ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಪೂರೈಸಿಕೊಳ್ಳಿ

Bank Holidays List:ಏಪ್ರಿಲ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವುದಾದರೆ ಈಗಿನಿಂದಲೇ   ಪೂರೈಸಿಕೊಳ್ಳಿ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ರಜಾದಿನಗಳು ಬೇರೆ ಬೇರೆಯಾಗಿರುತ್ತದೆ.   

Written by - Ranjitha R K | Last Updated : Mar 10, 2023, 11:52 AM IST
  • ಪ್ರಸಕ್ತ ಹಣಕಾಸು ವರ್ಷ 2022-23 ಕೊನೆಗೊಳ್ಳಲಿದೆ.
  • ಏಪ್ರಿಲ್ 2023 ರಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ ರಜೆ
  • ಏಪ್ರಿಲ್ 4 ರಂದು ಮಹಾವೀರ ಜಯಂತಿ ರಜೆ
ಏಪ್ರಿಲ್ ನಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ ! ಬ್ಯಾಂಕ್ ಕೆಲಸವಿದ್ದರೆ ತಕ್ಷಣ ಪೂರೈಸಿಕೊಳ್ಳಿ  title=

Bank Holidays List: ಪ್ರಸಕ್ತ ಹಣಕಾಸು ವರ್ಷ 2022-23 ಕೊನೆಗೊಳ್ಳಲಿದೆ. ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹೊಸ ಹಣಕಾಸು ವರ್ಷ 2023-24 ರೊಂದಿಗೆ ಕೆಲವು ಪ್ರಮುಖ ಬದಲಾವಣೆಗಳು ಕಂಡುಬರುತ್ತವೆ. ಈ ಬದಲಾವಣೆಗಳು ನೇರವಾಗಿ ಹಣ ಮತ್ತು ಬ್ಯಾಂಕುಗಳಿಗೆ ಸಂಬಂಧಿಸಿದ್ದಾಗಿದೆ. ಏಪ್ರಿಲ್‌ನಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವುದಾದರೆ ಈಗಿನಿಂದಲೇ   ಪೂರೈಸಿಕೊಳ್ಳಿ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ರಜಾದಿನಗಳು ಬೇರೆ ಬೇರೆಯಾಗಿರುತ್ತದೆ. 

ಏಪ್ರಿಲ್ 2023 ರಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ ರಜೆ : 
ದೇಶದ ಹೆಚ್ಚಿನ ಬ್ಯಾಂಕ್‌ಗಳ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ರಿಸರ್ವ್ ಬ್ಯಾಂಕ್ ಒಪ್ಪಿಗೆಯ ನಂತರ ಬ್ಯಾಂಕ್ ರಜಾದಿನಗಳನ್ನು ನಿರ್ಧರಿಸಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ. ಮುಂದಿನ ತಿಂಗಳು ಏಪ್ರಿಲ್‌ನಲ್ಲಿ 15 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.  ಆರ್‌ಬಿಐ ಆದೇಶದ ಪ್ರಕಾರ, ಏಪ್ರಿಲ್ 2023 ರಲ್ಲಿ, ಎರಡನೇ ಮತ್ತು ನಾಲ್ಕನೇ ಶನಿವಾರಗಳೊಂದಿಗೆ ಭಾನುವಾರ ಸೇರಿದಂತೆ ಒಟ್ಟು 15 ದಿನಗಳವರೆಗೆ ಬ್ಯಾಂಕ್ ರಜೆ ಇರಲಿದೆ. 

ಇದನ್ನೂ ಓದಿ : 7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!

ಏಪ್ರಿಲ್ 4 ರಂದು ಮಹಾವೀರ ಜಯಂತಿ ರಜೆ :
ಏಪ್ರಿಲ್ ತಿಂಗಳ ಮೊದಲ ರಜಾದಿನವು ಏಪ್ರಿಲ್ 1 ರಂದು  ಇಯರ್ ಎಂಡಿಂಗ್ ನೊಂದಿಗೆ ಪ್ರಾರಂಭವಾಗುತ್ತದೆ. ಮಹಾವೀರ ಜಯಂತಿ ಪ್ರಯುಕ್ತ ಏಪ್ರಿಲ್ 4 ರಂದು ಕೂಡಾ ರಜೆ ಇರುತ್ತದೆ. ಇಡೀ ತಿಂಗಳು ಬ್ಯಾಂಕಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ, ಯಾವುದೇ ಸಮಸ್ಯೆ ಇರುವುದಿಲ್ಲ. ಈ ಅವಧಿಯಲ್ಲಿ ಎಟಿಎಂ, ನಗದು ಠೇವಣಿ, ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಕಾರ್ಯನಿರ್ವಹಿಸುತ್ತದೆ. ವಿವಿಧ ರಾಜ್ಯಗಳಿಗೆ ಅನುಗುಣವಾಗಿ ರಜಾ ದಿನಗಳು ಬದಲಾಗಬಹುದು.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಭಾನುವಾರದ ಹೊರತಾಗಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಿರುತ್ತವೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಆರ್‌ಬಿಐ ಏಪ್ರಿಲ್ 1, 4, 5, 7, 14, 15, 18, 21 ಮತ್ತು 22 ರಂದು ಬ್ಯಾಂಕ್ ರಜಾದಿನಗಳನ್ನು ಘೋಷಿಸಿದೆ. ಇದಲ್ಲದೆ, ಏಪ್ರಿಲ್‌ನಲ್ಲಿ ಏಪ್ರಿಲ್ 2, 9, 16 ರಂದು 5 ಭಾನುವಾರಗಳು ಬರುತ್ತಿವೆ. ಏಪ್ರಿಲ್ 8 ಮತ್ತು 22 ಎರಡನೇ ಮತ್ತು ನಾಲ್ಕನೇ ಶನಿವಾರಗಳಾಗಿವೆ. 

