Banking Rules: ಮೃತ ಸಂಬಂಧಿಕರ ಬ್ಯಾಂಕ್ ಖಾತೆಯಿಂದ ಅಥವಾ ATM ನಿಂದ ಹಣ ಹಿಂಪಡೆದರೆ ಏನಾಗುತ್ತೆ ಗೊತ್ತಾ?

Banking Rules - ಸಾಮಾನ್ಯವಾಗಿ ಕುಟುಂಬದಲ್ಲಿ ಯಾವುದೇ ಒಬ್ಬ ಸದಸ್ಯರು ಮೃತಪಟ್ಟರೆ, ಅದರ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ಆದರೆ ಆ  ದುಃಖವನ್ನು ಎದುರಿಸಿದ ನಂತರವೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ. ಆ ಪ್ರಮುಖ ಕೆಲಸಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವೂ ಸೇರಿದೆ. ಉದಾಹರಣೆಗೆ, ಕುಟುಂಬದ ಸದಸ್ಯರ ಮರಣದ ನಂತರ, ಅವರ ಬ್ಯಾಂಕ್ ಖಾತೆಯನ್ನು (Bank Account) ಸಾಧ್ಯವಾದಷ್ಟು ಬೇಗ ಮುಚ್ಚಬೇಕೇ? ಸತ್ತವರ ATM ಕಾರ್ಡ್ (ATM Card) ಏನು ಮಾಡಬೇಕು?... ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ ಬನ್ನಿ.

Written by - Nitin Tabib | Last Updated : Nov 13, 2021, 11:20 AM IST
  • ಕುಟುಂಬದಲ್ಲಿ ಯಾವುದೇ ಒಬ್ಬ ಸದಸ್ಯ ಮೃತಪಟ್ಟರೆ, ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ.
  • ಆದರೆ ಕೆಲ ಮಹತ್ವದ ಕೆಲಸಗಳನ್ನು ನಿರ್ವಹಿಸಬೇಕಾದುದು ಅನಿವಾರ್ಯ.
  • ಮೃತವ್ಯಕ್ತಿಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಕೆಲ ಅವುಗಳಲ್ಲಿ ಒಂದು.
Banking Rules: ಮೃತ ಸಂಬಂಧಿಕರ ಬ್ಯಾಂಕ್ ಖಾತೆಯಿಂದ ಅಥವಾ ATM ನಿಂದ ಹಣ ಹಿಂಪಡೆದರೆ ಏನಾಗುತ್ತೆ ಗೊತ್ತಾ? title=
Banking Rules (File Photo)

ನವದೆಹಲಿ: Banking Rules - ಸಾಮಾನ್ಯವಾಗಿ ಕುಟುಂಬದಲ್ಲಿ ಯಾವುದೇ ಒಬ್ಬ ಸದಸ್ಯರು ಮೃತಪಟ್ಟರೆ, ಅದರ ಆಘಾತದಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ, ಆದರೆ ಆ  ದುಃಖವನ್ನು ಎದುರಿಸಿದ ನಂತರವೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ. ಆ ಪ್ರಮುಖ ಕೆಲಸಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸವೂ ಸೇರಿದೆ. ಉದಾಹರಣೆಗೆ, ಕುಟುಂಬದ ಸದಸ್ಯರ ಮರಣದ ನಂತರ, ಅವರ ಬ್ಯಾಂಕ್ ಖಾತೆಯನ್ನು ಸಾಧ್ಯವಾದಷ್ಟು ಬೇಗ ಮುಚ್ಚಬೇಕೇ? ಸತ್ತವರ ATM ಕಾರ್ಡ್ (Bank ATM) ಏನು ಮಾಡಬೇಕು? ಈ ಕುರಿತಾಗಿ RBI ನಿಯಮ (RBI Rule) ಏನು ಹೇಳುತ್ತದೆ? ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ.

