ಗ್ಯಾರಂಟಿ ಇಲ್ಲದೇ ಇಲ್ಲಿ 5 ಲಕ್ಷ ಸಾಲ ದೊರೆಯಲಿದೆ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ

ಸಣ್ಣ ವ್ಯಾಪಾರಿಗಳಿಗಾಗಿ Paytmನಿಂದ 5 ಲಕ್ಷದವರೆಗಿನ ಸಾಲದ ಉತ್ತಮ ಕೊಡುಗೆಯನ್ನು ಪರಿಚಯಿಸಲಾಗಿದೆ. ನೀವು ಈ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಗ್ಯಾರಂಟಿ ನೀಡಬೇಕಾಗಿಲ್ಲ.

Written by - Puttaraj K Alur | Last Updated : Feb 16, 2022, 09:00 PM IST
  • Paytmನಿಂದ ಗ್ರಾಹಕರಿಗೆ ಸುಲಭ ಸಾಲ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ
  • ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ
  • ಪಡೆದ ಸಾಲವನ್ನು ದಿನನಿತ್ಯದ ಆಧಾರದ ಮೇಲೆ ಮರುಪಾವತಿಸಬೇಕಾಗುತ್ತದೆ
ಗ್ಯಾರಂಟಿ ಇಲ್ಲದೇ ಇಲ್ಲಿ 5 ಲಕ್ಷ ಸಾಲ ದೊರೆಯಲಿದೆ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ title=
ಸಣ್ಣ ಉದ್ಯಮಿಗಳಿಗೆ ಉತ್ತಮ ಸಾಲ ಸೌಲಭ್ಯ

ನವದೆಹಲಿ: ಬ್ಯಾಂಕ್‌ನಿಂದ ಸಾಲ ಪಡೆಯುವುದು ಹಿಂದಿಗಿಂತ ಈ ದಿನಗಳಲ್ಲಿ ತುಂಬಾ ಸುಲಭವಾಗಿದೆ. ಆದರೆ ಇದಕ್ಕಾಗಿ ನಿಮ್ಮ CIBIL ಸ್ಕೋರ್ ಉತ್ತಮವಾಗಿರುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಸಾಲಗಳಿಗೆ ಡಿಜಿಟಲ್ ಪಾವತಿ ವೇದಿಕೆಯಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. Google Pay ನಂತರ Paytm ಸಣ್ಣ ಉದ್ಯಮಿಗಳಿಗೆ ಉತ್ತಮ ಸಾಲ ಸೌಲಭ್ಯ(Paytm Loan Offer)ವನ್ನು ತಂದಿದೆ.

5 ಲಕ್ಷದವರೆಗೆ ಅತ್ಯುತ್ತಮ ಸಾಲದ ಕೊಡುಗೆ

ಸಣ್ಣ ವ್ಯಾಪಾರಿಗಳಿಗಾಗಿ Paytmನಿಂದ 5 ಲಕ್ಷದವರೆಗಿನ ಸಾಲದ ಉತ್ತಮ ಕೊಡುಗೆಯನ್ನು ಪರಿಚಯಿಸಲಾಗಿದೆ. ನೀವು ಈ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ಇದಕ್ಕಾಗಿ ನೀವು ಯಾವುದೇ ರೀತಿಯ ಗ್ಯಾರಂಟಿ(Loan Without Guarantee) ನೀಡಬೇಕಾಗಿಲ್ಲ. ಇದರ ಹೊರತಾಗಿ ನೀವು ಇದನ್ನು ದೈನಂದಿನ ಆಧಾರದ ಮೇಲೆ EMI ಆಗಿ ಪಾವತಿಸಬಹುದು.

ಇದನ್ನೂ ಓದಿ: SBI Offer: SBIತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ., ಲಾಭ ಪಡೆಯುವುದು ಹೇಗೆ?

ಬ್ಯಾಂಕ್‌ಗಳು ಮತ್ತು NBFC ಗಳೊಂದಿಗೆ ಪಾಲುದಾರಿಕೆ

ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸಲು Paytm ವಾಣಿಜ್ಯ ಬ್ಯಾಂಕುಗಳು ಮತ್ತು NBFC ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ನೀವು ಸಾಲವನ್ನು ಪಡೆಯಲು ಬಯಸಿದರೆ ವ್ಯಾಪಾರಕ್ಕಾಗಿ Paytm ಅಪ್ಲಿಕೇಶನ್‌ನಲ್ಲಿ ‘ಮರ್ಚೆಂಟ್ ಲೆಂಡಿಂಗ್ ಪ್ರೋಗ್ರಾಂ’ಗೆ ಹೋಗಬೇಕು. Paytm ದೈನಂದಿನ ವಹಿವಾಟಿನ ಆಧಾರದ ಮೇಲೆ ವ್ಯಾಪಾರಿಯ ಕ್ರೆಡಿಟ್ ಅರ್ಹತೆಯನ್ನು ಪರಿಶೀಲಿಸುತ್ತದೆ.

