ಸರ್ಕಾರಿ ನೌಕರರಿಗಾಗಿ ಬ್ಯಾಂಕ್ ಪರಿಚಯಿಸಿದೆ ಹೊಸ Salary Plus Account Scheme, ಉಚಿತವಾಗಿ ಸಿಗಲಿದೆ ಒಂದು ಕೋಟಿವರೆಗಿನ ಪ್ರಯೋಜನಗಳು

ಬ್ಯಾಂಕ್ ಆಫ್ ಇಂಡಿಯಾ  ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ BOI ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ ಮೂರು ವಿಧದ ವೇತನ ಖಾತೆಯ  ಸೌಲಭ್ಯವನ್ನು ನೀಡುತ್ತದೆ. 

Written by - Ranjitha R K | Last Updated : Sep 13, 2021, 06:01 PM IST
  • ಸರ್ಕಾರಿ ನೌಕರರಿಗೆ BOI ವಿಶೇಷ ಕೊಡುಗೆ
  • ಬ್ಯಾಂಕ್ ವಿಶೇಷ ಸ್ಯಾಲರಿ ಅಕೌಂಟ್ ಪರಿಚಯಿಸಿದೆ
  • 1 ಕೋಟಿ ರೂ ಮೌಲ್ಯದ ಉಚಿತ ಅಪಘಾತ ವಿಮೆ
ಸರ್ಕಾರಿ ನೌಕರರಿಗಾಗಿ ಬ್ಯಾಂಕ್ ಪರಿಚಯಿಸಿದೆ ಹೊಸ  Salary Plus Account Scheme, ಉಚಿತವಾಗಿ ಸಿಗಲಿದೆ ಒಂದು ಕೋಟಿವರೆಗಿನ ಪ್ರಯೋಜನಗಳು  title=
ಸರ್ಕಾರಿ ನೌಕರರಿಗೆ BOI ವಿಶೇಷ ಕೊಡುಗೆ (file photo)

ನವದೆಹಲಿ : ಇದು ಸರ್ಕಾರಿ ನೌಕರರಿಗೆ ಅಗತ್ಯ ಮಾಹಿತಿ. ಬ್ಯಾಂಕ್ ಆಫ್ ಇಂಡಿಯಾ (BOI) ಸರ್ಕಾರಿ ಉದ್ಯೋಗಿಗಳಿಗಾಗಿ ವಿಶೇಷ ಯೋಜನೆಯನ್ನು ಆರಂಭಿಸಿದೆ. ಬ್ಯಾಂಕ್ ಸರ್ಕಾರಿ ಉದ್ಯೋಗಿಗಳಿಗಾಗಿ Salary Plus Account Scheme ಪರಿಚಯಿಸಿದೆ.  ಇದರ ಅಡಿಯಲ್ಲಿ, ಉದ್ಯೋಗಿಗಳು ಉಚಿತವಾಗಿ 1 ಕೋಟಿ ರೂಪಾಯಿಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದೆ. 

ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ : 
ಬ್ಯಾಂಕ್ ಆಫ್ ಇಂಡಿಯಾ (BOI) ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ BOI ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ (Salary Plus Account Scheme) ಅಡಿಯಲ್ಲಿ ಮೂರು ವಿಧದ ವೇತನ ಖಾತೆಯ  ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯ ಲಾಭವನ್ನು ಪ್ಯಾರಾ ಮಿಲಿಟರಿ ಪಡೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಲು ಕೂಡಾ ಪಡೆಯಬಹುದು.   ಈ ಸೌಲಭ್ಯವು ಸ್ಯಾಲರಿ ಅಕೌಂಟ್ ನಲ್ಲಿ ಮಾತ್ರ ಲಭ್ಯವಿದೆ.  

ಇದನ್ನೂ ಓದಿ: Atal Pension Yojana: ವಿವಾಹಿತರಿಗೆ ಭಾರೀ ಲಾಭವಾಗಲಿದೆ ಈ ಸರ್ಕಾರಿ ಯೋಜನೆ , ಪ್ರತಿ ತಿಂಗಳು ಸಿಗಲಿದೆ 10,000 ಪಿಂಚಣಿ

