Indian Railways Mobile Charging Rules: ದೇಶಾದ್ಯಂತ ಪ್ರತಿ ನಿತ್ಯ ಕೋಟ್ಯಾಂತರ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೆ ಕೂಡ ತನ್ನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತವರ ಸುರಕ್ಷತೆಯ ದೃಷ್ಟಿಯಿಂದ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವುದರ ಜೊತೆಗೆ ಆಗಾಗ್ಗೆ ಕೆಲವು ನಿಯಮಗಳನ್ನು ಬದಲಾಯಿಸುತ್ತಿರುತ್ತದೆ. ಇದೀಗ ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗಾಗಿ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.
ಪ್ರಸ್ತುತ ಯುಗದಲ್ಲಿ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈಲಿನ ಪ್ರತಿ ಸೀಟಿನಲ್ಲೂ ಪ್ರಯಾಣಿಕರಿಗೆ ಇವುಗಳನ್ನು ಚಾರ್ಜ್ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ರೈಲಿನಲ್ಲಿ ನಿಮ್ಮ ಫೋನ್ ಅನ್ನು ನೀವು ಯಾವಾಗಲೂ ಚಾರ್ಜ್ ಮಾಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆಯೇ? ಭಾರತೀಯ ರೈಲ್ವೇಯ ನಿಯಮಗಳ ಪ್ರಕಾರ, ರೈಲಿನಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಫೋನ್ ಅಥವಾ ಲ್ಯಾಪ್‌ಟಾಪ್ ಅನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ- ಹಣಕಾಸಿನ ಅಕ್ರಮ ತಡೆಗಟ್ಟಲು ಕ್ರಮ: ನಗದು ವಹಿವಾಟಿನ ಮಿತಿ ನಿಗದಿಗೊಳಿಸಿರುವ ಐಟಿ
ರೈಲಿನಲ್ಲಿ ರಾತ್ರಿ ವೇಳೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಚಾರ್ಜ್ ಮಾಡಲು ಏಕೆ ಸಾಧ್ಯವಿಲ್ಲ?
ಭಾರತೀಯ ರೈಲ್ವೆಯು ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ರೈಲಿನಲ್ಲಿ ತಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವುದನ್ನು ಪ್ರಯಾಣಿಕರಿಗೆ ನಿಷೇಧಿಸಿದೆ. ರೈಲ್ವೇ ರೈಲಿನಲ್ಲಿ ಯಾವುದೇ ರೀತಿಯ ಅಪಘಾತವನ್ನು ತಡೆಯುವ ದೃಷ್ಟಿಯಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ವಾಸ್ತವವಾಗಿ, ಜನರು ಸಾಮಾನ್ಯವಾಗಿ ತಮ್ಮ ಫೋನ್ ಅನ್ನು ಚಾರ್ಜಿಂಗ್‌ನಲ್ಲಿ ಇರಿಸಿ ಅದನ್ನು ಆಫ್ ಮಾಡಲು ಮರೆಯುತ್ತಾರೆ. ಈ ರೀತಿಯಾಗಿ ರಾತ್ರಿಯಿಡೀ ಫೋನ್ ಅಥವಾ ಲ್ಯಾಪ್‌ಟಾಪ್ ಅನ್ನು ಚಾರ್ಜ್‌ನಲ್ಲಿಟ್ಟುಕೊಂಡು ಮಲಗಿದರೆ, ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇಂತಹ ದುರ್ಘಟನೆಗಳನ್ನು ತಪ್ಪಿಸಲು ರೈಲ್ವೆ ತನ್ನ ಪ್ರಯಾಣಿಕರು ರಾತ್ರಿಯಲ್ಲಿ ತಮ್ಮ ಫೋನ್‌ಗಳನ್ನು ಚಾರ್ಜ್ ಮಾಡುವುದನ್ನು ನಿಷೇಧಿಸುತ್ತದೆ.
ಇದನ್ನೂ ಓದಿ- ದಾಖಲೆಯ ಏರಿಕೆ ಬಳಿಕ ಇಳಿಕೆ ಕಂಡ ಚಿನ್ನದ ಬೆಲೆ ! ಈಗಲೇ ಖರೀದಿಸುವುದು ಉತ್ತಮ
ಗಮನಿಸಬೇಕಾದ ಅಂಶವೆಂದರೆ, ಭಾರತೀಯ ರೈಲ್ವೆ ಇಲಾಖೆ ಈ ಕುರಿತಂತೆ ಯಾವುದೇ ಹೊಸ ನಿಯಮವನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಕಾಲಕಾಲಕ್ಕೆ ರೈಲ್ವೆ ಇಲಾಖೆ ಆದೇಶ ಹೊರಡಿಸುತ್ತಿದೆ. 2014ರಲ್ಲಿ ರೈಲ್ವೇ ಮಂಡಳಿಯು ರೈಲುಗಳಲ್ಲಿ ಬೆಂಕಿ ಅವಘಡಗಳನ್ನು ತಡೆಯಲು ಈ ಆದೇಶ ಹೊರಡಿಸಿತ್ತು. ಇದರ ನಂತರ, 2021 ರಲ್ಲಿ, ರೈಲ್ವೆ ಎಲ್ಲಾ ವಲಯಗಳಿಗೆ ಇದೇ ರೀತಿಯ ಆದೇಶವನ್ನು ನೀಡಿತ್ತು. ಆದರೆ ಮಾಹಿತಿ ಕೊರತೆಯಿಂದ ಬಹುತೇಕ ಪ್ರಯಾಣಿಕರಿಗೆ ಈ ನಿಯಮದ ಅರಿವಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.