ATM ಸ್ಕಿಮ್ಮಿಂಗ್ ಮೂಲಕ ಖಾಲಿಯಾಗಿ ಬಿಡಬಹುದು ನಿಮ್ಮ ಬ್ಯಾಂಕ್ ಖಾತೆ ..! ಸುರಕ್ಷಿತವಾಗಿರುವುದು ಹೇಗೆ ?

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಜನರ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡಲು ಎಟಿಎಂ ಸ್ಕಿಮ್ಮಿಂಗ್ ಅನ್ನು ಬಳಸುತ್ತಿದ್ದಾರೆ. ಈ ರೀತಿಯಾಗಿ ಕಳ್ಳರು ಜನರ ಬ್ಯಾಂಕ್ ಖಾತೆ ವಿವರಗಳನ್ನು ಕದಿಯುತ್ತಾರೆ. 

Written by - Ranjitha R K | Last Updated : Mar 7, 2022, 11:06 AM IST
  • ಸೈಬರ್ ದರೋಡೆಕೋರರು ಮಾಡುತ್ತಿದ್ದಾರೆ ಎಟಿಎಂ ಸ್ಕಿಮ್ಮಿಂಗ್
  • ಜನರ ಬ್ಯಾಂಕ್ ವಿವರಗಳನ್ನು ಇಲ್ಲಿಂದ ಕದಿಯುತ್ತಿದ್ದಾರೆ
  • ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಹೇಗೆ ತಿಳಿಯಿರಿ
ATM ಸ್ಕಿಮ್ಮಿಂಗ್ ಮೂಲಕ ಖಾಲಿಯಾಗಿ ಬಿಡಬಹುದು ನಿಮ್ಮ ಬ್ಯಾಂಕ್ ಖಾತೆ ..! ಸುರಕ್ಷಿತವಾಗಿರುವುದು ಹೇಗೆ ? title=
ಸೈಬರ್ ದರೋಡೆಕೋರರು ಮಾಡುತ್ತಿದ್ದಾರೆ ಎಟಿಎಂ ಸ್ಕಿಮ್ಮಿಂಗ್ (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಡಿಜಿಟಲ್ ಪಾವತಿಯನ್ನು (Digital Paymenet)ಹೆಚ್ಚು ಹೆಚ್ಚು ಬಳಸುತ್ತಾರೆ. ಡಿಜಿಟಲ್ ಪಾವತಿಯು ಜನರ ಕೆಲಸಗಳನ್ನು ಸುಲಭಗೊಳಿಸಿದರೆ, ಸೈಬರ್ ಅಪರಾಧಿಗಳು ಸಹ ಸಕ್ರಿಯರಾಗಿದ್ದಾರೆ (Cyber Criminals). ಅನೇಕ ಸೈಬರ್ ಅಪರಾಧಿಗಳು ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಈ ವಿಧಾನಗಳಲ್ಲಿ ಒಂದು ಎಟಿಎಂ ಸ್ಕಿಮ್ಮಿಂಗ್ (ATM Skimming)ಆಗಿದೆ. ಇದರ ಮೂಲಕ ಸೈಬರ್ ಕ್ರಿಮಿನಲ್ ಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಿ ಬಿಡಬಹುದು. 

ಸ್ಕಿಮ್ಮಿಂಗ್ ಎಂದರೇನು?
ಎಟಿಎಂನಲ್ಲಿ (ATM) ಅಳವಡಿಸಲಾಗಿರುವ ಮ್ಯಾಗ್ನೆಟಿಕ್ ಚಿಪ್ ಅನ್ನು ಸ್ಕಿಮ್ಮಿಂಗಾಗಿ ಬಳಸಲಾಗುತ್ತದೆ.  ಕಾರ್ಡ್‌ನ ಹಿಂಭಾಗದಲ್ಲಿರುವ ಮ್ಯಾಗ್ನೆಟಿಕ್ ಸ್ಟ್ರಿಪ್ ಅನ್ನು ರೀಡ್ ಮಾಡುವ ಮೂಲಕ, ಸೈಬರ್ ಕ್ರಿಮಿನಲ್ ಗಳು ಕ್ರೆಡಿಟ್, ಡೆಬಿಟ್ (Debit Card)ಮತ್ತು ಎಟಿಎಂ ಕಾರ್ಡ್‌ಗಳ ಎಲ್ಲಾ ವಿವರಗಳನ್ನು ಪಡೆಯುತ್ತಾರೆ. ಈ ವಿವರಗಳನ್ನು ಬಳಸಿಕೊಂಡು, ಜನರ ಬ್ಯಾಂಕ್ ಖಾತೆಗಳನ್ನು (Bank Account) ಖಾಲಿ ಮಾಡುತ್ತಾರೆ.

