7th pay commission: ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಜುಲೈ ತಿಂಗಳಿನಲ್ಲಿ ಶೇ.6 ರಷ್ಟು ಡಿಎ ಹೆಚ್ಚಳ!

7th pay commission DA Hike: ಕೇಂದ್ರ ನೌಕರರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಮುಂಬರುವ ತಿಂಗಳಲ್ಲಿ ಅವರಿಗೆ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗಬಹುದು. ಈ ಉಡುಗೊರೆ ಅವರ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯ ಉಡುಗೊರೆಯಾಗಿದೆ.  

Written by - Nitin Tabib | Last Updated : Jun 21, 2022, 03:40 PM IST
  • ಕೇಂದ್ರ ನೌಕರರಿಗೆ ಸಂತಸದ ಸುದ್ದಿಯೊಂದು ಬಂದಿದೆ.
  • ಮುಂಬರುವ ತಿಂಗಳಲ್ಲಿ ಅವರಿಗೆ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗಬಹುದು.
  • ಈ ಉಡುಗೊರೆ ಅವರ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯ ಉಡುಗೊರೆಯಾಗಿದೆ.
7th pay commission: ಕೇಂದ್ರ ಸರ್ಕಾರಿ ನೌಕರರಿಗೊಂದು ಗುಡ್ ನ್ಯೂಸ್, ಜುಲೈ ತಿಂಗಳಿನಲ್ಲಿ ಶೇ.6 ರಷ್ಟು ಡಿಎ ಹೆಚ್ಚಳ! title=
7th Pay Commission

7th pay commission DA Hike: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಮುಂಬರುವ ತಿಂಗಳಲ್ಲಿ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗುವ ಸಾಧ್ಯತೆ ಇದೆ. ಹೌದು. ಜುಲೈ ನಂತರ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಪ್ರಸ್ತುತ, ಕೇಂದ್ರ ನೌಕರರಿಗೆ ಶೇ. 34ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಆದರೆ, ಇದೀಗ ತುಟ್ಟಿಭತ್ಯೆಗೆ ಸಂಬಂಧಿದಂತೆ ಹೊಸ ಮಾಹಿತಿ ಪ್ರಕಟವಾಗಿದೆ. ಎಐಸಿಪಿಐ ಸೂಚ್ಯಂಕದ ದತ್ತಾಂಶವು ಈ ಬಾರಿ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ ಎಂಬುದನ್ನು ಸೂಚಿಸುತ್ತಿದೆ. ಏಪ್ರಿಲ್ 2022ರವರೆಗಿನ ಅಂಕಿಅಂಶಗಳು ಪ್ರಕಟಗೊಂಡಿದ್ದು. ಮೇ ಮತ್ತು ಜೂನ್ ಅಂಕಿ-ಅಂಶಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ಮೇ ತಿಂಗಳ ಸೂಚ್ಯಂಕ ಜೂನ್ 30ರವರೆಗೆ ಪ್ರಕಟವಾಗುವ ಸಾಧ್ಯತೆ ಇದೆ.

