Cheque ನೀಡುವ ಮುನ್ನ ತಿಳಿದಿರಲಿ RBI ಹೊಸ ನಿಯಮ, ಇಲ್ಲವಾದರೆ ಎದುರಾದೀತು ಸಮಸ್ಯೆ

ಹೊಸ ನಿಯಮದ ಪ್ರಕಾರ, ನಿಮ್ಮ ಚೆಕ್ ಅನ್ನು ರಜಾದಿನದಲ್ಲೂ ಕ್ಲಿಯರ್ ಮಾಡಲಾಗುತ್ತದೆ. ಹಾಗಾಗಿ, ಈಗ ನೀವು ಕೂಡ ಜಾಗರೂಕರಾಗಿರಬೇಕು.

Written by - Ranjitha R K | Last Updated : Aug 25, 2021, 02:52 PM IST
  • NACH ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ
  • ವಾರಾಂತ್ಯದಲ್ಲಿಯೂ ಮುಂದುವರಿಯಲಿದೆ NACH ಸೇವೆಗಳು
  • ವೇತನ, ಪಿಂಚಣಿ, ಇಎಂಐ ಪಾವತಿಗಳನ್ನು ವಾರಾಂತ್ಯದಲ್ಲಿ ಮಾಡಬಹುದು
Cheque ನೀಡುವ ಮುನ್ನ ತಿಳಿದಿರಲಿ RBI  ಹೊಸ ನಿಯಮ, ಇಲ್ಲವಾದರೆ ಎದುರಾದೀತು ಸಮಸ್ಯೆ   title=
NACH ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ (file photo)

ನವದೆಹಲಿ : RBI New Rule : ಪೇಮೆಂಟ್ ಮಾಡುವವರಿಗೆ ಇಲ್ಲೊಂದು ಪ್ರಮುಖ ಸುದ್ದಿಯಿದೆ. ಈಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಚೆಕ್ ನೀಡುವ ಮೊದಲು, ಆರ್‌ಬಿಐನ ಹೊಸ ನಿಯಮಗಳನ್ನು (RBI New rules) ತಿಳಿದುಕೊಂಡಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 1 ರಿಂದ ಬ್ಯಾಂಕಿಂಗ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ನ್ಯಾಷನಲ್ ಆಟೋಮಾಟೆಡ್ ಕ್ಲಿಯರಿಂಗ್ ಹೌಸ್  (NACH) ಅನ್ನು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಲು RBI ನಿರ್ಧರಿಸಿದೆ. ಈ ಹೊಸ ನಿಯಮವು ಎಲ್ಲಾ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿಗೂ ಅನ್ವಯವಾಗುತ್ತದೆ.

ಚೆಕ್ ನೀಡುವ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳಿ :
ಹೊಸ ನಿಯಮದ ಪ್ರಕಾರ, ನಿಮ್ಮ ಚೆಕ್ (Cheque) ಅನ್ನು ರಜಾದಿನದಲ್ಲೂ ಕ್ಲಿಯರ್ ಮಾಡಲಾಗುತ್ತದೆ. ಹಾಗಾಗಿ, ಈಗ ನೀವು ಕೂಡ ಜಾಗರೂಕರಾಗಿರಬೇಕು. ಏಕೆಂದರೆ, ಈಗ ಶನಿವಾರ ನೀಡಿದ ಚೆಕ್ ಅನ್ನು ಭಾನುವಾರವೂ ಕ್ಲಿಯರ್ ಮಾಡಲಾಗುತ್ತದೆ. ಅಂದರೆ, ಚೆಕ್ ಕ್ಲಿಯರೆನ್ಸ್‌ಗಾಗಿ ಯಾವಾಗಲೂ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ  ಚೆಕ್ ಬೌನ್ಸ್ (Cheque bounce) ಅಪಾಯ ಇದ್ದೇ ಇರುತ್ತದೆ.  ಚೆಕ್ ಬೌನ್ಸ್ ಆದರೆ ದಂಡವನ್ನು ತೆರಬೇಕಾಗುತ್ತದೆ.  ಮೊದಲು, ಚೆಕ್ ನೀಡಿದರೆ ರಜಾದಿನಗಳಲ್ಲಿ ಕ್ಲಿಯರ್ ಆಗುತ್ತಿರಲಿಲ್ಲ.  ಆದರೆ ಈಗ  ರಜಾದಿನದಲ್ಲೂ ಚೆಕ್ ಕ್ಲಿಯರ್ ಆಗುತ್ತದೆ. 

ಇದನ್ನೂ ಓದಿ : Aadhaar Services: ಇಂಟರ್ನೆಟ್ ಇಲ್ಲದೆಯೇ ಬರೀ SMS ಮೂಲಕವೇ ಸಿಗಲಿದೆ ಆಧಾರ್ ಗೆ ಸಂಬಂಧಪಟ್ಟ ಈ ಸೇವೆ

ವಾರಾಂತ್ಯದಲ್ಲಿಯೂ ಸಿಗಲಿದೆ ವೇತನ, ಪಿಂಚಣಿ, ಇಎಂಐ ಪಾವತಿ ಸೌಲಭ್ಯ :
NACH ಎನ್ನುವುದು ಬಲ್ಕ್ ಪೇಮೆಂಟ್ ಸಿಸ್ಟಮ್ ಆಗಿದೆ.  ಇದು ಡಿವಿಡೆಂಡ್, ಬಡ್ಡಿ (interest) , ವೇತನ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಕ್ರೆಡಿಟ್ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ. ಇದಲ್ಲದೇ, ವಿದ್ಯುತ್ ಬಿಲ್, ಗ್ಯಾಸ್, ದೂರವಾಣಿ, ನೀರಿನ ಬಿಲ್ , ಸಾಲದ ಇಎಂಐ (EMI), ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಕಂತು ಪಾವತಿಯ ಸೌಲಭ್ಯವನ್ನೂ ಒದಗಿಸಲಾಗಿದೆ. ಇದರರ್ಥ ಈಗ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವಲ್ಲ , ವಾರಾಂತ್ಯದ ದಿನಗಳಲ್ಲೂ ಈ ಎಲ್ಲಾ ಸೌಲಭ್ಯಗಲು ಜಾರಿಯಲ್ಲಿರಲಿವೆ. 

ಇದನ್ನೂ ಓದಿ : SBI New Rule: ಯಾವುದೇ ವಹಿವಾಟಿಗೂ ಮೊದಲು ಬ್ಯಾಂಕಿನ ಈ ನಿಯಮ ನಿಮಗೂ ತಿಳಿದಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News