ಯಾವುದೇ ದಾಖಲೆ ಅಗತ್ಯವಿಲ್ಲ

ಈ ಸಾಲದ ಅಪ್ಲಿಕೇಶನ್ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇದರಲ್ಲಿ ಯಾವುದೇ ರೀತಿಯ ದಾಖಲೆಗಳನ್ನು ಒದಗಿಸುವ ಅಗತ್ಯವಿರುವುದಿಲ್ಲ. Paytmನೊಂದಿಗೆ ವ್ಯಾಪಾರಿಯ ದೈನಂದಿನ ಇತ್ಯರ್ಥದ ಮೂಲಕ ಸಾಲ ಮರುಪಾವತಿ(Loan Repayment)ಯನ್ನು ದೈನಂದಿನ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಒಬ್ಬರು ಅವಧಿಗೆ ಮುನ್ನವೇ ಸಾಲವನ್ನು Close ಮಾಡಲು ಬಯಸಿದರೆ, ಅದರ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ಇದನ್ನೂ ಓದಿ: Bank Special Offer: ಗೃಹಸಾಲ ತೆಗೆದುಕೊಳ್ಳುವಾಗ EMI ಪಾವತಿಸಬೇಕಾಗಿಲ್ಲ, ಕೊಡುಗೆ ಏನೆಂದು ತಿಳಿಯಿರಿ

ಈ ಹಂತಗಳ ಮೂಲಕ ನೀವು ಸಾಲ ಪಡೆಯಬಹುದು

  • ವ್ಯಾಪಾರಕ್ಕಾಗಿ Paytm ಅಪ್ಲಿಕೇಶನ್‌ನ ಹೋಮ್ ಸ್ಕ್ರೀನ್‌ನಲ್ಲಿರುವ ‘ಬಿಸಿನೆಸ್ ಲೋನ್’ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಲಭ್ಯವಿರುವ ಕೊಡುಗೆಗಳನ್ನು ಪರಿಶೀಲಿಸಿ. ಅಗತ್ಯಕ್ಕೆ ಅನುಗುಣವಾಗಿ ನೀವು ಸಾಲದ ಮೊತ್ತವನ್ನು ಕಡಿಮೆ ಮಾಡಬಹುದು.
  • ಮೊತ್ತವನ್ನು ಆಯ್ಕೆ ಮಾಡಿದ ನಂತರ ನೀವು ವಿತರಣಾ ಮೊತ್ತ, ಪಾವತಿಸಬೇಕಾದ ಒಟ್ಟು ಮೊತ್ತ, ದೈನಂದಿನ ಕಂತು ಇತ್ಯಾದಿಗಳ ಮಾಹಿತಿಯನ್ನು ನೋಡಬಹುದು.
  • ಇಲ್ಲಿ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ನಂತರ, ‘Get Started’ ಮೇಲೆ ಟ್ಯಾಪ್ ಮಾಡಿ. ಸಾಲದ ಅರ್ಜಿಯನ್ನು ಪೂರ್ಣಗೊಳಿಸಲು CKYC ಯೊಂದಿಗೆ ನಿಮ್ಮ KYC ಡೇಟಾವನ್ನು ಸಲ್ಲಿಸಿ.
  • PAN, ಹುಟ್ಟಿದ ದಿನಾಂಕ ಮತ್ತು ಇ-ಮೇಲ್ ಮುಂತಾದವುಗಳಂತಹ ಮಾಹಿತಿಯನ್ನು ಇಲ್ಲಿ ನಮೂದಿಸಿ.
  • KYC ಪರಿಶೀಲನೆಯ ನಂತರ ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಿ. ಸಾಲದ ಅನುಮೋದನೆ ಪಡೆದ ನಂತರ ಹಣವನ್ನು ನಿಮ್ಮ ಖಾತೆಗೆ ಕಳುಹಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News