ಬಿಜೆಪಿಯು ದಲಿತರನ್ನು ಯಾವಾಗಲೂ ಸಮಾಜದ ಕೆಳಸ್ತರದಲ್ಲಿಯೇ ಇಡುತ್ತದೆ: ರಾಹುಲ್ ಗಾಂಧಿ

   

Last Updated : May 6, 2018, 01:13 PM IST
ಬಿಜೆಪಿಯು ದಲಿತರನ್ನು ಯಾವಾಗಲೂ ಸಮಾಜದ ಕೆಳಸ್ತರದಲ್ಲಿಯೇ ಇಡುತ್ತದೆ: ರಾಹುಲ್ ಗಾಂಧಿ  title=

ಬೆಂಗಳೂರು: ಬಿಜೆಪಿ ವಿರುದ್ದ ಟ್ವಿಟ್ಟರ್ ನಲ್ಲಿ ಟೀಕಾ ಪ್ರಹಾರ ಮುಂದುವರೆಸಿರುವ ರಾಹುಲ್ ಗಾಂಧಿ ಬಿಜೆಪಿ ಫ್ಯಾಸಿಸ್ಟ್ ಸಿದ್ದಾಂತದ ಮೂಲವೆಂದರೆ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ನಿರಂತರವಾಗಿ ಸಮಾಜದ ಕೆಳಸ್ತರದಲ್ಲಿಯೇ ಇಡುವುದು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. 

ಈ ಟ್ವೀಟ್ ನೊಂದಿಗೆ ವಿಡಿಯೋ ಒಂದನ್ನು ಶೇರ್ ಮಾಡಿರುವ ಅವರು ಇದರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ದಲಿತರ ಮನೆಯಲ್ಲಿ ಹೊರಗಿನಿಂದ ಊಟವನ್ನು ಹೊರಗಡೆ ತರಿಸುತ್ತಿರುವುದು ಮತ್ತು ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎನ್ನುತ್ತಿರುವ ವೀಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋ ಮೂಲಕ  ದೇಶಾದ್ಯಂತ ದಲಿತರು ಮತ್ತು ಆದಿವಾಸಿಗಳು ಹೇಗೆ ಹಲ್ಲೆಗೆ ಒಳಗಾಗಿದ್ದಾರೆ ಎನ್ನುವುದನ್ನು ಇದು ಚಿತ್ರಿಸುತ್ತದೆ.

Trending News