7th Pay Commission: ತಂದೆ ತಾಯಿ ಸಾವಿನ ನಂತರ ಮಕ್ಕಳಿಗೆ ಪ್ರತಿ ತಿಂಗಳು 1.25 ಲಕ್ಷ ಪಿಂಚಣಿ

ಕೇಂದ್ರ ನಾಗರಿಕ ಸೇವೆಗಳ ನಿಯಮ 54 ರ ಉಪ ನಿಯಮ (11) ರ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಈ ನಿಯಮಕ್ಕೆ ಒಳಪಟ್ಟರೆ, ಅವರ ಸಾವಿನ ನಂತರ ಮಕ್ಕಳು ಇಬ್ಬರೂ ಪೋಷಕರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

Written by - Ranjitha R K | Last Updated : May 31, 2021, 11:47 AM IST
  • ಪೋಷಕರ ಮರಣದ ನಂತರ ಮಕ್ಕಳಿಗೆ ಎರಡೂ ಪಿಂಚಣಿ
  • 7ನೇ ವೇತನ ಆಯೋಗದ ಪ್ರಕಾರ ಗರಿಷ್ಟ 1.25 ಲಕ್ಷ ಪಿಂಚಣಿ
  • ಕೇಂದ್ರ ನೌಕರರ ಪಿಂಚಣಿ ಕುರಿತ ಹೊಸ ನಿಯಮಗಳನ್ನು ತಿಳಿಯಿರಿ
7th Pay Commission: ತಂದೆ ತಾಯಿ ಸಾವಿನ ನಂತರ ಮಕ್ಕಳಿಗೆ ಪ್ರತಿ ತಿಂಗಳು 1.25  ಲಕ್ಷ ಪಿಂಚಣಿ title=
7ನೇ ವೇತನ ಆಯೋಗದ ಪ್ರಕಾರ ಗರಿಷ್ಟ 1.25 ಲಕ್ಷ ಪಿಂಚಣಿ (photo zee news)

ನವದೆಹಲಿ : 7th Pay Commission : ಗಂಡ ಮತ್ತು ಹೆಂಡತಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರರಾಗಿದ್ದು, Central Civil Services 1972 ರ ನಿಯಮಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಅವರು ಮೃತಪಟ್ಟರೆ, ಅವರ ಮರಣದ ನಂತರ ಅವರ ಮಕ್ಕಳಿಗೆ ಎರಡು ಫ್ಯಾಮಿಲಿ ಪೆನ್ಶನ್ ನೀಡಲಾಗುವುದು.  ಈ ಪಿಂಚಣಿಯ ಗರಿಷ್ಟ ಮಿತಿ  1.25 ಲಕ್ಷ ರೂ ಆಗಿರಲಿದೆ. ಆದರೆ ಇದಕ್ಕೆ ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. 

ಕೇಂದ್ರ ನೌಕರರ ಪಿಂಚಣಿ ಕುರಿತು ಹೊಸ ನಿಯಮಗಳು : 
ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ (Central government employee) ಜೊತೆ ಅವರ ಕುಟುಂಬಗಳಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಕೇಂದ್ರ ನಾಗರಿಕ ಸೇವೆಗಳ (Central Civil Services, 1972) ನಿಯಮ 54 ರ ಉಪ ನಿಯಮ (11) ರ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಈ ನಿಯಮಕ್ಕೆ ಒಳಪಟ್ಟರೆ, ಅವರ ಸಾವಿನ ನಂತರ ಮಕ್ಕಳು ಇಬ್ಬರೂ ಪೋಷಕರ ಪಿಂಚಣಿ (Pension) ಪಡೆಯಲು ಅರ್ಹರಾಗಿರುತ್ತಾರೆ. ನಿಯಮಗಳ ಪ್ರಕಾರ, ಪೋಷಕರಲ್ಲಿ ಒಬ್ಬರು ಸೇವೆಯ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಮೃತಪಟ್ಟರೆ, ಪಿಂಚಣಿಯನ್ನು ಇನ್ನೊಬ್ಬರಿಗೆ ಅಂದರೆ ಪತಿ ಅಥವಾ ಪತ್ನಿಗೆ  ನೀಡಲಾಗುತ್ತದೆ. ಇಬ್ಬರೂ ಮರಣ ಹೊಂದಿದ ನಂತರ, ಅವರ ಮಕ್ಕಳಿಗೆ ಎರಡೂ ಪಿಂಚಣಿ ಸಿಗುತ್ತದೆ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಇಲ್ಲಿದೆ ಇಂದಿನ ಬೆಲೆ!

ಹಿಂದೆ ಇದ್ದ ನಿಯಮ : 
ಈ ಮೊದಲು, ಪಿಂಚಣಿದಾರರು ಮೃತಪಟ್ಟರೆ, ರೂಲ್ 54 ಉಪ ನಿಯಮ (3) ರ ಪ್ರಕಾರ ಅವರ ಮಕ್ಕಳಿಗೆ ಸಿಗುವ ಎರಡು ಪಿಂಚಣಿಗಳ ಮಿತಿ 45,000 ರೂಗಳಾಗಿತ್ತು.  ರೂಲ್ 54 ಉಪ ನಿಯಮ (2) ಪ್ರಕಾರ ಎರಡೂ ಪಿಂಚಣಿ ಪ್ರತಿ ತಿಂಗಳಿಗೆ 27,000 ರೂಗಳಾಗಿತ್ತು.  ಆರನೇ ವೇತನ ಆಯೋಗದ  (6 pay commission) ಪ್ರಕಾರ, ಸಿಸಿಎಸ್ ನಿಯಮಗಳ ರೂಲ್  54 (11) ರ ಅಡಿಯಲ್ಲಿ 90 ಸಾವಿರದ ಮೇಲೆ 50 ಶೇ ಮತ್ತು 30 ಶೇ ದಂತೆ ಅತ್ಯಧಿಕ ಮೊತ್ತವನ್ನು ಪಾವತಿಸಲಾಗುತ್ತಿತ್ತು. 

ಏನು ಹೇಳುತ್ತೆ ಹೊಸ ನಿಯಮ : 
7th Pay Commission ಜಾರಿಯಾದ ನಂತರ, ವೇತನವನ್ನು ಪ್ರತಿ ತಿಂಗಳಿಗೆ 2.5 ಲಕ್ಷ ರೂ.ಗೆ ಪರಿಷ್ಕರಿಸಲಾಯಿತು. ಹೀಗಾಗಿ ಮಕ್ಕಳಿಗೆ ಸಿಗುವ ಪಿಂಚಣಿಯ ಮೊತ್ತದಲ್ಲೂ ಬದಲಾವಣೆಯಾಗಿದೆ.  Department of Pension & Pensioners Welfare (DoPPW)  ಅಧಿಸೂಚನೆಯ ಪ್ರಕಾರ, ಪಿಂಚಣಿ ಮಿತಿಯನ್ನು 2 ರೀತಿಯಲ್ಲಿ ಬದಲಾಯಿಸಲಾಗಿದೆ. ಅಂದರೆ  ತಿಂಗಳಿಗೆ 1.25 ಲಕ್ಷ ರೂ. ಮತ್ತು  75,000 ರೂ ಎಂದು ಮಿತಿಗೊಳಿಸಲಾಗಿದೆ. 

ಇದನ್ನೂ ಓದಿ : Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News