ನವದೆಹಲಿ : ಜೀರೋ ಚಿತ್ರದ ಸೋಲಿನ ನಂತರ ಶಾರುಖ್ ಖಾನ್ (Sharukha Khan) ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಚಿತ್ರಗಳ ಸೆಟ್ ಗೆ ಮರಳಿದ್ದರು. ಶಾರುಖ್ ಖಾನ್ ಅನೇಕ ದೊಡ್ಡ ಬ್ರಾಂಡ್‌ಗಳ ಫೇಸ್ ಆಗಿದ್ದಾರೆ. ಶಾರುಖ್ ಈ ಹಬ್ಬದ ಸಮಯದಲ್ಲಿ ಹೊಸ ಜಾಹೀರಾತುಗಳು ಮತ್ತು ಚಲನಚಿತ್ರಗಳನ್ನು ಮಾಡಲು ಹೊರಟಿದ್ದರು. ಆದರೆ, ಈ ಮಧ್ಯೆ, ಮಗ ಆರ್ಯನ್ ನ ಡ್ರಗ್ಸ್ ಪ್ರಕರಣ (Aryan khan drugs case) ಬೆಳೆಕಿಗೆ ಬಂದಿತು. ಈ ಪ್ರಕರಣದ ನಂತರ ಶಾರುಖ್ ಖಾನ್, ದೀಪಿಕಾ ಅಭಿನಯದ ಪಠಾಣ್ ಚಿತ್ರ ಮತ್ತು ದಕ್ಷಿಣದ ನಿರ್ದೇಶಕ ಅಟ್ಲಿಯವರ ಚಿತ್ರದ ಚಿತ್ರೀಕರಣವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಭಟನೆ :
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ (Aryan khan arrest) ನಂತರ, ಸಾಮಾಜಿಕ ಮಾಧ್ಯಮದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. '#Boycott_SRK_Related_Brands' ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೊಡ್ಡ ಬ್ರಾಂಡ್‌ಗಳು ತಮ್ಮ ಜಾಹೀರಾತುಗಳನ್ನು ಮತ್ತು ವ್ಯವಹಾರಗಳನ್ನು ಅನಿರ್ದಿಷ್ಟವಾಗಿ ನಿಲ್ಲಿಸಿವೆ. ಅಂದರೆ, ಈ ಹಬ್ಬದ ಸಮಯದಲ್ಲಿ ಶಾರುಖ್ ಗೆ (Sharukh Khan) ಆರ್ಥಿಕ ಹೊಡೆತವನ್ನು ಎದುರಿಸುವಂತಾಗಿದೆ.
ಇದನ್ನೂ ಓದಿ : ಹೆಚ್ಚುತ್ತಿದೆ Aryan Khan ಸಂಕಷ್ಟ , ಇಂದು ಕೂಡಾ ಸಿಕ್ಕಿಲ್ಲ ಜಾಮೀನು
ಸಾಮಾಜಿಕ ಮಾಧ್ಯಮದಲ್ಲಿ (Social media) ಪ್ರತಿಭಟನೆಗಳ ನಂತರ, ' 'Education Platform BYJU' ಸದ್ಯಕ್ಕೆ ಶಾರುಖ್ ಅವರ ಎಲ್ಲಾ ಜಾಹೀರಾತನ್ನು ಸ್ಥಗಿತಗೊಳಿಸಿದೆ. 2017 ರಿಂದ ಶಾರುಖ್ BYJU ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ಅವರ ಜಾಹೀರಾತು ಟ್ರೋಲ್ ಆಗಲು ಆರಂಭವಾದ ಕಾರಣ, BYJU ಈ ನಿರ್ಧಾರ ತೆಗೆದುಕೊಂಡಿದೆ.
ಶಾರುಖ್ ಬ್ರಾಂಡ್ ಮೌಲ್ಯದ ಮೇಲೆ ಕರಿಮೋಡ :
ಇದರೊಂದಿಗೆ, ಇತ್ತೀಚೆಗೆ ವಿಮಲ್ ಎಲೈಚಿ ಕೂಡ ತನ್ನ ಹೊಸ ಜಾಹೀರಾತಿನಲ್ಲಿ ಶಾರುಖ್ ಇಲ್ಲದೆ ಅಜಯ್ ದೇವಗನ್ (Ajay Devgan) ಜೊತೆ ಮಾತ್ರ ಚಿತ್ರೀಕರಣ ಮುಗಿಸಿದೆ. ವಿಮಲ್ ಎಲೈಚಿ ಮಾತ್ರವಲ್ಲ, D’Decor, Big Basket, LG- ಮುಂತಾದ ಬ್ರಾಂಡ್‌ಗಳ ಜಾಹೀರಾತಿನಲ್ಲಿಯೂ ಶಾರುಖ್ ಕಾಣಿಸಿಕೊಂಡಿದ್ದರು. ಹಬ್ಬದ ಋತುವಿನಲ್ಲಿ ಅದ್ದೂರಿಯಾಗಿ ವಾಪಸ್ ಆಗುವ ಚಿಂತನೆಯಲ್ಲಿದ್ದರು ಶಾರುಖ್. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದೆ. ಶಾರುಖ್ ಅವರ ಬ್ರಾಂಡ್ ಮೌಲ್ಯವೂ (Sharukh brand value) ಕುಸಿಯುತ್ತಿದೆ. ಶಾರುಖ್ ಅವರ ಬ್ರಾಂಡ್ ಮೌಲ್ಯ 378 ಕೋಟಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Yash Viral Video: Mumbaiನಲ್ಲಿ ಬೀದಿಗಿಳಿದ KGFನ 'Rocky Bhai' Yash, ಅಭಿಮಾನಿಗಳ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಶಾರುಖ್ ಖಾನ್ ನಿಂದಾಗಿ ಕಂಪನಿ ನಷ್ಟಕ್ಕೆ ಹೋಗಬಹುದೇ?
ಶಾರುಖ್ ಖಾನ್ ಬ್ರ್ಯಾಂಡ್ ಎಂಡಾರ್ಸ್ಮೆಂಟ್ ಶುಲ್ಕವನ್ನು ಪಾವತಿಸಿದ್ದರಿಂದ ಆರ್ಯನ್ ಡ್ರಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ಬ್ರ್ಯಾಂಡ್‌ಗಳು ಭಾರೀ ನಷ್ಟವನ್ನು ಎದುರಿಸುತ್ತಿವೆ. ಆದರೆ, ಪ್ರೇಕ್ಷಕರ ಪ್ರತಿಭಟನೆ ಎಷ್ಟು ಜೋರಾಗಿದೆಯೆಂದರೆ, ಹೊಸ ಜಾಹೀರಾತುಗಳು ಮತ್ತು ಚಲನಚಿತ್ರಗಳು ಅಥವಾ ಪ್ರಚಾರಗಳಲ್ಲಿ ಟ್ರೋಲ್ ಆಗುವ ಭಯದಿಂದ ಎಲ್ಲಾ ಬ್ರಾಂಡ್‌ಗಳು ಸದ್ಯಕ್ಕೆ 'Pause' ಬಟನ್ ಒತ್ತಿದೆ.
ಫೋರ್ಬ್ಸ್ ಪ್ರಕಾರ, ಶಾರುಖ್ ಖಾನ್ ಅವರ ನಿವ್ವಳ ಮೌಲ್ಯ 5116 ಕೋಟಿ ರೂ. ಉದ್ಯಮದ ತಜ್ಞರ ಪ್ರಕಾರ, ಶಾರುಖ್‌ನಿಂದಾಗಿ, ಕಂಪನಿಗಳು ಹಿನ್ನಡೆ ಅನುಭವಿಸಿವೆ. ಆದರೆ, ಪ್ರೇಕ್ಷಕರು ಯಾವುದನ್ನೂ ಹೆಚ್ಚು ದಿನ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಕಿಂಗ್ ಖಾನ್ ಅವರ ಕುಟುಂಬದ ಈ ಘಟನೆಯನ್ನು ಕೂಡಾ ಮರೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.