ರಾಜ್ಯದ ಜನತೆ ಮತ ಕೇಳುವ ನೈತಿಕತೆ ಮೋದಿ ಉಳಿಸಿಕೊಂಡಿಲ್ಲ: ಕುಮಾರಸ್ವಾಮಿ

ರಾಜ್ಯದ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಿಟ್ಟು ಇತರ ಪಕ್ಷಗಳ ಬಗ್ಗೆ ತಮ್ಮ ಆಭಿಪ್ರಾಯ ಹೇಳಲು ನರೇಂದ್ರ ಮೋದಿ ಅವರು ಇಲ್ಲಿವರೆಗೆ ಬರಬೇಕಿತ್ತಾ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

Last Updated : May 4, 2018, 02:57 PM IST
ರಾಜ್ಯದ ಜನತೆ ಮತ ಕೇಳುವ ನೈತಿಕತೆ ಮೋದಿ ಉಳಿಸಿಕೊಂಡಿಲ್ಲ: ಕುಮಾರಸ್ವಾಮಿ  title=

ವಿಜಯಪುರ: ದೇಶದ ಪ್ರಧಾನಿಯಾಗಿ ರಾಜ್ಯದ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಿಟ್ಟು ಇತರ ಪಕ್ಷಗಳ ಬಗ್ಗೆ ತಮ್ಮ ಆಭಿಪ್ರಾಯ ಹೇಳಲು ನರೇಂದ್ರ ಮೋದಿ ಅವರು ಇಲ್ಲಿವರೆಗೆ ಬರಬೇಕಿತ್ತಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರ ರಾಜ್ಯಗಳಿಂದ ಪಕ್ಷದ ಪ್ರಚಾರಕ್ಕಾಗಿ ಉಗ್ರವಾದಿಗಳನ್ನು ಪಕ್ಷದ ಪ್ರಚಾರಕ್ಕೆ ಕರೆಸುತ್ತಾರೆ ಎಂದು ಮೋದಿ ಆರೋಪಿಸುತ್ತಾರೆ. ಹಾಗಾದರೆ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಇವರೆಲ್ಲಾ ಕನ್ನಡಿಗರಾ? ಕರ್ನಾಟಕಕ್ಕೆ ಇವರೆಲ್ಲರ ಕೊಡುಗೆ ಏನು? ನಮ್ಮ ಪಕ್ಷಕ್ಕೆ ಉಪದೇಶ ಮಾಡುವ ನೈತಿಕತೆ ಇವರಿಗೆ ಇದೆಯೇ? ಎಂದು ವಾಗ್ದಾಳಿ ನಡೆಸಿದರು.

ಗುರುವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಜೆಡಿಎಸ್ ಗೆ ಮತ ಹಾಕಬೇಡಿ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಕಾಂಗ್ರೆಸ್ ನವರು ಜೆಡಿಎಸ್ ಗೆ ಮತ ಹಾಕಿದರೆ  ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಾರೆ. ಮತ್ತೊಂದೆಡೆ ಮೋದಿ ಅವರು ಜೆಡಿಎಸ್ ಗೆ ಮತ ಹಾಕಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಹಾಗಾಗಿ ಜೆಡಿಎಸ್'ಗೆ ಮತ ಹಾಕಬೇಡಿ ಅಂತಾರೆ. ಹಾಗಾದರೆ, ಇವರಿಬ್ಬರೇ ಚುನಾವಣೆ ನಿರ್ಧಾರ ಮಾಡಿಕೊಂಡ ಹಾಗೆ ಕಾಣುತ್ತೆ. ಕಳೆದ 4 ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮೋದಿ ಏನೂ ಮಾಡಿಲ್ಲ. ರಾಜ್ಯದ ಜನರ ಬಳಿ ಮತ ಕೇಳುವ ನೈತಿಕತೆಯನ್ನೂ ಮೋದಿ ಉಳಿಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದರು. 

Trending News