Bank FD: ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ FD ಮಾಡುವವರಿಗೆ RBI ನೀಡಿದೆ ಮಹತ್ವದ ಮಾಹಿತಿ

Bank FD Interest Rates 2022: ನೀವೂ ಕೂಡ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಅದ್ಭುತ ರಿಟರ್ನ್ ಸಿಗುತ್ತಿದೆ. ಬನ್ನಿ ಈ ಕುರಿತು ಆರ್.ಬಿ.ಐ ನೀಡಿದ ಮಾಹಿತಿ ಏನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Oct 10, 2022, 06:25 PM IST
  • ನೀವೂ ಕೂಡ ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಮಾಡಲು ಯೋಜನೆ ರೂಪಿಸುತ್ತಿದ್ದರೆ,
  • ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಅದ್ಭುತ ರಿಟರ್ನ್ ಸಿಗುತ್ತಿದೆ.
  • ಬನ್ನಿ ಈ ಕುರಿತು ಆರ್.ಬಿ.ಐ ನೀಡಿದ ಮಾಹಿತಿ ಏನು ತಿಳಿದುಕೊಳ್ಳೋಣ ಬನ್ನಿ,
Bank FD: ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ FD ಮಾಡುವವರಿಗೆ RBI ನೀಡಿದೆ ಮಹತ್ವದ ಮಾಹಿತಿ title=
Bank FD Rates

Bank FD Interest Rates: ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡುವ ಯೋಜನೆ ರೂಪಿಸುತ್ತಿರುವವರಿಗೆ ಮಹತ್ವದ ಮಾಹಿತಿಯೊಂದು ಪ್ರಕಟವಾಗಿದೆ.  ನೀವು ಸ್ಥಿರ ಠೇವಣಿ  ಮಾಡುವ ಯೋಜನೆಯನ್ನು ಹೊಂದಿದ್ದರೆ, ಗ್ರಾಹಕರಿಗೆ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮ ಆದಾಯವನ್ನು ನೀಡುತ್ತಿವೆ. ನೀವು ಎಫ್‌ಡಿ ಮಾಡಿದರೆ ಯಾವ ಬ್ಯಾಂಕ್‌ನಲ್ಲಿ ಶೇ.7 ರಷ್ಟು ಬಡ್ಡಿದರದ ಲಾಭವನ್ನು ನೀವು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಕೆನರಾ ಬ್ಯಾಂಕ್, ಆರ್ ಬಿಎಲ್ ಬ್ಯಾಂಕ್, ಬಂಧನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಪಟ್ಟಿಯಲ್ಲಿ ಶಾಮೀಲಾಗಿವೆ.

ರೆಪೋ ದರ ಹೆಚ್ಚಿಸಿದ ಆರ್.ಬಿ.ಐ
ಆರ್‌ಬಿಐ ಸತತವಾಗಿ ನಾಲ್ಕನೇ ಬಾರಿಗೆ ರೆಪೊ ದರವನ್ನು ಹೆಚ್ಚಿಸಿರುವುದು ಬ್ಯಾಂಕ್ ಗಳು ನೀಡುವ ಎಫ್‌ಡಿಗಳ ಬಡ್ಡಿದರಗಳ ಮೇಲೆ ಪರಿಣಾಮ ಬೀರಿದೆ ಎಂಬುದು ಇಲ್ಲಿ ಗಮನಾರ್ಹ. ಆರ್‌ಬಿಐನ ಈ ನಿರ್ಧಾರದಿಂದ ಸಾಲ ಪಡೆಯುವುದು ಒಂದೆಡೆ ದುಬಾರಿಯಾದರೆ. ಮತ್ತೊಂದೆಡೆ, ಗ್ರಾಹಕರು ಎಫ್‌ಡಿಯಲ್ಲಿ ಮೇಲೆ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಒಂದೆಡೆ ರೆಪೊ ದರ ಶೇ.5.90ಕ್ಕೆ ಏರಿಕೆಯಾಗಿದ್ದರೆ, ಇನ್ನೊಂದೆಡೆ ಬ್ಯಾಂಕ್‌ಗಳ ಬಡ್ಡಿ ದರವೂ ಶೇ.7 ದಾಟಿದೆ.

ಕೆನರಾ ಬ್ಯಾಂಕ್ FD
ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಇತ್ತೀಚೆಗೆ 2 ಕೋಟಿಗಿಂತ ಕಡಿಮೆ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಕೆನರಾ ಬ್ಯಾಂಕ್ 666 ದಿನಗಳ ಕಾಲಾವಧಿಯೊಂದಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯ ಪ್ರಕಾರ, ಖಾಸಗಿ ವಲಯದ ಸಾಲದಾತರು ತಮ್ಮ ಸಾಮಾನ್ಯ ಗ್ರಾಹಕರಿಗೆ ಶೇಕಡಾ 7 ರಷ್ಟು ಬಡ್ಡಿದರವನ್ನು ನೀಡುತ್ತಿವೆ, ಆದರೆ ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ ಶೇಕಡಾ 7.5 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ.

