7th Pay Commission: ನೌಕರರಿಗೆ ಹೊಸ ವರ್ಷದ ಉಡುಗೊರೆ! ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ

7th Pay Commission Update: ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ರಾಜ್ಯ ಸರ್ಕಾರವು ನೌಕರರ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಿದೆ. ಈಗ ಒಡಿಶಾ ನೌಕರರು ಕೇಂದ್ರ ನೌಕರರಂತೆ ಶೇ.31ರಷ್ಟು ಡಿಎ ಮತ್ತು ಡಿಆರ್‌ನ ಲಾಭವನ್ನು ಪಡೆಯುತ್ತಾರೆ. ಇದರ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿರಿ.  

Written by - Zee Kannada News Desk | Last Updated : Jan 15, 2022, 11:00 AM IST
  • ನೌಕರರ ಡಿಎ ಮತ್ತು ಡಿಆರ್‌ನಲ್ಲಿ ಶೇ.3ರಷ್ಟು ಹೆಚ್ಚಳ
  • ಒಡಿಶಾ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ
  • ಕೇಂದ್ರ ಸರ್ಕಾರ ಕೂಡ ಶೇ.3ರಷ್ಟು ಡಿಎ ಹೆಚ್ಚಿಸುವ ಸಾಧ್ಯತೆ ಇದೆ
7th Pay Commission: ನೌಕರರಿಗೆ ಹೊಸ ವರ್ಷದ ಉಡುಗೊರೆ! ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ title=
ನೌಕರರ ಡಿಎ ಮತ್ತು ಡಿಆರ್‌ನಲ್ಲಿ ಶೇ.3ರಷ್ಟು ಹೆಚ್ಚಳ

ನವದೆಹಲಿ: ಕಳೆದ ವರ್ಷದ ಕೊನೆಯ ತಿಂಗಳುಗಳಲ್ಲಿ ಉದ್ಯೋಗಿಗಳಿಗೆ ಒಂದರ ನಂತರ ಒಂದು ಒಳ್ಳೆಯ ಸುದ್ದಿ ಸಿಕ್ಕಿವೆ. ಕೇಂದ್ರ ಸರ್ಕಾರದ ನೌಕರರಾಗಲಿ, ರಾಜ್ಯ ಸರ್ಕಾರದ ನೌಕರರಾಗಲಿ ಪ್ರತಿಯೊಬ್ಬರ ವೇತನದ ವಿಷಯದಲ್ಲಿ ಸಿಹಿಸುದ್ದಿ ಪಡೆದುಕೊಂಡಿದ್ದಾರೆ. ಈಗ ಈ ಅನುಕ್ರಮದಲ್ಲಿ ಹೊಸ ವರ್ಷದಲ್ಲೂ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ (7th Pay Commission Latest News) ಇದೆ. ಸರ್ಕಾರ ಮತ್ತೊಮ್ಮೆ ನೌಕರರ ಡಿಎ ಮತ್ತು ಡಿಆರ್ ಅನ್ನು ಶೇ.3ರಷ್ಟು ಹೆಚ್ಚಿಸಿದೆ. ಈ ಹೆಚ್ಚಳವು 1ನೇ ಜುಲೈ 2021ರಿಂದ ಅನ್ವಯವಾಗುತ್ತದೆ. ಈ ಘೋಷಣೆಯ ನಂತರ ನೌಕರರಲ್ಲಿ ಸಂತಸದ ಅಲೆ ಎದ್ದಿದೆ. ಇದರ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿರಿ.  

ಡಿಎ ಮತ್ತು ಡಿಆರ್‌ನಲ್ಲಿ ಶೇ.3ರಷ್ಟು ಹೆಚ್ಚಳ

ವಾಸ್ತವವಾಗಿ ಕೇಂದ್ರ ಸರ್ಕಾರವು ಈಗಾಗಲೇ ತನ್ನ ಉದ್ಯೋಗಿಗಳ ಡಿಎಯನ್ನು ಶೇ.31ಕ್ಕೆ ಹೆಚ್ಚಿಸಿದೆ. ಈಗ ಈ ಅನುಕ್ರಮದಲ್ಲಿ ಒಡಿಶಾ ರಾಜ್ಯ ಸರ್ಕಾರ (Odisha State Government)ವೂ ನೌಕರರ ಡಿಎ ಮತ್ತು ಡಿಆರ್ (DA & DR Hike)ಅನ್ನು ಹೆಚ್ಚಿಸಿದೆ. ಈಗ ಒಡಿಶಾ ನೌಕರರು ಕೇಂದ್ರ ನೌಕರರಂತೆ ಶೇ.31ರಷ್ಟು ಡಿಎ ಮತ್ತು ಡಿಆರ್‌ನ ಲಾಭವನ್ನು ಪಡೆಯಲಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಜ್ಯ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA Hike)ಯಲ್ಲಿ ಶೇ.3ರಷ್ಟು ಹೆಚ್ಚಳವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ಈ ನಿರ್ಧಾರದಿಂದ ರಾಜ್ಯದ ಸುಮಾರು 7.5 ಲಕ್ಷ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Income Tax Refund: ತೆರಿಗೆ ಪಾವತಿದಾರರಿಗೊಂದು ಸಂತಸದ ಸುದ್ದಿ

