Bad Bank: ಶೀಘ್ರದಲ್ಲಿಯೇ 'Bad Bank' ಕಾರ್ಯಾರಂಭ, ಏನಿದು ಬ್ಯಾಡ್ ಬ್ಯಾಂಕ್ ?

Bad Bank: ದೇಶದಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪಿಸಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಸ್ವೀಕರಿಸಲಾಗಿದೆ. ಎಸ್‌ಬಿಐ ಅಧ್ಯಕ್ಷರ ಪ್ರಕಾರ, ಪ್ರಸ್ತುತ ರೂ 83,000 ಕೋಟಿ ಮೌಲ್ಯದ 38 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು ಎನ್ನಲಾಗಿದೆ.

Written by - Nitin Tabib | Last Updated : Jan 28, 2022, 08:32 PM IST
  • ದೇಶದಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪಿಸಲು ಅಗತ್ಯವಿರುವ ಎಲ್ಲ ಅನುಮೋದನೆಗಳು ದೊರೆತಿವೆ.
  • ಎಸ್‌ಬಿಐ ಅಧ್ಯಕ್ಷರ ಪ್ರಕಾರ, ಪ್ರಸ್ತುತ ರೂ 83,000 ಕೋಟಿ ಮೌಲ್ಯದ 38 ಖಾತೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ,
  • ಅವುಗಳನ್ನು ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು ಎಂದಿದ್ದಾರೆ.
Bad Bank: ಶೀಘ್ರದಲ್ಲಿಯೇ 'Bad Bank' ಕಾರ್ಯಾರಂಭ, ಏನಿದು ಬ್ಯಾಡ್ ಬ್ಯಾಂಕ್ ? title=
Bad Bank (Representational Image)

Bad Bank: ದೇಶದಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪಿಸಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆಯಲಾಗಿದೆ. ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಅಧ್ಯಕ್ಷ ದಿನೇಶ್ ಖಾರಾ ಈ ಕುರಿತು ಮಾಹಿತಿ ನೀಡಿದ್ದು, ಉದ್ದೇಶಿತ ಬ್ಯಾಡ್ ಬ್ಯಾಂಕ್‌ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನುಮೋದನೆಗಳು ದೊರೆತಿವೆ ಎಂದಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಬಳಿ ನ್ಯಾಷನಲ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪನಿ ಲಿ. (NARCL) ಅತಿ ದೊಡ್ಡ ಪಾಲುದಾರಿಕೆ ಇರಲಿದೆ. . ಇನ್ನೊಂದೆಡೆ  ಖಾಸಗಿ ಬ್ಯಾಂಕುಗಳ ಬಳಿ ಇಂಡಿಯಾ ಡೆಟ್ ರೆಸಲ್ಯೂಷನ್ ಕಂಪನಿ ಲಿಮಿಟೆಡ್ ಕಂಪನಿಯ (IDRCL) ಗಮನಾರ್ಹ ಪಾಲು ಇರಲಿದೆ.

 50 ಸಾವಿರ ಕೋಟಿ ಆಸ್ತಿ ಬ್ಯಾಡ್ ಬ್ಯಾಂಕ್ ಗೆ ವರ್ಗಾವಣೆಯಾಗಲಿದೆ
ಕಳೆದ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಬ್ಯಾಡ್ ಬ್ಯಾಂಕ್ ರಚಿಸುವುದಾಗಿ ಘೋಷಿಸಿದ್ದರು. ಎಲ್ಲಾ ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛಗೊಳಿಸಲು ಬ್ಯಾಡ್ ಬ್ಯಾಂಕ್ ಅವುಗಳಲ್ಲಿರುವ ಬ್ಯಾಡ್ ಅಕೌಂಟ್ (Bad Bank Assets) ಗಳನ್ನು ತನ್ನೊಂದಿಗೆ  ತೆಗೆದುಕೊಳ್ಳಲಿದೆ. ಆರಂಭಿಕ ಹಂತದಲ್ಲಿ 50,000 ಕೋಟಿ ಮೌಲ್ಯದ ಸುಮಾರು 15 ಪ್ರಕರಣಗಳನ್ನು ಉದ್ದೇಶಿತ ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು ಎಂದು ಎಸ್‌ಬಿಐ ಅಧ್ಯಕ್ಷರು ತಿಳಿಸಿದ್ದಾರೆ. ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಆಸ್ತಿಯನ್ನು ಬ್ಯಾಡ್ ಬ್ಯಾಂಕ್‌ನಲ್ಲಿ ವರ್ಗಾಯಿಸಲಾಗುವ ನಿರೀಕ್ಷೆ ಇದೆ