1 ಕೋಟಿ ರೂಮೌಲ್ಯದ ಉಚಿತ ಆಕ್ಸಿಡೆಂಟಲ್ ಇನ್ಶ್ಯುರೆನ್ಸ್ :
BOI ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿಯಲ್ಲಿ ಗ್ರಾಹಕರು 1 ಕೋಟಿ ರೂ.ವರೆಗೆ ಉಚಿತ ಆಕಸ್ಮಿಕ ವಿಮೆಯ (Insurance) ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯಡಿ, ವೇತನ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ  30 ಲಕ್ಷ ರೂ.ಗಳವರೆಗೆ ಆಕ್ಸಿಡೆಂಟಲ್ ಡೆತ್ ಕವರ್ ಸಿಗುತ್ತದೆ. ಬ್ಯಾಂಕಿನ ಟ್ವೀಟ್ ಪ್ರಕಾರ, ವೇತನ ಖಾತೆದಾರರಿಗೆ 1 ಕೋಟಿ ಮೌಲ್ಯದ ಉಚಿತ ಏರ್ ಆಕ್ಸಿಡೆಂಟಲ್ ಇನ್ಶ್ಯುರೆನ್ಸ್ (Air accidental insurance) ಕೂಡಾ ನೀಡಲಾಗುತ್ತದೆ. 

ಸಿಗಲಿದೆ ಇನ್ನೂ ಅನೇಕ ಸೌಲಭ್ಯ : 
1. BOI ಸ್ಯಾಲರಿ ಪ್ಲಸ್ ಅಕೌಂಟ್ ಸ್ಕೀಮ್ ಅಡಿ,  2 ಲಕ್ಷದವರೆಗೆ ಓವರ್ ಡ್ರಾಫ್ಟ್ ಸೌಲಭ್ಯವು ಲಭ್ಯವಿರಲಿದೆ.
2. ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ,  2 ಲಕ್ಷ ರೂ.ಗಳವರೆಗೆ ಹಣವನ್ನು ಪಡೆಯಬಹುದು. .
2. BOI ಗೋಲ್ಡ್ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ (credit card) ಅನ್ನು ವೇತನ ಖಾತೆದಾರರಿಗೆ ಉಚಿತವಾಗಿ ನೀಡುತ್ತಿದೆ.
3. ಇದರ ಹೊರತಾಗಿ, ಗ್ರಾಹಕರು ವಾರ್ಷಿಕವಾಗಿ 100 ಚೆಕ್‌ಗಳನ್ನು ಉಚಿತವಾಗಿ ಪಡೆಯುತ್ತಾರೆ. ಅಲ್ಲದೆ, ಡಿಮ್ಯಾಟ್ ಖಾತೆಗಳ ಮೇಲೆ ಎಎಂಸಿ ಶುಲ್ಕವನ್ನು ವಿಧಿಸುವುದಿಲ್ಲ. 

ಇದನ್ನೂ ಓದಿ: ಇನ್ನು ಆಧಾರ್ ಕಾರ್ಡ್ ನಂತೆಯೇ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್ ಕಾರ್ಡ್, ಯಾಕೆಬೇಕು ಈ ಕಾರ್ಡ್

ಖಾಸಗಿ ವಲಯದ ಸ್ಯಾಲರಿ ಅಕೌಂಟ್ : 
ಎಲ್ಲಕ್ಕಿಂತ ಮುಖ್ಯವಾಗಿ, ಖಾಸಗಿ ವಲಯದ ಉದ್ಯೋಗಿಗಳು ಬ್ಯಾಂಕ್ ಆಫ್ ಇಂಡಿಯಾದ (Bank of India) ಸ್ಯಾಲರಿ ಅಕೌಂಟ್ ಲಾಭವನ್ನು ಪಡೆಯಬಹುದು. ತಿಂಗಳಿಗೆ 10,000 ರೂ ಗಳಿಸುವವರು ಈ ಯೋಜನೆಯಡಿ ಸ್ಯಾಲರಿ ಅಕೌಂಟ್  ತೆರೆಯಬಹುದು. ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ ಇರುವುದಿಲ್ಲ. ಸ್ಯಾಲರಿ ಅಕೌಂಟ್ ದಾರರಿಗೆ  5 ಲಕ್ಷ ರೂ.ಗಳ ಗುಂಪು ವೈಯಕ್ತಿಕ ಅಪಘಾತ ಮರಣ ವಿಮಾ ರಕ್ಷಣೆ ಸಿಗುತ್ತದೆ. ಇದರಲ್ಲಿ, ಎಲ್ಲರಿಗೂ ಉಚಿತ ಗ್ಲೋಬಲ್ ಡೆಬಿಟ್ ಕಮ್ (Global debit card) ಎಟಿಎಂ ಕೂಡ ಸಿಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News