ಸರ್ಕಾರಿ ನೌಕರರ ವೇತನ ಅರ್ಧಕ್ಕರ್ಧ ಜಾಸ್ತಿ ! ಈ ತಿಂಗಳಿಂದ 8ನೇ ವೇತನ ಆಯೋಗದಂತೆ ಸ್ಯಾಲರಿ ?

ಜನವರಿ 2024 ರ ಹೊತ್ತಿಗೆ, ಉದ್ಯೋಗಿಗಳ ತುಟ್ಟಿಭತ್ಯೆ 50 ಪ್ರತಿಶತವನ್ನು ಮೀರುವ ನಿರೀಕ್ಷೆಯಿದೆ. ಪ್ರಸ್ತುತ ಡಿಎ ದರವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿರ್ಧರಿಸಲಾಗುತ್ತಿದೆ.    

Written by - Ranjitha R K | Last Updated : Oct 3, 2023, 10:40 AM IST
  • ಕೇಂದ್ರ ಸರ್ಕಾರಿ ನೌಕರರಿಗೆ ಬಹಳ ಮುಖ್ಯವಾದ ಸುದ್ದಿ ಇದು.
  • ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ
  • ವೇತನ ಪರಿಷ್ಕರಣೆಗಾಗಿ ಹೊಸ ವೇತನ ಆಯೋಗ
ಸರ್ಕಾರಿ ನೌಕರರ ವೇತನ ಅರ್ಧಕ್ಕರ್ಧ ಜಾಸ್ತಿ ! ಈ ತಿಂಗಳಿಂದ  8ನೇ ವೇತನ ಆಯೋಗದಂತೆ  ಸ್ಯಾಲರಿ ?  title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರಿಗೆ ಬಹಳ ಮುಖ್ಯವಾದ  ಸುದ್ದಿ ಇದು. ಮುಂಬರುವ ತಿಂಗಳುಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ  ಬೆದ್ಕೆ ಈಡೇರಲಿದೆ. 2024ರ ಜನವರಿಗೆ ತುಟ್ಟಿಭತ್ಯೆ  ಹೆಚ್ಚಳ,  ಬಾಕಿ ಡಿಎ ಮೊತ್ತ ಪಾವತಿ , 8ನೇ ವೇತನ ಆಯೋಗ ರಚನೆ ಹೀಗೆ ಹಲವಾರು ಸಂಭ್ರಮದ ಸುದ್ದಿಗಳು ಸಿಗಲಿವೆ. ಜನವರಿ 2024 ರ ಹೊತ್ತಿಗೆ, ಉದ್ಯೋಗಿಗಳ ತುಟ್ಟಿಭತ್ಯೆ 50 ಪ್ರತಿಶತವನ್ನು ಮೀರುವ ನಿರೀಕ್ಷೆಯಿದೆ. ಪ್ರಸ್ತುತ ಡಿಎ ದರವನ್ನು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿರ್ಧರಿಸಲಾಗುತ್ತಿದೆ.  

ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡಲು, ಉದ್ಯೋಗಿಗಳಿಗೆ  ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ನೀಡಲಾಗುವುದು. ಮುಂಬರುವ ತಿಂಗಳುಗಳಲ್ಲಿ ಸರ್ಕಾರಿ ನೌಕರರ ಮೂಲ ವೇತನ  50% ಅಥವಾ ಅದಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಹಿಂದಿನ ವೇತನ ಆಯೋಗದ ಪ್ರಕಾರ ಅಂದರೆ ೭ನೆ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದಾಗ ವೇತನ ಪರಿಷ್ಕರಣೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಈ ಶಿಫಾರಸ್ಸು ಇದು 8ನೇ ವೇತನ ಆಯೋಗ ರಚನೆಗೆಸರ್ಕಾರ ಚಿಂತನೆ ನಡೆಸುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ : ಅಕ್ಟೋಬರ್ ನಿಂದ ಹೊಸ ನಿಯಮಗಳು ಜಾರಿ.. ಸಿಮ್ ಕಾರ್ಡ್‌ ಬಳಕೆದಾರರು ಈ ನಿಯಮಗಳನ್ನು ಪಾಲಿಸಲೇಬೇಕು!!

ಪ್ರಸ್ತುತ 8ನೇ ವೇತನ ಆಯೋಗ ರಚಿಸುವ ಯೋಚನೆ ಇಲ್ಲ ಎಂದಿರುವ  ಹಣಕಾಸು ಸಚಿವಾಲಯ  : 
8ನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಯೋಜನೆ ಪ್ರಸ್ತುತ ಪರಿಗಣನೆಯಲ್ಲಿಲ್ಲ ಎಂದು ಸರ್ಕಾರ ಹೇಳಿದೆ. ಜುಲೈ 25, 2023 ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, "ಅಂತಹ ಯಾವುದೇ ಯೋಜನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ" ಎಂದು ಹೇಳಿದ್ದರು. 