ತುಟ್ಟಿಭತ್ಯೆ: ಶೇ.5ರಷ್ಟು ಹೆಚ್ಚಳ ಖಚಿತ!
ತಜ್ಞರ ಪ್ರಕಾರ, ಇದುವರೆಗೆ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಲಿದೆ. ಶೇ.5ರ ಸಾಧ್ಯತೆಗಳು ಇದೀಗ ನಿಚ್ಚಳವಾಗಿದೆ. ಆದರೆ, ಹಣದುಬ್ಬರದಲ್ಲಿನ ಏರಿಕೆಯನ್ನು ಗಮನಿಸಿದರೆ ಇದು ಶೇ.6ರಷ್ಟು ಕೂಡ ಹೆಚ್ಚಾಗಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. AICPI ಸೂಚ್ಯಂಕ 127.7 ರಷ್ಟಿದೆ. ಫೆಬ್ರವರಿ 2022 ರಿಂದ ಈ ಸಂಖ್ಯೆಯಲ್ಲಿ 2.7 ಅಂಕಗಳ ಏರಿಕೆ ಕಂಡುಬಂದಿದೆ. ಎರಡು ತಿಂಗಳಲ್ಲಿ ಇಷ್ಟು ದೊಡ್ಡ ಏರಿಕೆ ಕನದುವರುವುದು ಅತ್ಯಂತ ವಿರಳವಾಗಿದೆ. ಮೇ ಮತ್ತು ಜೂನ್ ತಿಂಗಳ ಸೂಚ್ಯಂಕ ಇನ್ನೂ ಪ್ರಕಟಗೊಂಡಿಲ್ಲ. ತಜ್ಞರ ಪ್ರಕಾರ, ಸೂಚ್ಯಂಕವು ಶೇಕಡಾ 1 ಕ್ಕಿಂತ ಹೆಚ್ಚು ಏರಿಕೆಯಾದರೆ, ತುಟ್ಟಿಭತ್ಯೆಯಲ್ಲಿ ಶೇಕಡಾ 5 ರಷ್ಟು ಹೆಚ್ಚಳವಾಗಬಹುದು. ಆದರೆ, ಹಣದುಬ್ಬರದ ವೇಗ ಇದನ್ನು ಇನ್ನಷ್ಟು ಹೆಚ್ಚಿಸಬಹುದು ಎನ್ನಲಾಗಿದೆ.

ಸೂಚ್ಯಂಕ 130 ಅಂಕಗಳನ್ನು ತಲುಪಿದರೆ ಏನಾಗುತ್ತದೆ?
AICPI ಸೂಚ್ಯಂಕವು 130 ಕ್ಕೆ ತಲುಪಿದರೆ, ಖಂಡಿತವಾಗಿ ತುಟ್ಟಿಭತ್ಯೆಯಲ್ಲಿ ಶೇ. 6ರಷ್ಟು ಏರಿಕೆಯಾದಂತೆಯೇ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆಯಾಗಿ, ನೌಕರರ ತುಟ್ಟಿಭತ್ಯೆ ಶೇ.34 + ಶೇ.6 = ಶೇ.40 ಕ್ಕೆ ತಲುಪಲಿದೆ. ಹೀಗಾಗಿ ಕೇಂದ್ರ ಸರ್ಕಾರಿ  ನೌಕರರ ಪಾಲಿಗೆ ಇದೊಂದು ಉಡುಗೊರೆ ಎಂದರೆ ತಪ್ಪಾಗಲಾರದು. ಏಕೆಂದರೆ, ಕಳೆದ ಒಂದು ವರ್ಷದಿಂದ ಡಿಎ ಬಾಕಿಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ, ಸಭೆ, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ತುಟ್ಟಿಭತ್ಯೆ ಬಾಕಿ ನೀಡುವುದಿಲ್ಲ ಎಂದು ಸರ್ಕಾರ ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ತುಟ್ಟಿ ಭತ್ಯೆ ಮತ್ತು ಇತರೆ ಭತ್ಯೆಗಳು ಕೂಡ ಹೆಚ್ಚಾದರೆ ಖಂಡಿತ ಸರ್ಕಾರಿ ನೌಕರರಿಗೆ ದೊಡ್ಡ ಪರಿಹಾರ ಸಿಕ್ಕಂತಾಗಲಿದೆ.

ಇದನ್ನೂ ಓದಿ-7th Pay Commission: ತುಟ್ಟಿಭತ್ಯೆಯ ಜೊತೆಗೆ ಮನೆ ಬಾಡಿಗೆ ಭತ್ಯೆಯಲ್ಲಿಯೂ ಕೂಡ ಶೇ.3 ರಷ್ಟು ಏರಿಕೆ, ಇಲ್ಲಿದೆ ಲೇಟೆಸ್ಟ್ ಅಪ್ಡೇಟ್

