Bank Merger : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ

ನೀವು Punjab National Bank  ಗ್ರಾಹಕರಾಗಿದ್ದರೆ, ಮಾರ್ಚ್ 31 ರ ಒಳಗೆ  ಹೊಸ IFSC ಮತ್ತು MICR ಸಂಖ್ಯೆಯನ್ನು ಸಂಖ್ಯೆಯನ್ನು ಪಡೆಯಬೇಕು. ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳದಿದ್ದರೆ,  ಡಿಜಿಟಲ್ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ.

Written by - Ranjitha R K | Last Updated : Mar 7, 2021, 03:04 PM IST
  • ಮಾರ್ಚ್ 31 ರೊಳಗೆ ಹೊಸ IFSC ಮತ್ತು MICR ಸಂಖ್ಯೆಯನ್ನು ಸಂಖ್ಯೆಯನ್ನು ಪಡೆಯಬೇಕು
  • ಮಾರ್ಚ್ 31 ರ ನಂತರ ಹಳೆಯ ಚೆಕ್‌ಗಳು ಮಾನ್ಯವಾಗಿರುವುದಿಲ್ಲ
  • ಖಾತೆದಾರರು ಹೋಂಬ್ರಾಂಚ್ ನಿಂದ ಹೊಸ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಸಂಖ್ಯೆಯನ್ನು ಪಡೆಯಬೇಕು
Bank Merger : ಮಾರ್ಚ್ 31 ರೊಳಗೆ  ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ title=
ಮಾರ್ಚ್ 31 ರ ನಂತರ ಹಳೆಯ ಚೆಕ್‌ಗಳು ಮಾನ್ಯವಾಗಿರುವುದಿಲ್ಲ (file photo)

ದೆಹಲಿ : ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (Oriental Bank of Commerce) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು (United Bank of India) ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ (Punjab National Bank) ವಿಲೀನಗೊಳಿಸಲಾಗಿದೆ. ಬ್ಯಾಂಕ್ ವಿಲೀನದ ದ ಒಂದು ವರ್ಷದ ನಂತರ, ಮತ್ತೊಂದು ಹೊಸ ಬದಲಾವಣೆ ನಡೆಯಲಿದೆ. ಎಲ್ಲಾ ಖಾತೆದಾರರು ಹೊಸ IFSC ಮತ್ತು MICR ಸಂಖ್ಯೆಯನ್ನು ಆದಷ್ಟು ಬೇಗ ಪಡೆಯಬೇಕು ಎಂದು ಪಿಎನ್‌ಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ  ಹೇಳಿದೆ. 

ಮಾರ್ಚ್ 31 ರೊಳಗೆ ಈ ಕೆಲಸ ಮುಗಿಸಿಕೊಳ್ಳಿ : 
ನೀವು Punjab National Bank  ಗ್ರಾಹಕರಾಗಿದ್ದರೆ, ಮಾರ್ಚ್ 31 ರ ಒಳಗೆ  ಹೊಸ IFSC ಮತ್ತು MICR ಸಂಖ್ಯೆಯನ್ನು ಸಂಖ್ಯೆಯನ್ನು ಪಡೆಯಬೇಕು. ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಳ್ಳದಿದ್ದರೆ,  ಡಿಜಿಟಲ್ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ. ಪಿಎನ್‌ಬಿ ತನ್ನ ಟ್ವಿಟ್ಟರ್ (twitter)ಹ್ಯಾಂಡಲ್‌ನಲ್ಲಿ  ಮಾಹಿತಿಯನ್ನು ನೀಡಿದೆ. ಮಾರ್ಚ್ 31 ರ ನಂತರ ಹಳೆಯ ಚೆಕ್‌ಗಳು ಮಾನ್ಯವಾಗಿರುವುದಿಲ್ಲ ಎಂದು ಪಿಎನ್‌ಬಿ ಸ್ಪಷ್ಟಪಡಿಸಿದೆ. ಪೋಸ್ಟ್ ಡೇಟ್ ಚೆಕ್ ಎಂದು ಮೊದಲೇ ನೀಡಿದ್ದರೂ ಕೂಡಾ ಮಾರ್ಚ್ 31ರ ನಂತರ ಹಳೆ ಚೆಕ್ ಗಳನ್ನು ಸ್ವೀಕರಿಸಲಾಗುವುದಿಲ್ಲ. 