ಇತ್ತೀಚೆಗೆ ಪತಿಯೊಬ್ಬ ತನ್ನ ಪತ್ನಿಯ ಸಾವಿನ ನಂತರ ಆಕೆಯ ಬ್ಯಾಂಕ್ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ  (ATM Transaction)ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯ ಸಾವಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ತಪ್ಪಿಸಲು ಪತಿ ಈ ವಿಧಾನವನ್ನು ಅನುಸರಿಸಿದ್ದಾನೆ. ಆದರೆ ಈ ಬುದ್ಧಿಮತ್ತೆ ಆತನಿಗೆ ದುಬಾರಿಯಾಗಿ ಪರಿಣಮಿಸಿದೆ. ಏಕೆಂದರೆ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಿರುವ ಬ್ಯಾಂಕ್ ನವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದರಿಂದ ಎಟಿಎಂ ಮೂಲಕ ಮೃತ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡುವುದು ಕಾನೂನು ಬಾಹಿರವಾಗಿದ್ದು, ಹಣ ಡ್ರಾ ಮಾಡುವ ವ್ಯಕ್ತಿ ಮೃತರ ನಾಮಿನೇ ಆಗಿದ್ದರೂ ಕೂಡ ಅದು ಅಕ್ರಮ ಎಂಬುದು ಪ್ರಕರಣದಿಂದ ಸ್ಪಷ್ಟವಾಗಿದೆ. ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆಸ್ತಿ ಅಥವಾ ಹಣವನ್ನು ನಾಮಿನಿಯ (Nominee) ಹೆಸರಿಗೆ ವರ್ಗಾಯಿಸಲು ಕಾನೂನು ಪ್ರಕ್ರಿಯೆ ಇರುತ್ತದೆ.

ಈ ಕುರಿತಾದ ನಿಯಮ ಏನು ಹೇಳುತ್ತದೆ?
ಅಂತಹ ಪ್ರಕರಣಗಳು ಬ್ಯಾಂಕ್ ಮತ್ತು ಇತರ ಕಾನೂನು ಉತ್ತರಾಧಿಕಾರಿಗಳ ವಂಚನೆಗೆ ಸಮ ಎಂದು ನಿಯಮ ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬರು ಪೊಲೀಸ್ ದೂರು ದಾಖಲಿಸಬಹುದು ಮತ್ತು ತನಿಖೆಗೆ ಆಗ್ರಹಿಸಬಹುದು. ಆರೋಪಗಳ ಆಧಾರದ ಮೇಲೆ ಅದು  ಕ್ರಿಮಿನಲ್ ಶಿಕ್ಷೆ ಅನ್ವಯವಾಗುತ್ತದೆ. ಮೃತರು ತಮ್ಮ ಬ್ಯಾಂಕ್ ಖಾತೆಯಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಮಾಡಿದ್ದರೆ ಮತ್ತು ಅವರಲ್ಲಿ ಒಬ್ಬರು ಆ ಹಣವನ್ನು ಬಳಸಲು ಬಯಸಿದರೆ, ಅವರು ಇತರ ನಾಮಿನಿಯಿಂದ ಒಪ್ಪಿಗೆ ಪತ್ರವನ್ನು ತೆಗೆದುಕೊಂಡು ಅದನ್ನು ಬ್ಯಾಂಕಿಗೆ ಸಲ್ಲಿಸಬೇಕು.

ಈ ಸಂಗತಿಗಳನ್ನು ಗಮನದಲ್ಲಿಡಿ
ಒಬ್ಬ ವ್ಯಕ್ತಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದು ಮತ್ತು ಮರಣಹೊಂದಿದ್ದರೆ, ಮರಣದ ಹಕ್ಕು ಸಲ್ಲಿಸುವ ಮೊದಲು, ಅವನ ಕುಟುಂಬ ಸದಸ್ಯರು ಕೆಲವು ವಿಶೇಷ ವಿಷಯಗಳನ್ನು ನೋಡಿಕೊಳ್ಳಬೇಕು. ಮೃತಪಟ್ಟವರ ಬ್ಯಾಂಕ್ ಖಾತೆ ಜಂಟಿ ಖಾತೆಯೇ ಅಥವಾ ಸಿಂಗಲ್ ಖಾತೆಯೇ ಎಂಬುದನ್ನು ಪರಿಶೀಲಿಸಬೇಕು. ಇದರ ನಂತರ ಬ್ಯಾಂಕ್ ಖಾತೆಯಲ್ಲಿ ನಾಮಿನಿಯ ಹೆಸರು ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಖಾತೆದಾರರು ಮೃತಪಟ್ಟರೆ ಅವರ ಸಂಬಂಧಿಕರು ಬ್ಯಾಂಕ್ ಖಾತೆಯಲ್ಲಿ ಇರಿಸಲಾದ ಮೊತ್ತವನ್ನು ಕ್ಲೈಮ್ ಮಾಡಬಹುದು.

