ದಾಟಿ ಮಹಾರಾಜ್ ಆಶ್ರಮದಿಂದ 600 ಬಾಲಕಿಯರು ನಾಪತ್ತೆ !

   

Last Updated : Jun 17, 2018, 10:47 AM IST
ದಾಟಿ ಮಹಾರಾಜ್ ಆಶ್ರಮದಿಂದ 600 ಬಾಲಕಿಯರು ನಾಪತ್ತೆ ! title=

ನವದೆಹಲಿ: ರೇಪ್ ಆರೋಪವನ್ನು ಎದುರಿಸುತ್ತಿರುವ  ಸ್ವಯಂಘೋಷಿತ ದೇವ ಮಾನವ್ ದಾಟಿ ಮಹಾರಾಜ್ ಆಶ್ರಮದಿಂದ 600 ಬಾಲಕಿಯರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. 

ಈ ಎಲ್ಲ ಬಾಲಕಿಯರು ರಾಜಸ್ತಾನದ ಆಳ್ವಾದಲ್ಲಿರುವ ದಾಟಿ ಆಶ್ರಮದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ .ಸದ್ಯ ಆಶ್ರಮದಲ್ಲಿ ಕೇವಲ 100 ಬಾಲಕಿಯರು ಮಾತ್ರವಿದ್ದಾರೆ. ಅವರು ತಮ್ಮ ಮನೆಗಳಿಗೆ ತೆರಳಿರುವ ಕುರಿತಾಗಿಯೂ ಕೂಡ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. 

ಇನ್ನೊಂದೆಡೆಗೆ ಸ್ವತಃ ದಾಟಿ  ಮಹಾರಾಜ್ ಸಹ ಆಶ್ರಮದಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿಗೆ 25 ವರ್ಷದ ಮಹಿಳೆಯು ಅತ್ಯಾಚಾರ ಮಾಡಲಾಗಿದೆ ಎಂದು ಆರೋಪ ಮಾಡಿದ ನಂತರ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಮಹಿಳೆಯು ಈ ಆಶ್ರಮದಲ್ಲಿ ಕಳೆದ ಹತ್ತು ವರ್ಷಗಳಿಂದಲೂ  ಶಿಷ್ಯೆಯಾಗಿದ್ದಳು ಎಂದು ತಿಳಿದುಬಂದಿದೆ. 

Trending News