ಇದನ್ನೂ ಓದಿ : SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್‌ ಲಭ್ಯ

ಹೊಸ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ತೆಗೆದುಕೊಳ್ಳುವ ವಿಧಾನ :
ಎಲ್ಲಾ ಖಾತೆದಾರರು ಮಾರ್ಚ್ 31 ರೊಳಗೆ  ಹೋಂಬ್ರಾಂಚ್ ನಿಂದ  ಹೊಸ  ಮತ್ತು IFSC ಮತ್ತು MICR ಸಂಖ್ಯೆಯನ್ನು ಪಡೆಯಬೇಕು ಎಂದು PNB ಸ್ಪಷ್ಟವಾಗಿ ಹೇಳಿದೆ. ಹೋಂ ಬ್ರಾಂಚ್ ನಿಂದ ಐಎಫ್‌ಎಸ್‌ಸಿ ಮತ್ತು ಎಂಐಸಿಆರ್ ಸಂಖ್ಯೆಯನ್ನು ಪಡೆಯುವಲ್ಲಿ ಸಮಸ್ಯೆಗಳು ಎದುರಾದಲ್ಲಿ ಬೇರೆ ಶಾಖೆಗಳನ್ನು ಕೂಡಾ ಸಂಪರ್ಕಿಸಬಹುದು. ಇದಲ್ಲದೆ, ಪಿಎನ್‌ಬಿಯ 1800-180-2222 ಮತ್ತು 1800-103-2222 toll free numberಗಳನ್ನು ಸಂಪರ್ಕಿಸಬಹುದು. ಪಿಎನ್‌ಬಿಯನ್ನು ಇಮೇಲ್ ಮೂಲಕವೂ ಸಂಪರ್ಕಿಸಬಹುದು. ಇದಕ್ಕಾಗಿ, ಖಾತೆದಾರನು care@pnb.co.in ಗೆ ಮೇಲ್ ಮಾಡಬೇಕಾಗುತ್ತದೆ.

ಈ ಬದಲಾವಣೆಗೆ ಕಾರಣವೇನು? :
Oriental Bank of Commerce ಮತ್ತು United Bank of India ಕಳೆದ ವರ್ಷ ಏಪ್ರಿಲ್ 1 ರಂದು ಪಿಎನ್‌ಬಿ ಜೊತೆ ವಿಲೀನಗೊಳಿಸಲಾಯಿತು.  ವಿಲೀನಗೊಂಡ ನಂತರ ಎರಡೂ ಬ್ಯಾಂಕುಗಳ ಗ್ರಾಹಕರು ಪಿಎನ್‌ಬಿಯ ಖಾತೆದಾರರಾಗಿದ್ದಾರೆ. ಪಿಎನ್‌ಬಿ ತನ್ನ ದಾಖಲೆಯನ್ನು ಸಹ ಅಪ್ ಮಾಡಿಕೊಂಡಿದೆ. ಹಾಗಾಗಿ, ಡಿಜಿಟಲ್ ವಹಿವಾಟಿನಲ್ಲಿ ಯಾವುದೇ ರೀತಿಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. 

ಇದನ್ನೂ ಓದಿ : Banking Facility In Villages: ಇನ್ಮುಂದೆ ಅನ್ನದಾತರಿಗೆ ಅವರ ಗ್ರಾಮದಲ್ಲಿಯೇ ಸಿಗಲಿದೆ ಬ್ಯಾಂಕಿಂಗ್ ಸೇವೆ

ಪಿಎನ್‌ಬಿ ಈಗ ದೇಶಾದ್ಯಂತ 11,000 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಪಿಎನ್‌ಬಿ ಪ್ರಕಾರ, ದೇಶಾದ್ಯಂತ 13,000 ಕ್ಕೂ ಹೆಚ್ಚು ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News