ಆರಂಭಿಕ ಕಾಳಜಿಯ ಬಳಿಕ ಅನುಮೋದನೆ ಪಡೆಯಲಾಗಿದೆ
ಎಸ್‌ಬಿಐ ಅಧ್ಯಕ್ಷರ ಪ್ರಕಾರ, ಪ್ರಸ್ತುತ 83,000 ಕೋಟಿ ಮೌಲ್ಯದ 38 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತಿದೆ. NARCA ಗುರುತಿಸಲಾದ NPA ಖಾತೆಗಳನ್ನು ಬ್ಯಾಂಕ್‌ಗಳಿಂದ ತೆಗೆದುಕೊಳ್ಳುತ್ತದೆ ಮತ್ತು IDRCL ಸಾಲಗಳ ನಿರ್ಣಯದ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದೆ.

ಇದನ್ನೂ ಓದಿ-PAN ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸುವ ಸುಲಭ ಪ್ರಕ್ರಿಯೆ

ಅಸೆಟ್ ರೆಸಲ್ಯೂಶನ್ ಪ್ರಕ್ರಿಯೆ ವೇಗಪಡೆದುಕೊಳ್ಳಲಿದೆ
ಬ್ಯಾಂಕಿಂಗ್ ವಲಯದಲ್ಲಿನ ಅಸೆಟ್ ರೆಸಲ್ಯೂಶನ್ ಬ್ಯಾಡ್ ಬ್ಯಾಂಕ್‌ಗಳ ಸ್ಥಾಪನೆಯೊಂದಿಗೆ ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದರಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಿಂದ  ಸಂಕಟಕ್ಕೆ ಈಡು ಮಾಡಿದ ಆಸ್ತಿಗಳ ಒಗ್ಗೂಡಿಸುವಿಕೆಗೆ ಮತ್ತು ಪರಿಹಾರಕ್ಕೆ ಲಾಭ ಸಿಗಲಿದೆ ಎಂದು ಎಸ್‌ಬಿಐ ಅಧ್ಯಕ್ಷರು ಹೇಳಿದ್ದಾರೆ. 

ಇದನ್ನೂ ಓದಿ-Budget 2022 : ಬಜೆಟ್ ನಲ್ಲಿ ಪಿಂಚಣಿದಾರರಿಗೆ ಸಂತಸದ ಸುದ್ದಿ! ಭಾರೀ ಹೆಚ್ಚಾಗಬಹುದು ಪಿಂಚಣಿ

'ಕೆಟ್ಟ ಬ್ಯಾಂಕ್' ರಚಿಸುವ ಉದ್ದೇಶ
ವಿವಿಧ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕೆಟ್ಟ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬ್ಯಾಡ್ ಬ್ಯಾಂಕ್‌ಗಳನ್ನು ರಚಿಸಲಾಗುತ್ತಿದೆ. ಆ ಸಾಲವನ್ನು ಕೆಟ್ಟ ಸಾಲ ಎಂದು ಪರಿಗಣಿಸಲಾಗುತ್ತದೆ, ಅದರ ಮೇಲೆ 90 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಬಡ್ಡಿ ಅಥವಾ ಅಸಲು ಮೊತ್ತವನ್ನು ಸ್ವೀಕರಿಸಲಾಗಿಲ್ಲ. ಈ ಕುರಿತು ತನ್ನ ಡಿಸೆಂಬರ್ 29 ರ ಫೈನಾನ್ಸಿಯಲ್ ಸ್ಟೆಬಿಲಿಟಿ ರಿಪೋರ್ಟ್ ನಲ್ಲಿ ಹೇಳಿಕೊಂಡಿದ್ದ ರಿಸರ್ವ್ ಬ್ಯಾಂಕ್, ಸೆಪ್ಟೆಂಬರ್ 2022 ರ ವೇಳೆಗೆ ಒಟ್ಟು ಎನ್ಪಿಎಗಳು (NPA) ಶೇಕಡಾ 8.1 ರಷ್ಟಿರಬಹುದು ಎಂದು ಸ್ಟ್ರೆಸ್ ಟೆಸ್ಟ್ ಬಹಿರಂಗಪಡಿಸಿದೆ ಎಂದು ಹೇಳಿತ್ತು, ಇದು ಸೆಪ್ಟೆಂಬರ್ 2021 ರ ವೇಳೆಗೆ 6.9 ಶೇಕಡಾ ಮತ್ತು ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ  ಶೇಕಡಾ 9.5 ರಷ್ಟು ಹೋಗಲಿದೆ ಎಂದು ಹೇಳಿತ್ತು.

ಇದನ್ನೂ ಓದಿ-Driving License ಕಳೆದು ಹೋಗಿದೆಯೇ? ಗಾಬರಿಯಾಗಬೇಡಿ, ಹೊಸ ಡಿಎಲ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News