ಶೇ.30ರಷ್ಟು ಬಾಕಿ ನೀಡಲು ನಿರ್ಧಾರ

7ನೇ ವೇತನ ಆಯೋಗದ ಅಡಿಯಲ್ಲಿರುವ ನೌಕರರಿಗೆ ಶೇ.30ರಷ್ಟು ಬಾಕಿಯನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಗಮನಾರ್ಹ ವಿಷಯವಾಗಿದೆ. ಉದ್ಯೋಗಿಗಳು ಜನವರಿ 2016 ಮತ್ತು ಆಗಸ್ಟ್ 2017ರ ನಡುವೆ ಹೆಚ್ಚಿಸಿದ ವೇತನದ ಶೇ.50 ರಷ್ಟು ಬಾಕಿಯನ್ನು ಪಡೆಯುತ್ತಾರೆ. ಈ ನಿರ್ಧಾರದಿಂದ ರಾಜ್ಯದ 6 ಲಕ್ಷ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಹೊಸ ವರ್ಷದ ಆರಂಭದಿಂದಲೇ ನೌಕರರು ವೇತನ ಹೆಚ್ಚಳದ ಸಿಹಿ ಸಿಗಲಿದೆ. ರಾಜ್ಯ ಸರ್ಕಾರವು ಹೆಚ್ಚಿಸಿದ ನಂತರ ಈಗ ನೌಕರರ ತುಟ್ಟಿಭತ್ಯೆ (Dearness allowance)ಮೂಲ ವೇತನದ ಶೇ.31ರಷ್ಟು ಆಗಿದೆ. ಈ ಹೆಚ್ಚಳವು ಜುಲೈ 1, 2021ರಿಂದ ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರವೂ ಹೆಚ್ಚಿಸಬಹುದು

ಕೇಂದ್ರ ಸರ್ಕಾರವು ಕೇಂದ್ರ ನೌಕರರ ಡಿಎಯನ್ನು ಮತ್ತೊಮ್ಮೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಎಐಸಿಪಿಐ ಸೂಚ್ಯಂಕದ ಡೇಟಾವನ್ನು ನೋಡಿದರೆ ಸೆಪ್ಟೆಂಬರ್ 2021ರವರೆಗೆ ತುಟ್ಟಿ ಭತ್ಯೆಯು ಶೇ.33ಕ್ಕೆ ಏರಿದೆ. ಅಂದರೆ ಇದರ ಪ್ರಕಾರ ಶೇ.2ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ನೀವು SBI ನಲ್ಲಿ Salary ಅಕೌಂಟ್ ಹೊಂದಿದ್ದೀರಾ? ನಿಮಗೆ ಸಿಗಲಿದೆ 20 ಲಕ್ಷದವರೆಗೆ ಸಾಲ!

ಆದಾಗ್ಯೂ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಅಂಕಿಅಂಶಗಳು ಇನ್ನೂ ಲಭ್ಯವಿಲ್ಲ. ಇನ್ನು ಶೇ.1ರಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಡಿಸೆಂಬರ್ 2021ರ ವೇಳೆಗೆ CPI (IW) ಅಂಕಿ ಅಂಶವು 125ಕ್ಕೆ ಉಳಿದಿದ್ದರೆ, ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ ಖಚಿತ. ಅಂದರೆ ಒಟ್ಟು ಡಿಎ ಶೇ.3ರಿಂದ ಶೇ.34ರಷ್ಟು ಹೆಚ್ಚಲಿದೆ. ಇದನ್ನು ಜನವರಿ 2022ರಿಂದ ಪಾವತಿಸಲಾಗುವುದು ಮತ್ತು ಇದರಿಂದ ಕೇಂದ್ರ ನೌಕರರ ವೇತನವು ಹೆಚ್ಚಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News