ಹೊಸ ವರ್ಷಕ್ಕೂ ಮುನ್ನ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳ

7th Pay Commission Fitment Factor:ಇದೀಗ ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿದ್ದು,  ಫಿಟ್‌ಮೆಂಟ್  ಫ್ಯಾಕ್ಟರ್ ನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ.

Written by - Ranjitha R K | Last Updated : Nov 14, 2022, 04:08 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಈ ಬಗ್ಗೆ ಅಪ್ಡೇಟ್ ಬಂದಿದೆ.
  • ಸರ್ಕಾರಿ ನೌಕರರ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ.
  • ಫಿಟ್‌ಮೆಂಟ್ ಫ್ಯಾಕ್ಟರ್ ಸಂಪೂರ್ಣ ಸಂಬಳದ ಮೇಲೆ ಬೀರುತ್ತದೆ ಪರಿಣಾಮ
ಹೊಸ ವರ್ಷಕ್ಕೂ ಮುನ್ನ ಸರ್ಕಾರಿ ನೌಕರರ ವೇತನದಲ್ಲಿ ಭಾರೀ  ಹೆಚ್ಚಳ  title=
7th pay commission

7th Pay Commission Fitment Factor : 52 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರಿಂದ ಫಿಟ್‌ಮೆಂಟ್  ಫ್ಯಾಕ್ಟರ್ ಹೆಚ್ಚಿಸಲು ಬಹಳ ದಿನಗಳಿಂದ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಈ ಬಗ್ಗೆ ಅಪ್ಡೇಟ್ ಬಂದಿದೆ. ಸರ್ಕಾರಿ ನೌಕರರ ಫಿಟ್‌ಮೆಂಟ್  ಫ್ಯಾಕ್ಟರ್ ಬದಲಾವಣೆಯ ನಂತರ,  ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ.  ಇದೀಗ ಹೊಸ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿದ್ದು,  ಫಿಟ್‌ಮೆಂಟ್  ಫ್ಯಾಕ್ಟರ್ ನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ.

ಬದಲಾವಣೆಯು ಸಂಪೂರ್ಣ ಸಂಬಳದ ಮೇಲೆ ಬೀರುತ್ತದೆ  ಪರಿಣಾಮ: 
ಕೇಂದ್ರ ನೌಕರರ ವೇತನ ರಚನೆಯಲ್ಲಿ ಫಿಟ್‌ಮೆಂಟ್ ಅಂಶವು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿನ ಬದಲಾವಣೆಗಳು ವೇತನದ ಮೇಲೆ ಪರಿಣಾಮ ಬೀರುತ್ತವೆ. ಸದ್ಯ  ಫಿಟ್‌ಮೆಂಟ್ ಫ್ಯಾಕ್ಟರ್ ಶೇ.2.57ರಷ್ಟಿದ್ದು, ಈ ಆಧಾರದ ಮೇಲೆ ವೇತನ ನೀಡಲಾಗುತ್ತಿದೆ. ಆದರೆ ಇದನ್ನು 3.68ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬಂದಿತ್ತು. ಇದೀಗ ಹೊಸ ವರ್ಷಕ್ಕೂ ಮುನ್ನ ಡಿಸೆಂಬರ್ ವೇಳೆಗೆ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಹುದು  ಎನ್ನಲಾಗಿದೆ. 

ಇದನ್ನೂ ಓದಿ : ನವೆಂಬರ್‌ನಲ್ಲಿ, ಹ್ಯುಂಡೈ ಕಾರುಗಳ ಮೇಲೆ 1 ಲಕ್ಷದವರೆಗೆ ರಿಯಾಯಿತಿ.!

ಉದ್ಯೋಗಿಗಳ ಕನಿಷ್ಠ ವೇತನ ರೂ 18 ಸಾವಿರ ರೂಪಾಯಿ : 
ಸೆಪ್ಟೆಂಬರ್‌ನಲ್ಲಿ ಡಿಎ ಹೆಚ್ಚಳದ ನಂತರ ಕೇಂದ್ರ ನೌಕರರ ತುಟ್ಟಿಭತ್ಯೆ ಶೇಕಡಾ 38 ಕ್ಕೆ ಏರಿದೆ. ಪ್ರಸ್ತುತ ನೌಕರರ ಕನಿಷ್ಠ ವೇತನ 18,000 ರೂ. ಆಗಿದೆ. ಆದರೆ ಫಿಟ್‌ಮೆಂಟ್ ಫ್ಯಾಕ್ಟರ ಹೆಚ್ಚಳವಾದರೆ ಕನಿಷ್ಠ ವೇತನ 26000  ರೂಪಾಯಿಗೆ ಏರಿಕೆಯಾಗಲಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಈ ರೀತಿಯಾಗಿ ವೇತನ ಬದಲಾಗುತ್ತದೆ : 
2.57 ರ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಮೂಲ ವೇತನವು 18000  ಆಗಿದ್ದರೆ, ಇತರ ಭತ್ಯೆಗಳನ್ನು ಹೊರತುಪಡಿಸಿ, 18,000 X 2.57 = 46260 ಆಗಿದೆ. ಆದರೆ ಇದನ್ನು  3.68ಕ್ಕೆ ಹೆಚ್ಚಿಸಿದರೆ, ನೌಕರರ ಇತರ ಭತ್ಯೆಗಳನ್ನು ಹೊರತುಪಡಿಸಿ ವೇತನ 26000 X 3.68 = 95680 ರೂ. ಆಗುವುದು. 

ಇದನ್ನೂ ಓದಿ : Gold Price Today : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಬೆಳ್ಳಿ ಬೆಲೆ ಸ್ಥಿರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News