ವೇತನ ಪರಿಷ್ಕರಣೆಗಾಗಿ ಹೊಸ ವೇತನ ಆಯೋಗ : 
ಆದರೂ ಈ ಘಟನೆ ನಡೆದು, ಕೆಲವು ವಾರಗಳು ಕಳೆದಿವೆ. ಈಗ ಸರ್ಕಾರದ ನಿಲುವು ಬದಲಾಗಿದೆ ಎನ್ನುತ್ತಿವೆ ಮೂಲಗಳು. ಏಳನೇ ವೇತನ ಆಯೋಗದ ರಚನೆಯೊಂದಿಗೆ, ತುಟ್ಟಿ ಭತ್ಯೆಯ ಪರಿಷ್ಕರಣೆಯ ನಿಯಮಗಳನ್ನು ಸರ್ಕಾರ ಬದಲಾಯಿಸಿತು. ಇದರ ಪ್ರಕಾರ ಡಿಎ ಹೆಚ್ಚಳವು ಶೇಕಡಾ 50 ಕ್ಕೆ ತಲುಪಿದಾಗ, ಅದು ಶೂನ್ಯಕ್ಕೆ ಇಳಿಯುತ್ತದೆ. ಇದಾದ ಬಳಿಕ ಆಗ ಇದ್ದ ಮೂಲ ವೇತನಕ್ಕೆ ಶೇ.50 ಡಿಎ ಸೇರ್ಪಡೆಯಾಗಲಿದ್ದು, ಶೂನ್ಯದಿಂದ ಡಿಎ  ಲೆಕ್ಕಾಚಾರ ಆರಂಭವಾಗಲಿದೆ. ಡಿಎ ಶೇ.50ಕ್ಕೆ ತಲುಪಿದರೆ ವೇತನ ಪರಿಷ್ಕರಣೆ ಮಾಡಬೇಕು. ವೇತನ ಪರಿಷ್ಕರಣೆಗಾಗಿ ಹೊಸ ವೇತನ ಆಯೋಗ ರಚಿಸಬೇಕು.

ಇದನ್ನೂ ಓದಿ : ನಿರಂತರ ಇಳಿಕೆಯಾಗುತ್ತಲೇ ಇದೆ ಬಂಗಾರದ ಬೆಲೆ ! ಮತ್ತೆ ಮರುಕಳಿಸುವುದೇ ಹಳೆಯ ದಿನ

ಅಲ್ಲದೆ, ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರನ್ನು ಖುಷಿ ಪಡಿಸಲು ಸರ್ಕಾರ ಚುನಾವಣೆಗೂ ಮುನ್ನವೇ 8ನೇ ವೇತನ ಆಯೋಗ ರಚನೆ ಮಾಡುವುದಾಗಿ ಘೋಷಿಸಬಹುದು. ಏಕೆಂದರೆ ವೇತನ ಪರಿಷ್ಕರಣೆ ಮಾಡಬೇಕಾದರೆ ಹೊಸ ವೇತನ ಆಯೋಗವನ್ನು ಸ್ಥಾಪಿಸುವುದು ಅಗತ್ಯ.  

ಹಣದುಬ್ಬರವನ್ನು ಎದುರಿಸಲು ಮತ್ತು ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ  ಪರಿಹಾರವನ್ನು ನೀಡಲಾಗುತ್ತದೆ . ಜನವರಿ 2023 ರಲ್ಲಿ, ಈ ದರಗಳನ್ನು ಸಂಬಳ ಮತ್ತು ಪಿಂಚಣಿಯ 42 ಪ್ರತಿಶತಕ್ಕೆ ಹೆಚ್ಚಿಸಲಾಯಿತು. ಪ್ರತಿ ಆರು ತಿಂಗಳಿಗೊಮ್ಮೆ (AICCIP-IW) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ DA/DR ದರಗಳನ್ನು ಪರಿಷ್ಕರಿಸಲಾಗುತ್ತದೆ.

ಇದನ್ನೂ ಓದಿ : ಸ್ಥಿರ ಠೇವಣಿ ವಿಷಯದಲ್ಲಿ ಗ್ರಾಹಕರ ನೆಚ್ಚಿನ ಬ್ಯಾಂಕ್ ಗಳು ಯಾವುವು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News