ಕರ್ನಾಟಕ ವಿಧಾನಸಭಾ ಚುನಾವಣೆ: ಎಐಡಿಎಂಕೆಯಿಂದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ

     

Last Updated : Apr 21, 2018, 05:26 PM IST
ಕರ್ನಾಟಕ ವಿಧಾನಸಭಾ ಚುನಾವಣೆ: ಎಐಡಿಎಂಕೆಯಿಂದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ  title=

ಬೆಂಗಳೂರು: ಮೇ 12 ರಂದು  ನಡೆಯುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಎಐಡಿಎಂಕೆ ಪಕ್ಷವು ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ.

ಎಐಡಿಎಂಕೆ ಪಕ್ಷದ ಕರ್ನಾಟಕದ ಕಾರ್ಯದರ್ಶಿಯಾದ  ಎಂಪಿ ಯುವರಾಜ್ ಬೆಂಗಳೂರಿನ ಗಾಂಧಿನಗರಿಂದ ಆರ್ಪಿ ವಿಷ್ಣುಕುಮಾರ್ ಹನೂರು ಮತ್ತು ಎಂ.ಅನ್ಬು ಕೋಲಾರ್ ಗೋಲ್ಡ್ ಫೀಲ್ಡ್ (ಕೆಜಿಎಫ್) ನಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಅತಿ ಹೆಚ್ಚು ತಮಿಳು ಮಾತನಾಡುವ ಕ್ಷೇತ್ರಗಳಲ್ಲಿ ಎಐಡಿಎಂಕೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

 

Trending News