ನವದೆಹಲಿ: ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಹಲವು ಬಾರಿ ಹರಿದ ನೋಟು ನಿಮ್ಮ ಕೈ ಸೇರಬಹುದು. ಹರಿದ ನೋಟನ್ನು ಯಾವುದೇ ಮಾರುಕಟ್ಟೆಯಲ್ಲಿ ಚಲಾಯಿಸುವುದು ತುಂಬಾ ಕಷ್ಟಕರವಾಗುತ್ತದೆ. ಅನೇಕ ಬಾರಿ ಬ್ಯಾಂಕುಗಳು ಸಹ ಅಂತಹ ನೋಟನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಒಂದೊಮ್ಮೆ ನಿಮಗೂ ಕೂಡ ಇಂತಹ ಸಂದರ್ಭ ಎದುರಾದರೆ ಅದಕ್ಕಾಗಿ ಚಿಂತಿಸಬೇಕಾಗಿಲ್ಲ, ಏಕೆಂದರೆ, ಜನರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಸಮಸ್ಯೆಯನ್ನು ಪರಿಹರಿಸಲು ಆರ್‌ಬಿಐ ಒಂದು ಮಾರ್ಗವನ್ನು ತಿಳಿಸಿದೆ.
ನಿಯಮಗಳ ಪ್ರಕಾರ, ನೀವು ಎಟಿಎಂನಿಂದ (ATM) ಪಡೆದ ಹರಿದ ನೋಟನ್ನು ನೇರವಾಗಿ ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಬ್ಯಾಂಕ್ ಉದ್ಯೋಗಿಗೆ ಈ ನೋಟು ನಿಮ್ಮ ಎಟಿಎಂನಿಂದ ಹೊರಬಂದಿದೆ, ನೀವು ಅದನ್ನು ಬದಲಾಯಿಸಿ ಕೊಡಿ ಎಂದು ಮನವಿ ಮಾಡಬಹುದು. ಅದಾಗ್ಯೂ, ಬ್ಯಾಂಕ್ ನಿಮ್ಮ ನೋಟನ್ನು ತೆಗೆದುಕೊಳ್ಳದಿದ್ದರೆ, ನೀವು ಇತರ ವಿಧಾನಗಳನ್ನು ಸಹ ಅಳವಡಿಸಿಕೊಳ್ಳಬಹುದು.
ಇದನ್ನೂ ಓದಿ- ATM: ಎಟಿಎಂನಿಂದ ಹಣ ವಿತ್ ಡ್ರಾ ಮಾಡುವಾಗ ಕಳ್ಳರು ಬಳಸುವ ಈ ವಿಶಿಷ್ಟ ಟ್ರಿಕ್ ಬಗ್ಗೆ ಇರಲಿ ಎಚ್ಚರ
ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಸಂಪೂರ್ಣ ವಿವರಗಳನ್ನು ನೀಡಬೇಕು:
ನೀವು ಎಟಿಎಂನಿಂದ ಹರಿದ ನೋಟನ್ನು (Torn Note) ಸ್ವೀಕರಿಸಿದ್ದರೆ, ಅಂತಹ ನೋಟನ್ನು ವಿನಿಮಯ ಮಾಡಲು ಗ್ರಾಹಕರು ಬ್ಯಾಂಕಿನಿಂದ (Bank) ಫಾರ್ಮ್ ತೆಗೆದುಕೊಂಡು ಅದನ್ನು ಭರ್ತಿ ಮಾಡಬೇಕಾಗುತ್ತದೆ. ಇದರಲ್ಲಿ ಸಮಯ, ದಿನಾಂಕ ಮತ್ತು ಯಾವ ಎಟಿಎಂನಿಂದ ಈ ನೋಟನ್ನು ಪಡೆಯಲಾಗಿದೆ ಎಂಬ ವಿವರಗಳನ್ನು ನೀಡಬೇಕಾಗುತ್ತದೆ. ಇದರೊಂದಿಗೆ, ನೀವು ವಾಪಸಾತಿ ಸ್ಲಿಪ್ ಅಂದರೆ ಎಟಿಎಂನಿಂದ ಹಣ ವಿತ್ ಡ್ರಾ (Withdraw) ಮಾಡಿರುವ ಸ್ಲಿಪ್ ಅನ್ನು ಸಹ ಸಲ್ಲಿಸಬೇಕಾಗುತ್ತದೆ. ಎಟಿಎಂನಿಂದ ಸ್ಲಿಪ್ ಹೊರಬರದಿದ್ದರೆ, ನೀವು ನಿಮ್ಮ ಮೊಬೈಲ್ ಸಂದೇಶವನ್ನು ಈ ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ.
ಬ್ಯಾಂಕುಗಳು ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ:
ರಿಸರ್ವ್ ಬ್ಯಾಂಕಿನ ಎಕ್ಸ್ಚೇಂಜ್ ಕರೆನ್ಸಿ ರೂಲ್ಸ್ 2017 ರ ಪ್ರಕಾರ, ನೀವು ಎಟಿಎಂನಿಂದ ಹರಿದ ನೋಟ್ ಅನ್ನು ಪಡೆದಿದ್ದರೆ, ಆ ನೋಟನ್ನು ಮತ್ತೊಂದು ನೋಟಿನೊಂದಿಗೆ ಬದಲಾಯಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿದೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಇದನ್ನೂ ಓದಿ- ATM ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ
ಆರ್‌ಬಿಐ (RBI) ನಿಯಮಗಳ ಪ್ರಕಾರ, ಎಟಿಎಂನಿಂದ ಪಡೆದ ಹರಿದ ನೋಟ್ ಸ್ವೀಕರಿಸಲು ಯಾವುದೇ ಬ್ಯಾಂಕ್ ನಿರಾಕರಿಸುವುದಿಲ್ಲ. ಅದಾಗ್ಯೂ, ಬ್ಯಾಂಕುಗಳು ನಿಯಮಗಳನ್ನು ಉಲ್ಲಂಘಿಸಿದರೆ ಬ್ಯಾಂಕಿನ ನೌಕರರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದರೊಂದಿಗೆ 10,000 ರೂ.ವರೆಗೆ ದಂಡವನ್ನು ಸಹ ಬ್ಯಾಂಕ್‌ಗೆ ವಿಧಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.