7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, DA ಬಳಿಕ ಇದೀಗ ಈ ಭತ್ಯೆಯಲ್ಲೂ ಹೆಚ್ಚಳ

7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.28ಕ್ಕೆ ತಲುಪಿದ ಬಳಿಕ ಇದೀಗ ನೌಕರರ ಮನೆ ಬಾಡಿಗೆ ಭತ್ಯೆ ಕೂಡ ಪರಿಷ್ಕರಿಸಲಾಗಿದೆ. ಹಾಗಾದರೆ ಬನ್ನಿ ಯಾವ ನೌಕರರ HRA ಎಷ್ಟು ಹೆಚ್ಚಳವಾಗಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

Written by - Nitin Tabib | Last Updated : Jul 19, 2021, 10:52 AM IST
  • ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ.
  • ಕೇಂದ್ರ ಸರ್ಕಾರ ಇದೀಗ ನೌಕರರ HRAಯನ್ನು ಕೂಡ ಶೇ.27ಕ್ಕೆ ಏರಿಕೆ ಮಾಡಿದೆ.
  • X, Y ಹಾಗೂ Z ಕೆಟಗರಿ ನಗರಗಳಲ್ಲಿ ಭಿನ್ನ ಭಿನ್ನವಾಗಿರಲಿದೆ HRA.
7th Pay Commission: ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ, DA ಬಳಿಕ ಇದೀಗ ಈ ಭತ್ಯೆಯಲ್ಲೂ ಹೆಚ್ಚಳ title=
7th Pay Commission (File Photo)

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಗಳ ಸರಣಿ ಮುಂದುವರೆದಿದೆ. ಕಳೆದ ಸುಮಾರು ಒಂದೂವರೆ ವರ್ಷದಿಂದ ನಿಂತು ಹೋಗಿದ್ದ ತುಟ್ಟಿಭತ್ಯೆಯ ಮೇಲಿನ ತಡೆ ತೆರವುಗೊಂಡ ಬಳಿಕ ಇದೀಗ ಸರ್ಕಾರಿ ನೌಕರರ HRA ಕೂಡ ಪರಿಷ್ಕರಿಸಲಾಗಿದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ HRA (House Rent Allowance) ಕೂಡ ಏರಿಕೆಯಾಗಲಿದೆ. ಸರ್ಕಾರದ ಆದೇಶದ ಪ್ರಕಾರ, ತುಟ್ಟಿಭತ್ಯೆ ಶೇ.25ಕ್ಕಿಂತ ಹೆಚ್ಚಾದ ಕಾರಣ ನಿಯಮಗಳ ಪ್ರಕಾರ HRA ಕೂಡ ಹೆಚ್ಚಿಸಲಾಗಿದೆ ಎನ್ನಲಾಗಿದೆ.

HRA ಶೇ.27ಕ್ಕೆ ಏರಿಕೆಯಾಗಿದೆ
ಕೇಂದ್ರ ಸರ್ಕಾರ (Central Government Employees) ತನ್ನ ಉದ್ಯೋಗಿಗಳ ತುಟ್ಟಿ ಭತ್ಯೆಯನ್ನು 17% ರಿಂದ 28% ಕ್ಕೆ ಹೆಚ್ಚಿಸಿದೆ. ಈ ಪ್ರಕಟಣೆಯ ನಂತರ ಕೇಂದ್ರ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು 27% ಕ್ಕೆ ಹೆಚ್ಚಿಸಿದೆ. ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚಗಳನ್ನು ನೋಡಿಕೊಳ್ಳುವ ಇಲಾಖೆ 7 ಜುಲೈ 2017 ರಂದು ಆದೇಶ ಹೊರಡಿಸಿ ತುಟ್ಟಿಭತ್ಯೆ ಶೇ. 25 ಗಡಿ ದಾಟಲಿದೆ ಎಂದು ಹೇಳಿತ್ತು. ಹೀಗಾಗಿ ಎಚ್‌ಆರ್‌ಎ ಪರಿಷ್ಕರಿಸಲಾಗುವುದು ಎಂದು ಹೇಳಿತ್ತು. ಜುಲೈ 1 ರಿಂದ, ತುಟ್ಟಿಭತ್ಯೆ 28% ಕ್ಕೆ ಏರಿದೆ (DA Hike), ಆದ್ದರಿಂದ ಎಚ್‌ಆರ್‌ಎಯನ್ನೂ ಪರಿಷ್ಕರಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ-7th Pay Commission Update : ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಈ 5 ಪ್ರಮುಖ ಬದಲಾವಣೆಗಳು!