ಇದನ್ನೂ ಓದಿ-PAN Card : 18 ವರ್ಷಕ್ಕಿಂತ ಮುಂಚೆಯೇ 'ಪ್ಯಾನ್ ಕಾರ್ಡ್' ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ಖಾತೆಯನ್ನು ನಿಲ್ಲಿಸಬೇಕಾದರೆ ಏನು ಮಾಡಬೇಕು?
ಒಂದು ವೇಳೆ ನೀವು ಮೃತಪಟ್ಟ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಮುಚ್ಚಲು ಬಯಸುತ್ತಿದ್ದರೆ, ಮ್ರುತವ್ಯಕ್ತಿಯ ನೋಟರೈಸ್ ಮಾಡಿದ ಪ್ರಮಾಣಪತ್ರವನ್ನು ನೀವು ಸಲ್ಲಿಸಬೇಕು. ಸ್ಥಳೀಯ ಪುರಸಭೆಯಲ್ಲಿ ಮರಣ ಪ್ರಮಾಣಪತ್ರವನ್ನು ನೀವು ಸುಲಭವಾಗಿ ಪಡೆಯಬಹುದು. ನಾಮಿನಿ ಇದ್ದರೆ, ಮೃತ ವ್ಯಕ್ತಿಗೆ ಸೇರಿದ ಎಲ್ಲ ಹಣವನ್ನು ಪಡೆಯಬಹುದು. ನಾಮಿನಿ ಇಲ್ಲದಿದ್ದರೆ, ಉತ್ತರಾಧಿಕಾರಿಯಾಗುವ ಕುಟುಂಬದ ಸದಸ್ಯರು ಮರಣ ಪ್ರಮಾನಪತ್ರದೊಂದಿಗೆ ಬ್ಯಾಂಕ್ ನಲ್ಲಿ ತಮ್ಮ ಮತ್ತು ವ್ಯಕ್ತಿಯ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕ್ ನಿಮ್ಮಿಂದ ನಷ್ಟ ಪರಿಹಾರದ (ಇಂಡೆಮ್ನಿಟಿ ಬಾಂಡ್ ) ಬಾಂಡ್ ಕೇಳಬಹುದು.

ಇದನ್ನೂ ಓದಿ-Today Petrol price : ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ: ಇಂಧನಗಳ ಮೇಲೆ 50% ತೆರಿಗೆ ಕಡಿತ!

ಈ ಕುರಿತಾದ RBI ಮಾರ್ಗಸೂಚಿಗಳೇನು?
ಇಂತಹ ವಿಷಯಗಳಲ್ಲಿ ಮೃದು ಧೋರಣೆ ತಾಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಕುಟುಂಬದ ಸದಸ್ಯರ ಮರಣದ ನಂತರ, ಬ್ಯಾಂಕ್‌ಗೆ ಮಾಹಿತಿ ನೀಡಲು ನಿಗದಿತ ಕಾಲಮಿತಿ ಇರುವುದಿಲ್ಲ. ಸಂತ್ರಸ್ತೆಯ ಕುಟುಂಬವು ಮಾನಸಿಕವಾಗಿ ಸಿದ್ಧರಾಗಿದ್ದರೆ, ಆಗ ಈ ಕೆಲಸವನ್ನು ಮಾಡಬಹುದು. ಆರ್‌ಬಿಐನ ಸೂಚನೆಗಳ ಪ್ರಕಾರ, ಕುಟುಂಬ ಸದಸ್ಯರು ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದರೆ, ಬ್ಯಾಂಕ್ ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ.

ಇದನ್ನೂ ಓದಿ-World's Most Beatuiful Car: ವಿಶ್ವದ ಅತ್ಯಂತ ಸುಂದರ ಕಾರು ಎಂಬ ಹೆಗ್ಗಳಿಕೆಗೆ ಈ ಕಾರು ಪಾತ್ರ, ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News