ಡಿಎ ಹೆಚ್ಚಳ: ಇದು ಎಷ್ಟು ಹೆಚ್ಚಾಗುತ್ತದೆ ಎಂದು ನಿಮಗೆ ಹೇಗೆ ಗೊತ್ತು?
ಕೇಂದ್ರ ಉದ್ಯೋಗಿಗಳ ತುಟ್ಟಿ ಭತ್ಯೆಯು ಗ್ರಾಹಕರ ಹಣದುಬ್ಬರ ಅಂದರೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಅವಲಂಬಿಸಿರುತ್ತದೆ. ಈ ಅಂಕಿ ಅಂಶವು ನಿರಂತರವಾಗಿ ಹೆಚ್ಚಾದರೆ, ಅದೇ ಕ್ರಮದಲ್ಲಿ ತುಟ್ಟಿ ಭತ್ಯೆಯೂ ಹೆಚ್ಚಾಗುತ್ತದೆ. ಈ ವರ್ಷದ ಮೊದಲಾರ್ಧದ ಗ್ರಾಹಕ ಹಣದುಬ್ಬರ ಅಂಕಿಅಂಶಗಳು ನಾಲ್ಕು ತಿಂಗಳಿಗೆ ಬಂದಿವೆ. ಇದರಲ್ಲಿ ಜನವರಿ-ಫೆಬ್ರವರಿಯಲ್ಲಿ ಸ್ವಲ್ಪ ಕುಸಿತ ಕಂಡ ನಂತರ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಮಾರ್ಚ್‌ನಲ್ಲಿ ಸೂಚ್ಯಂಕ 1 ಪಾಯಿಂಟ್‌ ಏರಿಕೆ ಕಂಡಿತ್ತು. ಇದೇ ವೇಳೆ ಏಪ್ರಿಲ್ನಲ್ಲಿ, ಅದರಲ್ಲಿ ದೊಡ್ಡ ಏರಿಕೆಯನ್ನು ಗಮನಿಸಲಾಗಿದೆ.  ಏಪ್ರಿಲ್‌ನಲ್ಲಿ ಎಐಸಿಪಿಐ ಸೂಚ್ಯಂಕ 127.7 ಪಾಯಿಂಟ್‌ಗಳಷ್ಟಿತ್ತು. ಇದರಿಂದ ಮುಂದಿನ ದಿನಗಳಲ್ಲಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವುದು ಖಚಿತವಾಗಿದೆ. ಆದರೆ, ಮೇ ಮತ್ತು ಜೂನ್ ತಿಂಗಳ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದೆ. ಈ ಸೂಚ್ಯಂಕ 129 ದಾಟಿದರೆ, ತುಟ್ಟಿಭತ್ಯೆ 5% ರಷ್ಟು ಹೆಚ್ಚಾಗಬಹುದು.

ಇದನ್ನೂ ಓದಿ-ಜುಲೈ 1 ರಿಂದ ಹೊಸ ಟಿಡಿಎಸ್ ನಿಯಮ ಅನ್ವಯ .! ಯಾರ ಮೇಲೆ ಏನು ಪರಿಣಾಮ ?

ಹೊಸ ಸೂತ್ರದೊಂದಿಗೆ ತುಟ್ಟಿಭತ್ಯೆ ಲಭ್ಯವಾಗಲಿದೆ
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತುಟ್ಟಿಭತ್ಯೆಗೆ ಸಂಬಂಧಿಸಿದ ಲೆಕ್ಕಾಚಾರದ ಸೂತ್ರವನ್ನು ಬದಲಾಯಿಸಿದೆ. ಕಾರ್ಮಿಕ ಸಚಿವಾಲಯವು ತುಟ್ಟಿಭತ್ಯೆಗಾಗಿ 2016 ರ ಮೂಲ ವರ್ಷವನ್ನು ಬದಲಾಯಿಸಿದೆ. ವೇತನ ದರ ಸೂಚ್ಯಂಕದ ಹೊಸ ಸರಣಿಯನ್ನು (WRI-ವೇಜ್ ರೇಟ್ ಇಂಡೆಕ್ಸ್) ಬಿಡುಗಡೆ ಮಾಡಲಾಗಿದೆ. 2016=100 ರ ಮೂಲ ವರ್ಷದೊಂದಿಗೆ WRI ಯ ಹೊಸ ಸರಣಿಯು 1963-65 ರ ಮೂಲ ವರ್ಷದ ಹಳೆಯ ಸರಣಿಯನ್ನು ಬದಲಿಸುತ್ತದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News