Best Milage Car: ವಿಶ್ವದ ಅತಿ ಹೆಚ್ಚು ಮೈಲೇಜ್ ನೀಡುವ ಕಾರು, 1 ಕೆಜಿ ಇಂಧನದಲ್ಲಿ 260 ಕಿ.ಮೀ.ವರೆಗೆ ಚಲಿಸುತ್ತೆ

Best Milage Car: ದಿನೇ ದಿನೇ ಪೆಟ್ರೋಲ್-ಡೀಸೆಲ್ ದರಗಳು ಗಗನಕ್ಕೇರುತ್ತಿರುವುದರ ಮಧ್ಯೆ ಇಂದು ನಾವು ನಿಮಗೆ 1 ಕೆಜಿ ಇಂಧನದಲ್ಲಿ ಸುಮಾರು 260KM ಮೈಲೇಜ್ ನೀಡುವ ಕಾರಿನ ಬಗ್ಗೆ ಹೇಳಲಿದ್ದೇವೆ. ಇದು ಗಿನ್ನಿಸ್ ದಾಖಲೆಯಲ್ಲೂ ಸ್ಥಾನ ಪಡೆದಿದೆ.

Written by - Yashaswini V | Last Updated : Oct 28, 2021, 06:00 AM IST
  • ವಿಶ್ವದ ಅತಿ ಹೆಚ್ಚು ಮೈಲೇಜ್ ನೀಡುವ ಕಾರು
  • 1 ಕೆಜಿ ಇಂಧನದಲ್ಲಿ 260KM ಮೈಲೇಜ್ ನೀಡುತ್ತೆ ಈ ಕಾರು
  • ಇದು ಮಿರಾಯ್ ಟೊಯೋಟಾದ ಮೊದಲ ಹೈಡ್ರೋಜನ್ ಕಾರು
Best Milage Car: ವಿಶ್ವದ ಅತಿ ಹೆಚ್ಚು ಮೈಲೇಜ್ ನೀಡುವ ಕಾರು, 1 ಕೆಜಿ ಇಂಧನದಲ್ಲಿ 260 ಕಿ.ಮೀ.ವರೆಗೆ  ಚಲಿಸುತ್ತೆ title=
Best Milage Car: ಕೇವಲ 1 ಕೆಜಿ ಇಂಧನದಲ್ಲಿ ಸುಮಾರು 260KM ಮೈಲೇಜ್ ನೀಡುತ್ತೆ ಈ ಕಾರು

Best Milage Car: ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪರ್ಯಾಯ ಇಂಧನಗಳ ಬಗ್ಗೆ ಯೋಚಿಸುವಂತೆ ವಿಶ್ವವನ್ನು ಒತ್ತಾಯಿಸಿದೆ. ಭಾರತ ಸೇರಿದಂತೆ ಹಲವು ದೇಶಗಳು ವಿದ್ಯುತ್ ವಾಹನಗಳ (EV) ಕಡೆಗೆ ವೇಗವಾಗಿ ಬದಲಾಗುತ್ತಿವೆ, ಆದರೆ ಜಪಾನ್‌ನಂತಹ ಕೆಲವು ದೇಶಗಳು ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲು ಆರಂಭಿಸಿವೆ. 

ಪ್ರತಿ ಕೆಜಿಗೆ 260 ಕಿಮೀ ಮೈಲೇಜ್ :
ಇತ್ತೀಚೆಗೆ, ಜಪಾನಿನ ವಾಹನ ತಯಾರಕ ಟೊಯೋಟಾದ ಮಿರಾಯ್ (Toyota Mirai) ಕಾರು ಹೈಡ್ರೋಜನ್ ಇಂಧನದ ಮೇಲೆ ಅತಿಹೆಚ್ಚು ದೂರ ಕ್ರಮಿಸಿದ ವಿಶ್ವದಾಖಲೆಯನ್ನೂ ನಿರ್ಮಿಸಿದೆ, ನಂತರ ಇದು ಗಿನ್ನೆಸ್ ವಿಶ್ವ ದಾಖಲೆಯಲ್ಲೂ ಸ್ಥಾನ ಪಡೆಯಿತು. ಈ ಕಾರಿನ ಬಹುದೊಡ್ಡ ವೈಶಿಷ್ಟ್ಯವೆಂದರೆ ಒಮ್ಮೆ ಇಂಧನ ತುಂಬಿದ ಬಳಿಕ ಇದರಲ್ಲಿ ಸುಮಾರು 1360 ಕಿ.ಮೀ ಪ್ರಯಾಣವನ್ನು ಪೂರ್ಣಗೊಳಿಸಬಹುದು. ಈ ಅವಧಿಯಲ್ಲಿ ಒಟ್ಟು 5.65 ಕೆಜಿ ಹೈಡ್ರೋಜನ್ ಬೇಕಾಗುತ್ತದೆ. ಇದರ ಪ್ರಕಾರ, ಕಾರು ಪ್ರತಿ ಕೆಜಿಗೆ 260 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ- Mahindra: ಈ ಅದ್ಭುತ ವಾಹನಗಳ ಮೇಲೆ 81,500 ರೂ. ವರೆಗೆ ಡಿಸ್ಕೌಂಟ್ ಲಭ್ಯ, ಈ ಅವಕಾಶ ಕಳೆದುಕೊಳ್ಳಬೇಡಿ!