ಇದನ್ನೂ ಓದಿ : 07-03-2022 Today Gold Price:ಆಭರಣ ಪ್ರಿಯರಿಗೆ ಶಾಕ್.. ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ

ಎಟಿಎಂನ ಕಾರ್ಡ್ ರೀಡರ್ ಸ್ಲಾಟ್‌ನಲ್ಲಿ ಅಡಗಿರುತ್ತದೆ ಡಿವೈಸ್ :
ಇದಕ್ಕಾಗಿ, ವಂಚಕರು ಎಟಿಎಂ ಅಥವಾ ಮರ್ಚೆಂಟ್ ಪೇಮೆಂಟ್ ಟರ್ಮಿನಲ್‌ನ ಕಾರ್ಡ್ ರೀಡರ್ ಸ್ಲಾಟ್‌ನಲ್ಲಿ   ಡಿವೈಸ್ ಅನ್ನು ಇರಿಸುತ್ತಾರೆ. ಈ ಸ್ಕಿಮ್ಮರ್ ಕಾರ್ಡ್ ವಿವರಗಳನ್ನು ಸ್ಕ್ಯಾನ್ ಮಾಡುತ್ತದೆ. ಇದರ ನಂತರ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಎಟಿಎಂಗಳು, (ATM)ರೆಸ್ಟೋರೆಂಟ್‌ಗಳು, ಅಂಗಡಿಗಳು ಅಥವಾ ಇತರ ಸ್ಥಳಗಳಲ್ಲಿ ಸ್ಕಿಮ್ಮಿಂಗ್ ಮಾಡಬಹುದು. ಪಿನ್ ಅನ್ನು ಸೆರೆಹಿಡಿಯಲು ಸಣ್ಣ ಕ್ಯಾಮೆರಾವನ್ನು ಬಳಸಲಾಗುತ್ತದೆ.

ಈ ರೀತಿ ದೋಚುತ್ತಾರೆ ಹಣ : 
ಎಟಿಎಂ ಸ್ಕಿಮ್ಮಿಂಗ್ (ATM Skimming) ಮಾಡಲು, ಕಳ್ಳರು ದೂರದ ಸ್ಥಳದಲ್ಲಿ ಸ್ಥಾಪಿಸಲಾದ ಎಟಿಎಂನಲ್ಲಿ ಸಾಧನವನ್ನು ಹಾಕುವ ಮೂಲಕ ತಮ್ಮ ಕೈ ಚಳಕ ತೋರಿಸುತ್ತಾರೆ. ಜನರ ಕಾರ್ಡ್ ವಿವರ ಪಡೆಡ ನಂತರ ಅದರಲ್ಲಿದ್ದ ಎಟಿಎಂ ಕಾರ್ಡ್ ಕ್ಲೋನ್ ಮಾಡಿ ಹಣ ದೋಚುತ್ತಾರೆ.

ಇದನ್ನೂ ಓದಿ:  1 ಲೀಟರ್ ಪೆಟ್ರೋಲ್ ನಲ್ಲಿ 30 ಕಿ.ಮೀ ದೂರ ಕ್ರಮಿಸಲಿದೆ ಈ ಕಾರು, ಅದ್ಬುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ

ಸ್ಕಿಮ್ಮಿಂಗ್ ಅನ್ನು ತಪ್ಪಿಸುವುದು ಹೇಗೆ ?
1. ಎಟಿಎಂ ಬಳಸುವಾಗ ಪಿನ್ ಅನ್ನುಎಚ್ಚರಿಕೆಯಿಂದ ಬಳಸಿ 
2. ಎಟಿಎಂ ಬಳಸುವಾಗ, ಎಟಿಎಂನಲ್ಲಿ ಕೀಪ್ಯಾಡ್ ಇಲ್ಲವಾದಲ್ಲಿ ಟ್ರಾನ್ಸಾಕ್ಶನ್ ಮಾಡಬೇಡಿ 
3. ATM ಬಳಸುವಾಗ ಅಪರಿಚಿತ ವ್ಯಕ್ತಿಯ ಸಹಾಯ ತೆಗೆದುಕೊಳ್ಳಬೇಡಿ 
4. ಕಾಲಕಾಲಕ್ಕೆ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುತ್ತಿರಿ.
5. ನಿಮ್ಮ ಪಿನ್ ಅನ್ನು ಎಲ್ಲಿಯೂ ಬರೆದಿಟ್ಟುಕೊಳ್ಳಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News