha Kamath : ನಟಿ ಮಾನ್ವಿತಾ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತೆ..? ಫೋಟೋ ವೈರಲ್‌

Manvita Kamath : ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆದ್ರೆ ಟಗರು ಪುಟ್ಟಿ ಕೈ ಹಿಡಿಯಲಿರುವ ಆ ಹುಡುಗ ಯಾರು ಅಂತ ಎಲ್ಲರು  ತಲೆ ಕೆಡಿಸಿಕೊಂಡಿದ್ದಾರೆ. ಇದೀಗ ಮಾನ್ವಿತಾ ಭಾವಿ ಪತಿ ಫೋಟೋ ವೈರಲ್‌ ಆಗುತ್ತಿದೆ. ಬನ್ನಿ ಹೆಚ್ಚಿನ ಮಾಹಿತಿ ಇಲ್ಲಿದೆ. 
 

1 /6

ಮೇ 1 ರಂದು ನಟಿ ಮಾನ್ವಿತಾ ಕಾಮತ್‌ ಅವರು ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ.   

2 /6

ಮದುವೆ ತಯಾರಿಯಲ್ಲಿರುವ ಮಾನ್ವಿತ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಮದುವೆಯಾಗುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿದ್ದರು.  

3 /6

ಅಶ್ವಿನಿ ಪುನೀತ್‌ ಅವರಿಗೆ ಮದುವೆ ಆಮಂತ್ರಣ ನೀಡಲು ಮಾನ್ವಿತಾ ತಮ್ಮ ಭಾವಿ ಪತಿಯೊಂದಿಗೆ ಬಂದಿದ್ದರು. ಈ ಕುರಿತು ಫೋಟೋ ವೈರಲ್‌ ಆಗುತ್ತಿದೆ.  

4 /6

ಮಾನ್ವಿತಾ ಮದುವೆಯಾಗಲಿರುವ ವರನನ್ನು ನೋಡಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಜೋಡಿ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

5 /6

ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ.   

6 /6

ಅರೇಂಜ್‌ ಮ್ಯಾರೇಜ್‌ ಆಗುತ್ತಿರುವ ನಟಿ, ಅಮ್ಮ ನೋಡಿದ ವರನನ್ನೇ ಮದುವೆಯಾಗುತ್ತಿದ್ದಾರೆ. ಈ ಮೂಲಕ ತಾಯಿಯ ಆಸೆ ಈಡೇರಿಸುತ್ತಿದ್ದಾರೆ.