Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ?

Bajaj Chetak E-scooter Booking: ಬಜಾಜ್ ಚೇತಕ್ ಹಾಗೂ ಇತರೆ ಪ್ರಿಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಓಲಾ ಇ-ಸ್ಕೂಟರ್ ನೊಂದಿಗೆ ಸ್ಪರ್ಧಿಸಲಿವೆ.

Written by - Nitin Tabib | Last Updated : Jul 22, 2021, 10:35 AM IST
  • ಇಂದಿನಿಂದ ಬಜಾಜ್ ಇ-ಸ್ಕೂಟರ್ ಬುಕಿಂಗ್ ಆರಂಭ.
  • ಕರ್ನಾಟಕದ ಯಾವ ನಗರದಿಂದ ಬುಕಿಂಗ್ ಆರಂಭವಾಗಲಿದೆ.
  • ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್, ಓಲಾ ಇ-ಸ್ಕೂಟರ್ ಜೊತೆಗೆ ಸ್ಪರ್ಧಿಸಲಿದೆ.
Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ? title=
Bajaj Chetak E-scooter Booking (File Photo)

Bajaj Chetak E-scooter Booking - ಸ್ವದೇಶಿ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿ ಬಜಾಜ್ ನ ಹೊಸ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಅಂದರೆ ಜುಲೈ 22ರಿಂದ ಆರಂಭಗೊಳ್ಳುತ್ತಿದೆ. ಆದರೆ, ಪ್ರಸ್ತುತ ದೇಶದ ಮೂರು ನಗರಗಳ ಜನರಿಗಾಗಿ ಮಾತ್ರ ಈ ಬುಕಿಂಗ್ ತೆರೆದುಕೊಳ್ಳಲಿದೆ. ಮಾಹಿತಿಗಳ ಪ್ರಕಾರ ಮೈಸೂರು, ಮಂಗಳೂರು ಹಾಗೂ ಔರಂಗಾಬಾದ್ ನಗರಗಳಲ್ಲಿ ಇಂದಿನಿಂದ ಬುಕಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಂದರೆ, ಒಂದು ವೇಳೆ ನೀವು ಈ ಮೂರು ನಗರಗಳಲ್ಲಿ ಯಾವುದಾದರೊಂದು ನಗರಗಳಲ್ಲಿ ವಾಸಿಸುತ್ತಿದ್ದರೆ, ನೀವೂ ಕೂಡ ಈ ಇ-ಸ್ಕೂಟರ್ ಗಾಗಿ ಬುಕಿಂಗ್ (e-Scooter) ಮಾಡಬಹುದು. ಇದಕ್ಕಾಗಿ ನೀವು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗುವ ಮಾಹಿತಿ ನೀಡಿ ನಿಮ್ಮ ಹೆಸರನ್ನು ನೊಂದಾಯಿಸಬಹುದು. ಬುಕಿಂಗ್ ತೆರೆದುಕೊಳ್ಳುವ ಮೊದಲು ಕೂಡ ನೀವು ಈ ಕೆಲಸ ಮಾಡಬಹುದು. ಇದರಿಂದ ಬುಕಿಂಗ್ ಟೈಮ್ ನಲ್ಲಿ ನಿಮಗೆ ಇನ್ನಷ್ಟು ಅನುಕೂಲವಾಗಲಿದೆ.

ಬಜಾಜ್ ಚೇತಕ್ (Bajaj Chetak) ಹಾಗೂ ಇತರೆ ಪ್ರಿಮಿಯಂ ಇಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಛಾಪು ಮೂಡಿಸಿರುವ ಓಲಾ ಸ್ಕೂಟರ್ (Ola e-Scooter) ಜೊತೆಗೆ ಪೈಪೋಟಿ ನಡೆಸಲಿವೆ. ಓಲಾ ಸ್ಕೂಟರ್ ನ ಮಾರುಕಟ್ಟೆಯ ಕ್ರೇಜ್ ಕುರಿತು ಹೇಳುವುದಾದರೆ, ಈ ಇ-ಸ್ಕೂಟರ್ ಬುಕಿಂಗ್ ಆರಂಭಗೊಂಡ ಕೇವಲ 24 ಗಂಟೆಯೊಳಗೆ ಸುಮಾರು 1 ಲಕ್ಷ ಆರ್ಡರ್ ಗಳು ದೊರೆತಿವೆ.