ನಗರಗಳ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆ ಹೆಚ್ಚಳ
7 ನೇ ವೇತನ ಆಯೋಗದ  ನಿಯಮಗಳ (7th Pay Commission Matrix) ಪ್ರಕಾರ, ತುಟ್ಟಿ ಭತ್ಯೆ ಶೇಕಡಾ 25 ಕ್ಕಿಂತ ಹೆಚ್ಚಾಗಿದ್ದರೆ, ನಂತರ ಮನೆ ಬಾಡಿಗೆ ಭತ್ಯೆ (HRA) ಕೂಡ ಹೆಚ್ಚಾಗುತ್ತದೆ. ಎಚ್‌ಆರ್‌ಎಯನ್ನು X ವರ್ಗದ ನಗರಗಳು / ಪಟ್ಟಣಗಳಿಗೆ ಶೇ 3, Y ವರ್ಗಕ್ಕೆ ಶೇ 2 ಮತ್ತು Z ವರ್ಗಕ್ಕೆ ಶೇ 1 ರಷ್ಟು ಹೆಚ್ಚಿಸಬೇಕು ಎಂದು ನಿಯಮ ಹೇಳುತ್ತದೆ. ಇದೀಗ ನೌಕರರ ತುಟ್ಟಿ ಭತ್ಯೆ ಶೇ.28ಕ್ಕೆ ತಲುಪಿದೆ. ಅಂದರೆ ಈ ವರ್ಗದ ನಗರಗಳು / ಪಟ್ಟಣಗಳಲ್ಲಿ ವಾಸಿಸುವ ನೌಕರರಿಗೆ ಕ್ರಮವಾಗಿ ಶೇ.27, ಶೇ.18 ಮತ್ತು ಶೇ.9 ರಷ್ಟು HRA ಸಿಗಲಿದೆ. ಇದುವರೆಗೆ ಈ ನೌಕರರಿಗೆ HRA ಕ್ರಮವಾಗಿ ಶೇ.24, ಶೇ.16 ಮತ್ತು ಶೇ.8 ರಷ್ಟು ಸಿಗುತ್ತಿತ್ತು.

ಇದನ್ನೂ ಓದಿ-7th Pay Commission: ಜುಲೈ 1 ರಿಂದ ಸರ್ಕಾರಿ ನೌಕರರ ವೇತನದಲ್ಲಿ ರೂ.32,400 ಹೆಚ್ಚಳ! ಹೇಗೆ ಇಲ್ಲಿ ತಿಳಿಯಿರಿ

ಕೇಂದ್ರ ಸರ್ಕಾರ (Central Government) ತನ್ನ ನೌಕರರಿಗೆ ಹೌಸ್ ರೆಂಟ್ ಅಲೌನ್ಸ್ ನೀಡುತ್ತದೆ. ಒಂದು ವೇಳೆ ಸರ್ಕಾರಿ ನೌಕರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರ ಆದಾಯ ತೆರಿಗೆಯಲ್ಲಿಯೂ ಕೂಡ ವಿನಾಯ್ತಿ ನೀಡುತ್ತದೆ. ITR ಸಲ್ಲಿಕೆಯ ವೇಳೆ HRA ಲೆಕ್ಕಾಚಾರ ಕೂಡ ಸಲ್ಲಿಸಬೇಕು.

ಇದನ್ನೂ ಓದಿ-7th Pay Commission: ಡಿಎ ಹೆಚ್ಚಳಕ್ಕೂ ಮುನ್ನವೇ ಟಿಎ ಏರಿಕೆ..! ಬಂದಿದೆ ಸಿಹಿ ಸುದ್ದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News