7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಶಾಕ್, ಡಿಎ ಹೆಚ್ಚಿಸಲು ನಿರಾಕರಿಸಿದ ಸರ್ಕಾರ!

7th Pay Commission: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ನಿರಾಕರಿಸಿದ್ದಾರೆ. ಇದಾದ ಬಳಿಕ ನೌಕರರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಪ್ರತಿಭಟನೆ ಆರಂಭಿಸಿದ್ದಾರೆ.   

Written by - Nitin Tabib | Last Updated : May 7, 2023, 06:23 PM IST
  • ಈ ವೇಳೆ ಕೋಲ್ಕತ್ತಾದ ಬೀದಿಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದಾರೆ.
  • ಕೋಲ್ಕತ್ತಾ ಹೈಕೋರ್ಟ್ ರಾಜ್ಯ ನೌಕರರಿಗೆ ಮೆರವಣಿಗೆ ನಡೆಸಲು ಅನುಮತಿ ನೀಡಿದೆ.
  • ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ನೌಕರರು ಬ್ಯಾನರ್‌ಗಳನ್ನು ಹಿಡಿದು ಬೀದಿಗಿಳಿದಿದ್ದಾರೆ.
  • ಈ ಸಂದರ್ಭದಲ್ಲಿ ಗುತ್ತಿಗೆ ನೌಕರರನ್ನೂ ಕೂಡ ಕಾಯಂಗೊಳಿಸಿ ತುಟ್ಟಿಭತ್ಯೆ ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ.
7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಶಾಕ್, ಡಿಎ ಹೆಚ್ಚಿಸಲು ನಿರಾಕರಿಸಿದ ಸರ್ಕಾರ! title=
7ನೇ ವೇತನ ಆಗ್ಯೋಗ ಅಪ್ಡೇಟ್!

DA Hike Update: ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಡಿಎ ಹೆಚ್ಚಳ ಘೋಷಿಸಿದ ಬಳಿಕ, ಅನೇಕ ರಾಜ್ಯ ಸರ್ಕಾರಗಳು ಕೂಡ ತಮ್ಮ ಉದ್ಯೋಗಿಗಳಿಗೆ ಸಂತಸದ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಲು ನಿರಾಕರಿಸಿದ್ದಾರೆ. ಇದಾದ ಬಳಿಕ ನೌಕರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆಯ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಜಂಟಿ ವೇದಿಕೆಯು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದೆ.

ಕೋಲ್ಕತ್ತಾದ ಬೀದಿಗಳಲ್ಲಿ ಪ್ರತಿಭಟನೆ
ಈ ವೇಳೆ ಕೋಲ್ಕತ್ತಾದ ಬೀದಿಗಳಲ್ಲಿ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ರಾಜ್ಯ ನೌಕರರಿಗೆ ಮೆರವಣಿಗೆ ನಡೆಸಲು ಅನುಮತಿ ನೀಡಿದೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ನೌಕರರು ಬ್ಯಾನರ್‌ಗಳನ್ನು ಹಿಡಿದು ಬೀದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ಗುತ್ತಿಗೆ ನೌಕರರನ್ನೂ ಕೂಡ ಕಾಯಂಗೊಳಿಸಿ ತುಟ್ಟಿಭತ್ಯೆ ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಸರ್ಕಾರಿ ನೌಕರರು ದೀರ್ಘಕಾಲದಿಂದ ಡಿಎ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. 

ವೇತನದ ಶೇ.6 ರಷ್ಟು ಡಿಎ 
ಈ ಕುರಿತು ಈ ಮೊದಲು ಪ್ರತಿಭಟನಾ ನಿರತ ನೌಕರರಿಗೆ ನೇರ ವಿವರಣೆ ನೀಡಿದ್ದ ಮಮತಾ ಬ್ಯಾನರ್ಜಿ ಅವರು  ಸರ್ಕಾರದಿಂದ ಎಷ್ಟು ತುಟ್ಟಿಭತ್ಯೆ ಹೆಚ್ಚಿಸಬಹುದೋ, ಅದನ್ನು ಹೆಚ್ಚಿಸಲಾಗಿದೆ ಎಂಬುದನ್ನು ಹೇಳಿದ್ದರು. ಅಷ್ಟೇ ಅಲ್ಲ ಇದೀಗ ಮತ್ತೊಂದು ಕೊಡುಗೆ ನೀಡುವ ಸಾಮರ್ಥ್ಯ ಸರಕಾರಕ್ಕಿಲ್ಲ ಎಂದಿದ್ದರು. ತುಟ್ಟಿಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಒಂದು ವರ್ಗ ಪ್ರತಿಭಟನೆ ನಡೆಸುತ್ತಿದೆ. ಇತ್ತೀಚೆಗೆ ಹಣಕಾಸು ಖಾತೆ ರಾಜ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಬಜೆಟ್ ಮಂಡಿಸುವಾಗ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಡಿಎ ಮೂಲ ವೇತನದ ಶೇಕಡಾ 6 ರಷ್ಟಿದೆ. 

ಇದನ್ನೂ ಓದಿ-Dollar VS Rupees: ಜಾಗತಿಕ ಮೀಸಲಿನಲ್ಲಿ ಡಾಲರ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದ ರೂಪಾಯಿ!

ಸರ್ಕಾರಿ ನೌಕರರ ಬೆಂಬಲಕ್ಕಿಳಿದ ಪ್ರತಿಪಕ್ಷಗಳು
ಕೇಂದ್ರ ನೌಕರರಿಗಿಂತ ರಾಜ್ಯ ಸರ್ಕಾರ ನೀಡುತ್ತಿರುವ ಡಿಎ ತುಂಬಾ ಕಡಿಮೆ ಎಂದು ಪ್ರತಿಭಟನಾನಿರತ ನೌಕರರು ಹೇಳಿದ್ದಾರೆ. ಕೇಂದ್ರ ನೌಕರರಿಗೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರು ಶೇ.42 ತುಟ್ಟಿಭತ್ಯೆ ಪಡೆಯಬೇಕು ಎಂಬುದು ಅವರ ಬೇಡಿಕೆಯಾಗಿದೆ. ರಾಜ್ಯದಲ್ಲಿ ಪ್ರತಿಪಕ್ಷಗಳು ಪ್ರತಿಭಟನಾ ನಿರತ ನೌಕರರ ಬೆಂಬಲಕ್ಕೆ ನಿಂತಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Super Earning Idea: 60 ದಿನಗಳ ತರಬೇತಿಯಲ್ಲಿ ಸಿಕ್ತು ಸೂಪರ್ ಐಡಿಯಾ, ಒಂದೇ ವರ್ಷದಲ್ಲಿ 10 ಲಕ್ಷ ಗಳಿಕೆ!

ಕೇಂದ್ರ ನೌಕರರ ವೇತನವು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ನೌಕರರಿಗಿಂತ ಭಿನ್ನವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯ ಸರ್ಕಾರಿ ನೌಕರರು ವಿವಿಧ ಸಂದರ್ಭಗಳಲ್ಲಿ ರಜೆ ಪಡೆಯುತ್ತಾರೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳವು ಇನ್ನೂ ಪಿಂಚಣಿ ನೀಡುವ (ನಿವೃತ್ತ ಜನರಿಗೆ) ರಾಜ್ಯವಾಗಿದೆ ಎಂದು ಹೇಳಿದ್ದ ಬ್ಯಾನರ್ಜಿ ಇದಕ್ಕಾಗಿ ಸರ್ಕಾರ 20,000 ಕೋಟಿ ಖರ್ಚು ಮಾಡುತ್ತಿದೆ ಎಂದಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News