7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳ ಮತ್ತಷ್ಟು ವಿಳಂಬ!

ಕೇಂದ್ರ ಸರ್ಕಾರವು ಜೂನ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಪ್ರಕಟ

Last Updated : May 13, 2021, 05:09 PM IST
  • 1 ಜನವರಿ 2021 ರ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಘೋಷಣೆ ಇನ್ನೂ ವಿಳಂಬ
  • ನ್ಯಾಷನಲ್ ಕೌನ್ಸಿಲ್-ಜೆಸಿಎಂ-ಸ್ಟಾಫ್ ಸೈಡ್ ಪ್ರಕಾರ
  • ಕೇಂದ್ರ ಸರ್ಕಾರವು ಜೂನ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಪ್ರಕಟ
7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳ ಮತ್ತಷ್ಟು ವಿಳಂಬ! title=

ನವದೆಹಲಿ: 1 ಜನವರಿ 2021 ರ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಘೋಷಣೆ ಇನ್ನೂ ವಿಳಂಬವಾಗಬಹುದು. ನ್ಯಾಷನಲ್ ಕೌನ್ಸಿಲ್-ಜೆಸಿಎಂ-ಸ್ಟಾಫ್ ಸೈಡ್ ಪ್ರಕಾರ, ಕೇಂದ್ರ ಸರ್ಕಾರವು ಜೂನ್‌ನಲ್ಲಿ ಕೇಂದ್ರ ನೌಕರರ ಡಿಎ ಹೆಚ್ಚಳವನ್ನು ಪ್ರಕಟಿಸಬಹುದು. ಆದರೆ, ಕೇಂದ್ರ ಉದ್ಯೋಗಿಗಳಿಗೆ ಡಿಎ ಹೆಚ್ಚಳವು ಮೂಲ ವೇತನದ ಕನಿಷ್ಠ ಶೇ. 4 ರಷ್ಟು ಇರುತ್ತದೆ ಎಂದು ಜೆಸಿಎಂ ಅಧಿಕಾರಿಗಳು ಹೇಳುತ್ತಾರೆ.

ಡಿಎ ಹೆಚ್ಚಳಕ್ಕೆ ವಿಳಂಬವಾಗುತ್ತದೆಯೇ?

1 ಜನವರಿ 2021 ರ ಡಿಎ ಹೆಚ್ಚಳ ವಿಳಂಬದ ಹಿಂದಿನ ಕಾರಣವನ್ನು ವಿವರಿಸುವ ಸ್ಟಾಫ್ ಸೈಡ್ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ(Shiva Gopal Mishra), ನಾವು ಹಣಕಾಸು ಸಚಿವಾಲಯದ ಖರ್ಚು ಮತ್ತು ವೈಯಕ್ತಿಕ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೊರೋನಾ  ಎರಡನೇ ಅಲೆಯಿಂದಾಗಿ ಕೇಂದ್ರ ಸರ್ಕಾರದ ಸಂಪೂರ್ಣ ಯೋಜನೆಗಳು ಗೊಂದಲಕ್ಕೀಡಾಗಿವೆ. ಆದ್ದರಿಂದ ಎಲ್ಲವೂ ಒಂದು ತಿಂಗಳು ಮುಂದೂಡಲಾಗಿದೆ . ಏಪ್ರಿಲ್ ಅಂತ್ಯ ಅಥವಾ ಮೇ ಮಧ್ಯದಲ್ಲಿ ಘೋಷಿಸಬೇಕಿದ್ದ ಡಿಎ ಹೆಚ್ಚಳವು ಈಗ ಜೂನ್ ವೇಳೆಗೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Akshaya Tritiya: ಒಂದು ರೂಪಾಯಿಗೆ ಸಿಗಲಿದೆ 24 ಕ್ಯಾರೆಟ್ ಶುದ್ಧ ಚಿನ್ನ; ಮನೆಯಲ್ಲೇ ಕುಳಿತು ಶಾಪಿಂಗ್ ಮಾಡಿ

ಜುಲೈ 1 ರಿಂದ DA  : 

