ಕರ್ನಾಟಕ ಚುನಾವಣೆಯಲ್ಲಿ ಮತ ಹಾಕುವ ಇಚ್ಛೆ ವ್ಯಕ್ತಪಡಿಸಿದ ವಿಜಯ್ ಮಲ್ಯ!

    

Last Updated : Apr 27, 2018, 10:32 PM IST
ಕರ್ನಾಟಕ ಚುನಾವಣೆಯಲ್ಲಿ ಮತ ಹಾಕುವ ಇಚ್ಛೆ ವ್ಯಕ್ತಪಡಿಸಿದ ವಿಜಯ್ ಮಲ್ಯ! title=

ನವದೆಹಲಿ: ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ

ಈ ಕುರಿತಾಗಿ ಎನ್ಡಿಟಿವಿ ಜೊತೆ ಮಾತನಾಡಿರುವ ವಿಜಯ ಮಲ್ಯ " ಕರ್ನಾಟಕದಲ್ಲಿ ಮತ ಚಲಾಯಿಸುವುದು ನನ್ನ ಪ್ರಜಾಪ್ರಭುತ್ವದ ಹಕ್ಕು ಆದರೆ ನಿಮಗೆ ತಿಳಿದಿರುವಂತೆ ನಾನು ಇಲ್ಲಿರುವುದರಿಂದ ಪ್ರಯಾಣ ಮಾಡಲಾಗುತ್ತಿಲ್ಲ. ನನಗೆ ಕರ್ನಾಟಕವನ್ನು ಪ್ರತಿನಿಧಿಸುವ ಹೆಮ್ಮೆ ಇದೆ,  ಆದರೆ ನಾನು ದೂರದಲ್ಲಿದ್ದೆನೆ ... ಆದ್ದರಿಂದ ನನಗೆ ರಾಜಕೀಯವನ್ನು ಹತ್ತಿರದಿಂದ ನೋಡಲಾಗುತ್ತಿಲ್ಲ" ಎಂದು ತಿಳಿಸಿದ್ದಾರೆ.

ವಿಜಯ ಮಲ್ಯರವರು ಭಾರತದಲ್ಲಿ ಹಲವಾರು ಬ್ಯಾಂಕಗಳಿಂದ ಸುಮಾರು 9000 ಕೋಟಿ ರೂಗಳ ಸಾಲವನ್ನು ಪಡೆದಿದ್ದರು. ಯಾವಾಗ ಬ್ಯಾಂಕ್ ಗಳು  ಸಾಲವನ್ನು ಮರು ಪಾವತಿಸುವ ಕಾರ್ಯಚರಣೆ ಪ್ರಾರಂಭಿಸಿದವೋ ಆಗ ಅವರು ಈ ದೇಶವನ್ನು ಬಿಟ್ಟು ತೆರಳಿದರು.ಆದ್ದರಿಂದ ಅವರನ್ನು ಈಗ ಕೇಂದ್ರ ಸರಕಾರವು ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

Trending News