ಆಂಧ್ರಪ್ರದೇಶ:23ರ ವಯಸ್ಸಿನ ಮಹಿಳೆಯನ್ನು ವರಿಸಿದ 13ರ ಬಾಲಕ

    

Last Updated : May 12, 2018, 10:07 PM IST
ಆಂಧ್ರಪ್ರದೇಶ:23ರ ವಯಸ್ಸಿನ ಮಹಿಳೆಯನ್ನು ವರಿಸಿದ 13ರ ಬಾಲಕ title=

ನವದೆಹಲಿ: ಆಂಧ್ರಪ್ರದೇಶದಲ್ಲಿ 23 ವರ್ಷದ ಮಹಿಳೆಯನ್ನು 13 ವರ್ಷ ವಯಸ್ಸಿನ ಬಾಲಕನು ವಿವಾಹವಾಗಿದ್ದಾನೆ. ಈಗ ಮದುವೆ ಸಮಾರಂಭದ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಬಾಲಕನ ತಾಯಿಯ ಅನಾರೋಗ್ಯದ ಕಾರಣದಿಂದಾಗಿ  ಏಪ್ರಿಲ್ 27 ರಂದು  ಈ ಮದುವೆ ನಡೆದಿದೆ ಎಂದು ತಿಳಿದುಬಂದಿದೆ.ಬಾಲಕನ ತಂದೆಯು ಮಧ್ಯಪಾನಿಯಾಗಿದ್ದರಿಂದ ಮಗನ ಭವಿಷ್ಯದ ಕುರಿತು ಚಿಂತಳಿತಳಾಗಿ  ಆಕೆಯ ಸಾವಿನ ಸಂದರ್ಭದಲ್ಲಿ ಯಾರಾದರೂ ಅವನನ್ನು ನೋಡಿಕೊಳ್ಳಬೇಕೆಂದು ಅವಳು ಬಯಸಿದ್ದಳು. ಆದ್ದರಿಂದ ದೂರದ ಸಂಬಂಧಿಕರ ಮೂಲಕ ಬಾಲಕನಿಗೆ ಕನ್ಯೆಯನ್ನು ವರಿಸಲು ಹುಡುಕಿದ್ದಾರೆ ಎನ್ನಲಾಗಿದೆ 

ಈ ಬಾಲಕ ಮದುವೆಯು ಸಾರ್ವಜನಿಕವಾದ ನಂತರ, ಬಾಲಕನ ಪೋಷಕರು ಮತ್ತು ಮಹಿಳೆಯ ಕುