ಸ್ಮಾರ್ಟ್ ಪೋನ್ ಆಯ್ತು, ಇನ್ಮುಂದೆ ಬರಲಿದೆ Apple Car! ಭವಿಷ್ಯ ನುಡಿದ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ

ಜಪಾನಿನ ರಾಸಾಯನಿಕ ತಯಾರಿಕಾ ಕಂಪನಿ ಅಸಹಿ ಕಾಸೆಯ ಗೌರವ ಸಹವರ್ತಿ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ ಅವರ ಭವಿಷ್ಯ ಪ್ರಕಾರ ಆಪಲ್ 2021 ರ ವೇಳೆಗೆ ವಾಹನ ಕ್ಷೇತ್ರಕ್ಕೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Aug 26, 2021, 10:38 PM IST
  • ಪಾನಿನ ರಾಸಾಯನಿಕ ತಯಾರಿಕಾ ಕಂಪನಿ ಅಸಹಿ ಕಾಸೆಯ ಗೌರವ ಸಹವರ್ತಿ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ ಅವರ ಭವಿಷ್ಯ ಪ್ರಕಾರ ಆಪಲ್ 2021 ರ ವೇಳೆಗೆ ವಾಹನ ಕ್ಷೇತ್ರಕ್ಕೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.
ಸ್ಮಾರ್ಟ್ ಪೋನ್ ಆಯ್ತು, ಇನ್ಮುಂದೆ ಬರಲಿದೆ Apple Car! ಭವಿಷ್ಯ ನುಡಿದ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ  title=

ನವದೆಹಲಿ: ಜಪಾನಿನ ರಾಸಾಯನಿಕ ತಯಾರಿಕಾ ಕಂಪನಿ ಅಸಹಿ ಕಾಸೆಯ ಗೌರವ ಸಹವರ್ತಿ ನೊಬೆಲ್ ಪ್ರಶಸ್ತಿ ವಿಜೇತ ಅಕಿರಾ ಯೋಶಿನೋ ಅವರ ಭವಿಷ್ಯ ಪ್ರಕಾರ ಆಪಲ್ 2021 ರ ವೇಳೆಗೆ ವಾಹನ ಕ್ಷೇತ್ರಕ್ಕೆ ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-  ಭಾರತದಲ್ಲಿ ಪ್ರಾರಂಭವಾಗಿದೆ ಆಪಲ್ ಸ್ಮಾರ್ಟ್ ವಾಚ್ 6, ಎಸ್ಇ ಮಾರಾಟ

ಲಿಥಿಯಂ-ಐಯಾನ್ ಬ್ಯಾಟರಿಗಳ ಪ ಪ್ರವರ್ತಕರಾಗಿರುವ ಅಕಿರಾ ಯೋಶಿನೋ ಅವರು ರಾಯಿಟರ್ಸ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ Apple Car ವಿಚಾರವಾಗಿ ಭವಿಷ್ಯ ನುಡಿದಿದ್ದಾರೆ.ಈ ಹಿಂದೆ ಅವರು ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ 2019 ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದರು, ಅದು ಈಗ ಸ್ಮಾರ್ಟ್‌ಫೋನ್‌ಗಳು ಮತ್ತು ನೋಟ್‌ಬುಕ್‌ಗಳಿಗೆ ಸಹಕಾರಿಯಾಗಿದೆ.

ಇದನ್ನೂ ಓದಿ- Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ

ಅವರು ಸಂದರ್ಶನದ ಸಮಯದಲ್ಲಿ, ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಬಗ್ಗೆ ಟೆಕ್ ಸಂಸ್ಥೆಗಳು ಗಮನ ಹರಿಸುತ್ತಿರುವ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ಅವರು ಆಪಲ್ ಕಾರನ್ನು ಬಿಡುಗಡೆ ಮಾಡಲು ಉತ್ಸುಕರಾಗಿರುವ ಬಗ್ಗೆ ಪ್ರಸ್ತಾಪಿಸಿದರು.

"ಗಮನಿಸಬೇಕಾದದ್ದು ಆಪಲ್ (Apple), ಅವರು ಏನು ಮಾಡುತ್ತಾರೆ? ಅವರು ಏನನ್ನಾದರೂ ಘೋಷಿಸಬಹುದು ಎಂದು ನಾನು ಭಾವಿಸುತ್ತೇನೆ. ಮತ್ತು ಅವರು ಯಾವ ರೀತಿಯ ಕಾರನ್ನು ಘೋಷಿಸುತ್ತಾರೆ? ಯಾವ ರೀತಿಯ ಬ್ಯಾಟರಿ? ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅವರು ಬಹುಶಃ 2025 ರಲ್ಲಿ ತಯಾರಿಸುತ್ತಾರೆ ಅನಿಸುತ್ತದೆ. ಒಂದು ವೇಳೆ ಅವರು ಹಾಗೆ ಮಾಡಿದಲ್ಲಿ, ಈ ವರ್ಷದ ಅಂತ್ಯದ ವೇಳೆಗೆ ಏನನ್ನಾದರೂ ಘೋಷಿಸಬೇಕು ಎಂದು ನಾನು ಭಾವಿಸುತ್ತೇನೆ"ಎಂದು ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದರು.

ಟೈಟಾನ್ ಯೋಜನೆಯ ಹೆಸರಿನಲ್ಲಿ ಆಪಲ್ ಎಲೆಕ್ಟ್ರಿಕ್ ಕಾರಿನಲ್ಲಿ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಟೆಕ್ ದೈತ್ಯವು ಹ್ಯುಂಡೈನಂತಹ ಹಲವಾರು ದಕ್ಷಿಣ ಕೊರಿಯಾದ ಕಾರು ತಯಾರಕರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.ಆದಾಗ್ಯೂ, ಆಪಲ್ ಇದನ್ನು ಜಾಗತಿಕ ವಾಹನ ತಯಾರಕರೊಂದಿಗೆ ಸಂಯೋಜಿಸುವ ಹೆಚ್ಚಿನ ವರದಿಗಳನ್ನು ನಿರಾಕರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News