Best Bikes: 100 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಬೈಕ್ ಖರೀದಿಸಿ ಮಜಾ ಮಾಡಿ!

Mileage Bikes: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆ, ಯಾವುದೇ ಒಂದು ಬೈಕ್ ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 110 ಕಿ.ಮೀ ಮೈಲೇಜ್ ನೀಡುತ್ತದೆ ಗೊತ್ತಾದರೆ ಎಷ್ಟು ನೆಮ್ಮದಿ ಸಿಗುತ್ತದೆ ಅಲ್ಲವೇ. ಏಕೆಂದರೆ, ಬೈಕ್ ಹೆಚ್ಚು ಮೈಲೇಜ್ ನೀಡಿದಷ್ಟು, ಅದನ್ನು ಓಡಿಸುವ ಮಜಾ ಕೂಡ ಅಷ್ಟೇ ದ್ವಿಗುಣವಾಗಲಿದೆ.   

Written by - Nitin Tabib | Last Updated : Aug 16, 2022, 10:26 PM IST
  • ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆ,
  • ಯಾವುದೇ ಒಂದು ಬೈಕ್ ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 110 ಕಿ.ಮೀ ಮೈಲೇಜ್ ನೀಡುತ್ತದೆ ಗೊತ್ತಾದರೆ
  • ಎಷ್ಟು ನೆಮ್ಮದಿ ಸಿಗುತ್ತದೆ ಅಲ್ಲವೇ. ಏಕೆಂದರೆ, ಬೈಕ್ ಮೈಲೇಜ್ ನೀಡಿದಷ್ಟು, ಅದನ್ನು ಓಡಿಸುವ ಮಜಾ ಕೂಡ ಅಷ್ಟೇ ದ್ವಿಗುಣವಾಗುತ್ತದೆ
Best Bikes: 100 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಬೈಕ್ ಖರೀದಿಸಿ ಮಜಾ ಮಾಡಿ! title=
Best Mileage Bikes

Best Mileage Bikes In India: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಬೆಲೆಯ ನಡುವೆ, ಯಾವುದೇ ಒಂದು ಬೈಕ್ ನಿಮಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 110 ಕಿ.ಮೀ ಮೈಲೇಜ್ ನೀಡುತ್ತದೆ ಗೊತ್ತಾದರೆ ಎಷ್ಟು ನೆಮ್ಮದಿ ಸಿಗುತ್ತದೆ ಅಲ್ಲವೇ. ಏಕೆಂದರೆ, ಬೈಕ್ ಹೆಚ್ಚು ಮೈಲೇಜ್ ನೀಡಿದಷ್ಟು, ಅದನ್ನು ಓಡಿಸುವ ಮಜಾ ಕೂಡ ಅಷ್ಟೇ ದ್ವಿಗುಣವಾಗಲಿದೆ. ಏಕೆಂದರೆ ಬೈಕ್ ಓಡಿಸುವ ನಿಮ್ಮ ವೆಚ್ಚ ಕೂಡ ತಗ್ಗಲಿದೆ. ಹೀಗಿರುವಾಗ ಪೆಟ್ರೋಲ್ ಬೆಲೆ ಹೆಚ್ಚಾದರು ಕೂಡ ಅದು ನಿಮ್ಮ ಜೇಬಿನ ಹೊರೆಯನ್ನು ಹೆಚ್ಚಿಸುವುದಿಲ್ಲ. ಇಂದು ನಾವು ನಿಮಗೆ ಅತ್ಯುತ್ತಮ ಮೈಲೇಜ್ ನೀಡುವ ಕೆಲ ಬೈಕ್ ಗಳ ಮಾಹಿತಿಯನ್ನು ನೀಡಲಿದ್ದೇವೆ. ಇವುಗಳಲ್ಲಿ ಒಂದು ಬೈಕ್ 110ಕಿ.ಮೀ ಮೈಲೇಜ್ ನೀಡುತ್ತದೆ. 

TVS Sport
ಇದರ ಬೆಲೆ 60 ಸಾವಿರದಿಂದ 66 ಸಾವಿರ ರೂ. ಇದು ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಆಗಿದೆ. ಈ ಬೈಕ್ ನ 109cc ಎಂಜಿನ್ 8.18bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ನಿರ್ವಹಣಾ ವೆಚ್ಚವೂ ಕೂಡ ತುಂಬಾ ಕಡಿಮೆಯಾಗಿದೆ. ಟಿವಿಎಸ್‌ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕೆಲವು ವಿಮರ್ಶೆಗಳ ಪ್ರಕಾರ, ಈ ಬೈಕ್ 110 ಕಿಮೀ ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.

Hero HF DELUXE
ಇದರ ಬೆಲೆ 56,070 ರಿಂದ 63,790 ರೂ. ಇದರ 97.2cc ಎಂಜಿನ್ 5.9kw ಪವರ್ ಮತ್ತು 8.5Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 100ಕಿ.ಮೀ.ಗೂ ಅಧಿಕ ಮೈಲೇಜ್ ನೀಡಬಲ್ಲದು ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ-Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ?

Bajaj Platina 100 
ಇದರ ಎಕ್ಸ್ ಶೋ ರೂಂ ಬೆಲೆ 53 ಸಾವಿರಗಳಿಂದ ಪ್ರಾರಂಭವಾಗುತ್ತದೆ. ಬಜಾಜ್ ಪ್ಲಾಟಿನಾ 100 102 cc 4-ಸ್ಟ್ರೋಕ್, DTS-i, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದು 5.8 kW ಗರಿಷ್ಠ ಶಕ್ತಿ ಮತ್ತು 8.3 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇದು 70KM ಗಿಂತ ಹೆಚ್ಚು ಮೈಲೇಜ್ ನೀಡಬಲ್ಲದು. ಬೈಕ್‌ನ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ.ಗಳಷ್ಟಾಗಿದೆ.

ಇದನ್ನೂ ಓದಿ-Nitin Gadlkari: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

Bajaj CT110X 
ಇದರ ಎಕ್ಸ್ ಶೋ ರೂಂ ಬೆಲೆ ರೂ. 66 ಸಾವಿರದಿಂದ ಪ್ರಾರಂಭವಾಗುತ್ತದೆ. ಬಜಾಜ್ CT110X 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ 115.45cc ಇಂಜಿನ್ ನಿಂದ ಚಾಲಿತವಾಗಿದೆ. ಇದು 8.6 ಪಿಎಸ್ ಗರಿಷ್ಠ ಶಕ್ತಿ ಮತ್ತು 9.81 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು 70 ಕಿ.ಮೀ.ಗೂ ಅಧಿಕ ಮೈಲೇಜ್ ನೀಡಬಲ್ಲದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News