ನವದೆಹಲಿ: ನೀವೂ ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗೆ ಖುಷಿ ಕೊಡುತ್ತದೆ. ಆದರೆ ಇಲ್ಲಿ ತಿಳಿಸುತ್ತಿರುವ ಭರ್ಜರಿ ಕೊಡುಗೆಯನ್ನು ಪಡೆಯಲು ನೀವು ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿರಬೇಕು. ನೀವೂ ಕೂಡ ಎರಡೂ ಡೋಸ್ ಲಸಿಕೆ ಪಡೆದಿದ್ದಲ್ಲಿ ವಿಮಾನ ಪ್ರಯಾಣದ ಮೂಲ ದರದಲ್ಲಿ ಶೇ.20ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.
ಮೂಲ ದರದಲ್ಲಿ ಶೇ.20ರಷ್ಟು ರಿಯಾಯಿತಿ
GoFirst ಏರ್‌ಲೈನ್ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ‘ಡಬಲ್ ವ್ಯಾಕ್ಸಿನೇಷನ್ ಆದವರು GoFirst ನೊಂದಿಗೆ ಡಬಲ್ ಪ್ರಯೋಜನಗಳನ್ನು ಪಡೆಯಿರಿ! GoFirst ಏರ್‌ಲೈನ್ಸ್ GOVACCI ಅನ್ನು ಪ್ರಸ್ತುತಪಡಿಸುತ್ತಿದೆ. ಇದರಡಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಜನರು ದೇಶೀಯ ವಿಮಾನಗಳಲ್ಲಿ ಶೇ.20ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ.
ಇದನ್ನೂ ಓದಿ: ITR Filing Date Extended: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿ, ITR ದಾಖಲಿಸುವ ಗಡುವು ವಿಸ್ತರಣೆ
ಇಂಡಿಗೋ ಕೂಡ ಆಫರ್ ನೀಡಿತ್ತು
ಮೊದಲ ಕೊರೊನಾ ಸೋಂಕಿನ ನಂತರ ಆರ್‌ಟಿ-ಪಿಸಿಆರ್(RT-PCR)ನ ನಕಾರಾತ್ಮಕ ವರದಿ ತೋರಿಸಿದ ನಂತರವೇ ವಿಮಾನ ಪ್ರಯಾಣ ಅನುಮತಿಸಲಾಗುತ್ತದೆ. ಈಗ ಸರ್ಕಾರವು ನಿರಂತರವಾಗಿ ಲಸಿಕೆ ಪಡೆಯುವಂತೆ ದೇಶದ ಜನರಿಗೆ ಪ್ರೇರೇಪಿಸುತ್ತಿದೆ. ವಿಮಾನಯಾನ ಕಂಪನಿಗಳು ಸಹ ಪ್ರಯಾಣಿಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿವೆ. ಈ ಆಫರ್‌ಗಳ ಉದ್ದೇಶವು ಜನರಿಗೆ ವ್ಯಾಕ್ಸಿನೇಷನ್ ಬಗ್ಗೆ ಅರಿವು ಮೂಡಿಸುವುದು. ಕೆಲ ಸಮಯದ ಹಿಂದೆ ಇಂಡಿಗೋ ಕೂಡ ಇದೇ ರೀತಿಯ ಆಫರ್ ಅನ್ನು ಪ್ರಯಾಣಿಕರಿಗೆ ನೀಡಿತ್ತು.
ಶೇ.20ರ ಕೊಡುಗೆ ಪಡೆಯಲು ಹೀಗೆ ಮಾಡಿ
- ಮೊದಲಿಗೆ ನೀವು GoAirನ ವೆಬ್‌ಸೈಟ್‌ಗೆ ಹೋಗಿ.
- ನಂತರ ಟಿಕೆಟ್ ಕಾಯ್ದಿರಿಸುವ ವೇಳೆ ಆಗಮನ ಮತ್ತು ನಿರ್ಗಮನ(Arrival and Departure)ದ ವಿವರಗಳನ್ನು ನಮೂದಿಸಿರಿ.
- ಈಗ ಅಥವಾ ಬಲಭಾಗದಲ್ಲಿ ನೀಡಲಾದ ‘Waxi Fare’ ಆಯ್ಕೆಯನ್ನು ಆರಿಸಿ.
- ಅದರ ನಂತರ GOVACCI ಎಂದು ಟೈಪ್ ಮಾಡುವ ಮೂಲಕ Submit ಮಾಡಿ.
- ಇದರ ನಂತರ ಬಲಭಾಗದಲ್ಲಿ ‘Vaxy Offer’ ಕಾಣಿಸುತ್ತದೆ. ಇಲ್ಲಿ ನೀವು ಬುಕಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುತ್ತೀರಿ.
- ಇದನ್ನು Apply ಮಾಡಿದ ನಂತರ ಬುಕಿಂಗ್ ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Petrol-Diesel: 50 ಲೀಟರ್ ಉಚಿತ ಪೆಟ್ರೋಲ್-ಡೀಸೆಲ್ ಪಡೆಯಲು ಉತ್ತಮ ಅವಕಾಶ! ಹೇಗೆಂದು ತಿಳಿಯಿರಿ
ಬುಕಿಂಗ್ ನಿಯಮಗಳು ಮತ್ತು ನಿಬಂಧನೆಗಳು
- ಈ ಕೊಡುಗೆಯು ದೇಶೀಯ ವಿಮಾನದ ಮೂಲ ದರದ ಮೇಲೆ ಮಾತ್ರ Apply ಆಗುತ್ತದೆ.
- ಬುಕ್ಕಿಂಗ್ ಮಾಡಿದ ದಿನಾಂಕದಿಂದ 15 ದಿನಗಳ ನಂತರದ ಪ್ರಯಾಣದಲ್ಲಿ ನೀವು ಈ ಕೊಡುಗೆಯನ್ನು ಪಡೆಯಬಹುದು.
- ಈ ಕೊಡುಗೆಯಡಿ ನೀವು ಜನವರಿ 31, 2022ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.