ಕರ್ನಾಟಕ ಚುನಾವಣೆ : ಬೆಳಿಗ್ಗೆ 9.15ರವರೆಗೂ ಶೇ.10.51 ಮತದಾನ

ರಾಜ್ಯದ ಎಲ್ಲಾ ಮತಗಟ್ಟೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದು, ಬೆಳಿಗ್ಗೆ 9.15ರವರೆಗೆ ಶೇ. 10.51 ಮತದಾನವಾಗಿದೆ. 

Last Updated : May 12, 2018, 09:59 AM IST
ಕರ್ನಾಟಕ ಚುನಾವಣೆ : ಬೆಳಿಗ್ಗೆ 9.15ರವರೆಗೂ ಶೇ.10.51 ಮತದಾನ title=

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿರುಸಿನ ಮತದಾನ ಆರಂಭವಾಗಿದೆ. ರಾಜ್ಯದ ಎಲ್ಲಾ ಮತಗಟ್ಟೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದು, ಬೆಳಿಗ್ಗೆ 9.15ರವರೆಗೆ ಶೇ. 10.51 ಮತದಾನವಾಗಿದೆ. 

ಇಡೀ ದೇಶದ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, 222 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದೆ. 

ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರೆಯಲೇ ಬೇಕೆಂದು ಒಂದೆಡೆ ಸಿದ್ದರಾಮಯ್ಯ ರಾಜ್ಯಾದ್ಯಂತ ಸಾಕಷ್ಟು ಪ್ರಚಾರ ಮಾಡಿದ್ದರೆ. ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಸಿಎಂ ಸ್ಥಾನ ಏರುವ ಕನಸು ಹೊತ್ತಿದ್ದಾರೆ. ಇನ್ನು, ಪ್ರಾದೇಶಿಕ ಪಕ್ಷ, ರೈತಪರ ಪಕ್ಷ ಎಂದೇ ಗುರುತಿಸಿಕೊಂಡಿರುವ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, 'ನಾನು ಬದುಕೋದು ಕೆಲವೇ ದಿನ, ಸಾಯುವುದರೊಳಗೆ ಒಂದು ಬಾರಿ ಸಿಎಂ ಮಾಡಿ' ಎಂದು ಹೇಳುವ ಮೂಲಕ ಜನರ ಮತ ಗೆಲ್ಲಲು ಯತ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಮತದಾರರು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸುತ್ತಿದ್ದು, ರಾಜಕಿಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಆದರೆ, ಯಾವ ಸರ್ಕಾರ ಬಹುಮತ ಪಡೆಯಲಿದೆ, ಯಾರು ಜಯಗಳಿಸಲಿದ್ದಾರೆ ಎಂಬುದು ಮೇ. 15 ರಂದು ನಡೆಯಲಿರುವ ಮತೆಎಣಿಕೆ ನಂತರ ಬಹಿರಂಗವಾಗಲಿದೆ. 

Trending News