ಇದನ್ನೂ ಓದಿ- ಶುಭ ಸುದ್ದಿ: ಬೈಕ್ ಖರೀದಿಗೆ ಸರ್ಕಾರದಿಂದ ₹ 25 ಸಾವಿರ ಸಹಾಯಧನ

ಒಂದು ಬಾರಿಯ ಚಾರ್ಜಿಂಗ್ ನಲ್ಲಿ 95 ಕಿ.ಮೀ ಓಟ
ಬಜಾಜ್ ಚೇತಕ್ ಸ್ಕೂಟರ್ 3.8 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಮೂಲಕ ತನ್ನ ಶಕ್ತಿ ಪಡೆಯುತ್ತದೆ. ಈ ಮೋಟರ್‌ ಸಹಾಯದಿಂದ 5 ಅಶ್ವಶಕ್ತಿ ಶಕ್ತಿ ಮತ್ತು 16.2 ಎನ್ಎಂ ಟಾರ್ಕ್ ಉತ್ಪಾದಿಸಬಹುದು. ಈ ಮೋಟರ್‌ನ ಹೊರತಾಗಿ, ಬಜಾಜ್‌ನ ಇ-ಸ್ಕೂಟರ್ 3 ಕಿ.ವ್ಯಾ. ಲಿಥಿಯಂ-ಐಯಾನ್ ಬ್ಯಾಟರಿಅಳವಡಿಸಲಾಗಿದೆ, ಇದು ಪೂರ್ಣ ಚಾರ್ಜ್‌ನಲ್ಲಿ ಇಕೋ ಮೋಡ್‌ನಲ್ಲಿ 95 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 70 ಕಿ.ಮೀ ವೇಗವನ್ನು ಹೊಂದಿದೆ. ಮುಂದಿನ ವರ್ಷ 2022 ರ ವೇಳೆಗೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶದ 24 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಬಜಾಜ್ ಆಟೋ ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- ಬೈಕ್ ಮಾರುಕಟ್ಟೆಯಲ್ಲಿ 28 ನೂತನ ಮಾಡೆಲ್ ಗಳ ಮೂಲಕ ಅಬ್ಬರಿಸಲು ಮುಂದಾದ Bullet

ಇಲ್ಲಿದೆ ನಾಗ್ಪುರ್ ನಲ್ಲಿನ ಬೆಲೆ ಮತ್ತು ಟೋಕನ್ ಅಮೌಂಟ್
ಬಜಾಜ್ ಆಟೋ (Bajaj Auto) ಇತ್ತೀಚೆಗಷ್ಟೇ ನಾಗ್ಪುರ್ನಲ್ಲಿ ಚೇತಕ್ ಇ-ಸ್ಕೂಟರ್ ಬಿಡುಗಡೆ ಮಾಡಿತ್ತು. 2 ಸಾವಿರ ರೂ.ಗಳ ಟೋಕನ್ ಅಮೌಂಟ್ ಮೇಲೆ ಚೇತಕ್ ಬುಕಿಂಗ್ ತೆರೆದುಕೊಂಡಿದೆ. ನಾಗ್ಪುರ್ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್ ಅರ್ಬನ್ ವೇರಿಯಂಟ್ ಬೆಲೆಯನ್ನು ರೂ.1,42,988 ಹಾಗೂ ಪ್ರಿಮಿಯಂ ವೇರಿಯಂಟ್ ಬೆಲೆ 1,44,987 ರೂ. ನಿಗದಿಪಡಿಸಲಾಗಿದೆ. ಆದರೆ ಇವು ಎಕ್ಸ್-ಷೋರೂಮ್ ಬೆಳೆಗಳಾಗಿವೆ. ಇಂದು ಬುಕಿಂಗ್ ಆರಂಭಗೊಳ್ಳಲಿರುವ ಮೂರು ನಗರಗಳಲ್ಲಿಯೂ ಕೂಡ ಈ ಸ್ಕೂಟರ್ ಬೆಲೆ ಹಾಗೂ ಟೋಕನ್ ಅಮೌಂಟ್ ಇದೇ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. 

ಇದನ್ನೂ ಓದಿ-ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News