Stock Market Latest News: ಕಳೆದ ಎರಡು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದ್ದ ದೇಶೀಯ ಷೇರುಪೇಟೆಯಲ್ಲಿ ಈದ್ನು ಕುಸಿತಕ್ಕೆ ಬ್ರೇಕ್ ಬಿದ್ದಿದೆ. ವರದಿಗಳ ಪ್ರಕಾರ ಇಂದಿನ ದಿನದಾಂತ್ಯಕ್ಕೆ ಬಿಎಸ್‌ಇ ಷೇರು ಸೂಚ್ಯಂಕ 119 ಅಂಕಗಳ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದುವರೆದ ದೃಢವಾದ ಪ್ರವೃತ್ತಿಯ ಹಿನ್ನೆಲೆ ಲೋಹ, ಟೆಲಿಕಾಂ ಮತ್ತು ವಾಹನಗಳ ಷೇರುಗಳು ಇಂದು ಭರಾಟೆಯ ವ್ಯಾಪಾರ ನಡೆಸಿವೆ. ಗುರುವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ, ಮಹೀಂದ್ರ ಮತ್ತು ಮಹೀಂದ್ರಾ ನೇತೃತ್ವದ ವಾಹನ ಕಂಪನಿಗಳ ಸಗಟು ಮಾರಾಟ ಉತ್ತಮವಾಗಿದೆ. ಇದರೊಂದಿಗೆ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಸತತ ಮೂರನೇ ತಿಂಗಳು ಮೇ ತಿಂಗಳಲ್ಲಿ 1.50 ಲಕ್ಷ ಕೋಟಿ ರೂ. ತಲುಪಿದ್ದು, ಈ ಅಂಕಿಅಂಶಗಳು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ ಎಂದು ವಿಶ್ಲೇಶಿಸಲಾಗಿದೆ.
ಸೆನ್ಸೆಕ್ಸ್-ನಿಫ್ಟಿಯಲ್ಲಿ ಭರಾಟೆಯ ಖರೀದಿ
ಮೂವತ್ತು ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 118.57 ಪಾಯಿಂಟ್‌ಗಳು ಅಥವಾ 0.19 ಶೇಕಡಾ ಏರಿಕೆಯಾಗಿ 62,547.11 ಪಾಯಿಂಟ್‌ಗಳಿಗೆ ತಲುಪಿದೆ. ಒಂದು ಹಂತದಲ್ಲಿ ಇದು ವಹಿವಾಟಿನ ಸಮಯದಲ್ಲಿ 291.3 ಪಾಯಿಂಟ್‌ಗಳಿಗೆ ಏರಿಕೆಯಾಗಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ 46.35 ಪಾಯಿಂಟ್ ಅಥವಾ 0.25 ರಷ್ಟು ಏರಿಕೆ ಕಂಡು 18,534.10 ಅಂಕಗಳಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ವಾರದ ಆಧಾರದ ಮೇಲೆ ಹೇಳುವುದಾದರೆ, ಬಿಎಸ್ಇ ಸೆನ್ಸೆಕ್ಸ್ 45.42 ಅಂಕಗಳನ್ನು ಮತ್ತು ನಿಫ್ಟಿ 34.75 ಅಂಕಗಳನ್ನು ಗಳಿಸಿದಂತಾಗಿದೆ.
ತಜ್ಞರ ಅಭಿಪ್ರಾಯವೇನು?
ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್, ಈ ವಾರ ಮಾರುಕಟ್ಟೆಯು ಸಾಕಷ್ಟು ಏರಿಳಿತವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಉತ್ತಮ ಜಾಗತಿಕ ಸಂಕೇತಗಳಿಂದ ಧನಾತ್ಮಕ ದೇಶೀಯ ಸನ್ನಿವೇಶದೊಂದಿಗೆ ಮಾರುಕಟ್ಟೆಯು ವೇಗವನ್ನು ಪಡೆದುಕೊಂಡಿದೆ ಎಂದಿದ್ದಾರೆ. ಮೇ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಉತ್ತಮ ಮಾರಾಟದಿಂದಾಗಿ, ವಾಹನ ದಾಸ್ತಾನುಗಳ ಬಗ್ಗೆ ಭಾರಿ ಆಕರ್ಷಣೆ ಕಂಡುಬಂದಿದೆ. ಈ ಸೇಶನ್ ನಲ್ಲಿ ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ನೀತಿ ದರವನ್ನು ಹೆಚ್ಚಿಸುವುದನ್ನು ತಡೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಾಗಿ, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಕೆಲವು ತೃಪ್ತಿಕರ ಪರಿಸ್ಥಿತಿಗಳು ಕಂಡುಬಂದಿವೆ ಎಂಬುದು ಅವರ ಅಭಿಪ್ರಾಯವಾಗಿದೆ.