ಕಾರನ್ನು 2016 ರಲ್ಲಿ ಬಿಡುಗಡೆ ಮಾಡಲಾಯಿತು:
ಕಂಪನಿಯ ಪ್ರಕಾರ, ಟೊಯೋಟಾ ಮಿರಾಯ್ ಅನ್ನು 2016 ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಕಂಪನಿಯ ಮೊದಲ ಇಂಧನ ಕೋಶ ವಿದ್ಯುತ್ ವಾಹನ ಅಂದರೆ ಹೈಡ್ರೋಜನ್ ಇಂಧನದಿಂದ (Hydrogen fuel) ಚಾಲಿತವಾದ ಕಾರು. ಈ ಕಾರು ಉತ್ತರ ಅಮೇರಿಕಾದಲ್ಲಿ ಚಿಲ್ಲರೆ ಮಾರಾಟಕ್ಕೆ ಲಭ್ಯವಿದೆ. ಸರಳವಾಗಿ ಹೇಳುವುದಾದರೆ, ಹೈಡ್ರೋಜನ್ ಇಂಧನದ ಬಳಕೆಯು ಜನರಿಗೆ ಬಹಳಷ್ಟು ಸಹಕಾರಿಯಾಗಲಿದೆ. ಆದಾಗ್ಯೂ, ಭಾರತದಲ್ಲಿ ಇದುವರೆಗೆ ಹೈಡ್ರೋಜನ್ ಇಂಧನವನ್ನು ಒಂದು ಆಯ್ಕೆಯಾಗಿ ನೋಡಲಾಗುತ್ತಿಲ್ಲ.

ಭಾರತದಲ್ಲಿ ಹೈಡ್ರೋಜನ್ ಅನ್ನು ಯಾವಾಗ ಉತ್ಪಾದಿಸಲಾಗುತ್ತದೆ?
ವಾಸ್ತವವಾಗಿ, ಹೈಡ್ರೋಜನ್ ಉತ್ಪಾದನೆಯು ತುಂಬಾ ದುಬಾರಿಯಾಗಿದೆ. ಈ ಹಣದುಬ್ಬರದ ಕಾರಣ, ಇದು ಸರಿಯಾದ ಆಯ್ಕೆಯಾಗಿ ಕಾಣಲಿಲ್ಲ. ಆದರೆ ಹೊಸ ತಂತ್ರಜ್ಞಾನದ ಸಹಾಯದಿಂದ ಹೈಡ್ರೋಜನ್ ಉತ್ಪಾದನೆಯ ವೆಚ್ಚ ನಿರಂತರವಾಗಿ ಕಡಿಮೆಯಾಗುತ್ತಿದೆ. ಭಾರತದ ಅತಿದೊಡ್ಡ ಖಾಸಗಿ ವಲಯದ ಪೆಟ್ರೋಲಿಯಂ ಕಂಪನಿಯಾದ ರಿಲಯನ್ಸ್ ಪೆಟ್ರೋಲಿಯಂನ ಮಾಲೀಕ ಮುಖೇಶ್ ಅಂಬಾನಿ, ಮುಂದಿನ ದಶಕದೊಳಗೆ ಹೈಡ್ರೋಜನ್ ಉತ್ಪಾದನೆಯ ವೆಚ್ಚ ಪ್ರತಿ ಕೆಜಿಗೆ ಒಂದು ಡಾಲರ್ ಮಟ್ಟಕ್ಕೆ ಬರಬಹುದು ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ- ದುಬಾರಿಯಾಗಲಿದೆ ನಿಮ್ಮ ನೆಚ್ಚಿನ ಕಾರು, ನವೆಂಬರ್ 1ರೊಳಗೆ ಬೆಲೆಗಳು ಹೆಚ್ಚಾಗುವ ಸಾಧ್ಯತೆ

ಎಲೆಕ್ಟ್ರಿಕ್ ಕಾರ್ vs ಹೈಡ್ರೋಜನ್ ಕಾರ್:
ಪಳೆಯುಳಿಕೆ ಇಂಧನಗಳಿಗೆ (Fossil Fuel) ಪರ್ಯಾಯವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಹೆಸರಿಸಲಾಗಿದೆ. ಆದರೆ ಇಲ್ಲಿಯವರೆಗೆ ತಯಾರಾದ ಎಲ್ಲಾ ಎಲೆಕ್ಟ್ರಿಕ್ ಕಾರುಗಳು ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಸುಮಾರು 500 ಕಿ.ಮೀ. ಕ್ರಮಿಸಬಹುದು ಎಂದು ಹೇಳಲಾಗುತ್ತಿದೆ. ಇದರ ನಂತರ, ಅಂತಹ ಕಾರುಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡುವುದು ದೊಡ್ಡ ಅಡಚಣೆಯಾಗಿದೆ. ಎರಡನೇ ಅಡಚಣೆಯೆಂದರೆ ಈ ಕಾರುಗಳನ್ನು ಚಾರ್ಜ್ ಮಾಡಲು ತೆಗೆದುಕೊಳ್ಳುವ ಸಮಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News