ಈ ಖಾಸಗಿ ವಲಯದ ಬ್ಯಾಂಕ್‌ಗಳು ಶೇ 7ರಷ್ಟು ಬಡ್ಡಿ ನೀಡುತ್ತಿವೆ
ಖಾಸಗಿ ವಲಯದ ಬಂಧನ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಆರ್‌ಬಿಎಲ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಎಫ್‌ಡಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ.

ಬಂಧನ್ ಬ್ಯಾಂಕ್ FD ದರಗಳು
>> ಬಂಧನ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇ..7 ಮತ್ತು ಹಿರಿಯ ನಾಗರಿಕರಿಗೆ ಶೇ.7.5 ದರದಲ್ಲಿ 18 ತಿಂಗಳ ಮೇಲಿನ ಮತ್ತು 2 ವರ್ಷಕ್ಕಿಂತ ಕಡಿಮೆ FD ಗಳಲ್ಲಿ ಬಡ್ಡಿಯನ್ನು ನೀಡುತ್ತಿದೆ.

>> 2 ವರ್ಷದಿಂದ ಮೇಲ್ಪಟ್ಟು ಮತ್ತು 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳಲ್ಲಿ ಸಾಮಾನ್ಯ ಗ್ರಾಹಕರಿಗೆ ಶೇ.7.00 ಮತ್ತು ಹಿರಿಯ ನಾಗರಿಕರು ಶೇ.7.50 ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ.

>> 3 ವರ್ಷದಿಂದ ಮೇಲ್ಪಟ್ಟು ಮತ್ತು  5 ವರ್ಷಕ್ಕಿಂತ ಕಡಿಮೆ ಅವಧಿಯ FD ಗಳಲ್ಲಿ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ.7.00 ಮತ್ತು ಹಿರಿಯ ನಾಗರಿಕರಿಗೆ ಶೇ.7.50 ಶೇಕಡಾ ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕಿನ ಈ ದರಗಳು ಆಗಸ್ಟ್ 22 ರಿಂದ ಅನ್ವಯವಾಗುತ್ತವೆ.

RBL ಬ್ಯಾಂಕ್ FD ದರಗಳು 
ಇದಲ್ಲದೆ ಆರ್‌ಬಿಎಲ್ ಬ್ಯಾಂಕ್ ಕೂಡ ಗ್ರಾಹಕರಿಗೆ ಶೇ.7 ರ ಬಡ್ಡಿದರದ ಲಾಭವನ್ನು ನೀಡುತ್ತಿದೆ. RBL ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇ.7 ಪ್ರತಿಶತ ಮತ್ತು ಹಿರಿಯ ನಾಗರಿಕರಿಗೆ ಶೇ. 7.5 ರ ದರದಲ್ಲಿ 15 ತಿಂಗಳುಗಳಲ್ಲಿ ಮುಕ್ತಾಯಗೊಳ್ಳುವ FD ಗಳಲ್ಲಿ ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿ-PFRDA New Rule : NPS ಹೂಡಿಕೆದಾರರಿಗೆ ಗಮನಕ್ಕೆ : ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಇಲಾಖೆ 

>> ಇದನ್ನು ಹೊರತುಪಡಿಸಿ, 15 ತಿಂಗಳ 1 ದಿನದಿಂದ 725 ದಿನಗಳ ಎಫ್‌ಡಿಗಳಲ್ಲಿ, ಬ್ಯಾಂಕ್ ಗ್ರಾಹಕರಿಗೆ ಶೇಕಡಾ 7 ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.5 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿದೆ.

>> 726 ದಿನಗಳಿಂದ 24 ತಿಂಗಳುಗಳಿಗಿಂತ ಕಡಿಮೆ ಅವಧಿಯ FD ಗಳಲ್ಲಿ, RBL ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇ. 7 ಮತ್ತು ಹಿರಿಯ ನಾಗರಿಕರಿಗೆ ಶೇ.7.50 ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್‌ನ ಈ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬಂದಿವೆ.

ಇದನ್ನೂ ಓದಿ-8th Pay Commission : ಕೇಂದ್ರ ನೌಕರರಿಗೆ ಗುಡ್ ನ್ಯೂಸ್, 8ನೇ ವೇತನ ಆಯೋಗದಲ್ಲಿ ಶೇ.44ಕ್ಕೂ ಹೆಚ್ಚು ವೇತನ ಹೆಚ್ಚಳ! 

IDFC ಫಸ್ಟ್ ಬ್ಯಾಂಕ್ FD ದರಗಳು
ಇದಲ್ಲದೆ, ಐಡಿಎಫ್‌ಸಿ ಫಸ್ಟ್, ತನ್ನ ಗ್ರಾಹಕರ ಎಫ್‌ಡಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿದೆ. ಈ ಬ್ಯಾಂಕ್‌ ಗ್ರಾಹಕರಿಗೆ ಶೇಕಡಾ 7 ರ ದರದಲ್ಲಿ ಬಡ್ಡಿಯ ಲಾಭವನ್ನೂ ನೀಡುತ್ತಿವೆ. ಬ್ಯಾಂಕ್‌ನ ಈ ದರಗಳು ಅಕ್ಟೋಬರ್ 10 ರಿಂದ ಜಾರಿಗೆ ಬಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News