ಟಾಪ್ ಗೇನರ್ ಮತ್ತು ಲೂಸರ್ ಯಾರು?
ಸೆನ್ಸೆಕ್ಸ್ ಷೇರುಗಳಲ್ಲಿ, ಟಾಟಾ ಸ್ಟೀಲ್ ಸುಮಾರು ಶೇ.2 ರಷ್ಟು ಲಾಭ ಗಳಿಕೆ ಮಾಡಿ ಟಾಪ್ ಗೇನರ್ ಆಗಿ ಹೊರಹೊಮ್ಮಿದೆ. ಇದಲ್ಲದೆ, ಮಾರುತಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಸನ್ ಫಾರ್ಮಾ, ಲಾರ್ಸನ್ ಆ್ಯಂಡ್ ಟೂಬ್ರೊ, ಟೈಟಾನ್, ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಐಟಿಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ನೆಸ್ಲೆ ಪ್ರಮುಖ ಕಂಪನಿಗಳ ಷೇರುಗಳು ಕೂಡ ಲಾಭ ಗಳಿಕೆ ಮಾಡಿವೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇಂಡಸ್‌ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ನಷ್ಟ ಅನುಭವಿಸಿವೆ.
ಇದನ್ನೂ ಓದಿ-ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ
ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್‌ಗಳ ಗಳ ಸ್ಥಿತಿಗತಿ ಹೇಗಿತ್ತು?
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್‌ನ ಚಿಲ್ಲರೆ ಸಂಶೋಧನೆಯ ಮುಖ್ಯಸ್ಥ ಸಿದ್ಧಾರ್ಥ್ ಖೇಮ್ಕಾ, ಮೇ ತಿಂಗಳಿನಲ್ಲಿ ನಿರೀಕ್ಷಿತಕ್ಕಿಂತ ಉತ್ತಮವಾದ ವಾಹನ ಮಾರಾಟವು ಆಟೋ ಸ್ಟಾಕ್‌ಗಳಿಗೆ ಬೇಡಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ ವಾರದ ಆರಂಭದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಕೂಡ ಸಕಾರಾತ್ಮಕ ವಾತಾವರಣ ನಿರ್ಮಿಸಿದೆ. ಇದರೊಂದಿಗೆ ಗ್ರಾಮೀಣ ಮತ್ತು ಕೃಷಿ ಷೇರುಗಳಿಗೂ ಬೇಡಿಕೆ ಇತ್ತು. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ. 0.60 ರಷ್ಟು ಹೆಚ್ಚಾದರೆ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ. 0.57 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ-Fuel Price Update: ಪೆಟ್ರೋಲ್ ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ
ಇನ್ನೊಂದೆಡೆ ಮಾರುಕಟ್ಟೆಯ ಇಂದಿನ ಸ್ಥಿತಿಗತಿ ಕುರಿತು ಮಾತನಾಡಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಚಿಲ್ಲರೆ ಸಂಶೋಧನೆಯ ಮುಖ್ಯಸ್ಥ ದೀಪಕ್ ಜಸಾನಿ, ಶುಕ್ರವಾರ ಜಾಗತಿಕ ಮಾರುಕಟ್ಟೆಗಳು ಏರಿಕೆ ಕಂಡಿವೆ. ಯುಎಸ್ ಫೆಡರಲ್ ರಿಸರ್ವ್ ಮುಂದಿನ ಸೇಶನ್ ನಲ್ಲಿ ನೀತಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ನಿರೀಕ್ಷೆಯಿದೆ ಎಂಬುದೂ ಕೂಡ ಇದಕ್ಕೆ ಒಂದು ಕಾರಣ ಎಂದು ಅವರು ವಿಶ್ಲೇಶಿಸಿದ್ದಾರೆ. ಇದಲ್ಲದೇ ಅಮೆರಿಕದಲ್ಲಿ ಸಾಲದ ಮಿತಿ ಹೆಚ್ಚಿಸುವ ಮಸೂದೆಗೆ ಅಂಗೀಕಾರ ನೀಡಿರುವುದು ಕೂಡ ಈ ಭರವಸೆಯ ಭಾವನೆಗೆ ಪುಷ್ಟಿ ನೀಡಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