ಇದನ್ನೂ ಓದಿ : ITR ಫೈಲ್ ಮಾಡುವ ಮುನ್ನ ಗಮನಿಸಿ! ಈ ಕೆಲಸ ಮಾಡದೇ ಹೋದರೆ ಆಗುವುದಿಲ್ಲ ಟ್ಯಾಕ್ಸ್ ರಿಟರ್ನ್

ಏಪ್ರಿಲ್ 2023 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ :
1. ಏಪ್ರಿಲ್ 1, 2023 (ಶನಿವಾರ) :  ಇಯರ್ ಎಂಡಿಂಗ್ 
2. ಏಪ್ರಿಲ್ 2, 2023 (ಭಾನುವಾರ): ರಜೆ
3. ಏಪ್ರಿಲ್ 4, 2023 (ಮಂಗಳವಾರ) - ಮಹಾವೀರ ಜಯಂತಿ
4. ಏಪ್ರಿಲ್ 5, 2023 (ಬುಧವಾರ) )- ಬಾಬು ಜಗಜೀವನ್ ರಾಮ್ ಜನ್ಮದಿನ
5. ಏಪ್ರಿಲ್ 7, 2023 (ಶುಕ್ರವಾರ)-  ಗುಡ್ ಫ್ರೈಡೆ 
6. ಏಪ್ರಿಲ್ 8, 2023 (ಶನಿವಾರ)- ತಿಂಗಳ ಎರಡನೇ ಶನಿವಾರ
7. ಏಪ್ರಿಲ್ 9, 2023 (ಭಾನುವಾರ)- ರಜಾ ದಿನ
8. ಏಪ್ರಿಲ್ 14, 2023 (ಶುಕ್ರವಾರ) - ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ / ಬೋಹಾಗ್ ಬಿಹು / ಚೀರಾಬಾ / ಬೈಸಾಖಿ / ಬೈಸಾಖಿ / ತಮಿಳು ಹೊಸ ವರ್ಷದ ದಿನ / ಮಹಾ ಬಿಸುಭಾ ಸಂಕ್ರಾಂತಿ / ಬಿಜು ಹಬ್ಬ / ಬಿಸು ಹಬ್ಬ 
9. ಏಪ್ರಿಲ್ 15, 2023 (ಶನಿವಾರ) - ವಿಷು /
ಬೋಹಾಗ್ ಬಿಹು / ಹಿಮಾಚಲ ದಿನ / ಬೆಂಗಾಲಿ ಹೊಸ ವರ್ಷದ ದಿನ
10. ಏಪ್ರಿಲ್ 16, 2023 (ಭಾನುವಾರ) - ರಜಾದಿನ
11. ಏಪ್ರಿಲ್ 18, 2023 (ಮಂಗಳವಾರ) - ಶಾಬ್-ಎ-ಖಾದರ್
12. 21 ಏಪ್ರಿಲ್ 2023 (ಶುಕ್ರವಾರ) - ಈದ್-ಉಲ್-ಫಿತರ್ (ರಂಜಾನ್ ಈದ್) / ಗರಿಯಾ ಪೂಜೆ / ಜುಮಾತ್-ಉಲ್-ವಿದಾ 
13.22 ಏಪ್ರಿಲ್ 2023 (ಶನಿವಾರ) - ತಿಂಗಳ ನಾಲ್ಕನೇ ಶನಿವಾರ ಮತ್ತು ರಂಜಾನ್ ಈದ್ (ಈದ್-ಉಲ್-ಫಿತರ್ )
14. 23 ಏಪ್ರಿಲ್ 2023 (ಭಾನುವಾರ) - ರಜೆ
15. 30 ಏಪ್ರಿಲ್ 2023 (ಭಾನುವಾರ) - ರಜೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News