ಕೇಂದ್ರ ನೌಕರರ 7 ನೇ ಸಿಪಿಸಿ ವೇತನ ಮ್ಯಾಟ್ರಿಕ್ಸ್ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಶಿವ ಗೋಪಾಲ್ ಮಿಶ್ರಾ ಹೇಳುತ್ತಾರೆ, ಏಕೆಂದರೆ ಕೇಂದ್ರ ಸರ್ಕಾರ(Central Govt)ವು ಈಗಾಗಲೇ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಅನ್ನು 2021 ಜೂನ್ ವರೆಗೆ ಸ್ಥಗಿತಗೊಳಿಸಿದೆ. ಡಿಎ, ಡಿಆರ್ ಹೆಚ್ಚಿಸುವದನ್ನು ಜುಲೈ 1 ರಿಂದ ಪುನರಾರಂಭಿಸಲಾಗುವುದು, ಮಾರ್ಚ್ 2021 ರಲ್ಲಿ ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದರು. ಆದ್ದರಿಂದ, 1 ಜನವರಿ 2021 ರ ಡಿಎ ಹೆಚ್ಚಳವನ್ನು ಇಂದು ಘೋಷಿಸಿದರೆ, ಅದು ಜುಲೈ 1, 2021 ರಿಂದ ಮಾತ್ರ ಪ್ರಾರಂಭವಾಗುತ್ತದೆ.

ಇದನ್ನೂ ಓದಿ : PM Kisan : ನಾಳೆಯೇ ರೈತರ ಖಾತೆ ಸೇರಲಿದೆ 8ನೇ ಕಂತಿನ ಹಣ ; ರೈತರೊಂದಿಗೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ

ಎಷ್ಟು ಡಿಎ ಹೆಚ್ಚಾಗುತ್ತದೆ?

ಡಿಎ ಎಷ್ಟು ನಿರೀಕ್ಷಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವ ಗೋಪಾಲ್ ಮಿಶ್ರಾ, ಡಿಎ(DA) ಹೆಚ್ಚಳದ ಲೆಕ್ಕಾಚಾರದ ಪ್ರಕಾರ, ಜುಲೈನಿಂದ ಡಿಸೆಂಬರ್ 2020 ರವರೆಗಿನ ಸರಾಸರಿ ಹಣದುಬ್ಬರವು ಶೇಕಡಾ 3.5 ರಷ್ಟಿದೆ, ಅಂದರೆ ಕೇಂದ್ರ ನೌಕರರ ಹಣದುಬ್ಬರ ಭತ್ಯೆ ಶೇ. 4 ರಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ : ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ

ಬಾಕಿ ಇರುವ 3 DA ಏನಾಗುತ್ತದೆ?

ಬಾಕಿ ಇರುವ ಮೂರು ಡಿಎ ಕಂತುಗಳ ಬಗ್ಗೆ ಶಿವ ಗೋಪಾಲ್ ಮಿಶ್ರಾ ಅವರು ಈ ಬಗ್ಗೆ ಕೇಂದ್ರ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳುತ್ತಾರೆ. ನಾವು ಶೀಘ್ರದಲ್ಲೇ ಈ ವಿಷಯದ ಬಗ್ಗೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ. ಒಳ್ಳೆಯದು ಏನೆಂದರೆ, ಡಿಎ ಬಾಕಿ ಉಳಿದಿರುವ ಮೂರೂ ಕಂತುಗಳನ್ನು ನೀಡಲು ಸರ್ಕಾರ(Govt) ವಿರೋಧಿಸುವುದಿಲ್ಲ. ಉಳಿದ ಮೂರು ಕಂತುಗಳ ಡಿಎ ಅನ್ನು ನೌಕರರಿಗೆ ಏಕಕಾಲದಲ್ಲಿ ಒದಗಿಸಲು ಸಾಧ್ಯವಾಗದಿದ್ದರೆ, ಅವರು ಅದನ್ನು ಹಲವಾರು ಭಾಗಗಳಲ್ಲಿ ನೀಡಬಹುದು ಎಂದು ನಾವು ಸರ್ಕಾರಕ್ಕೆ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News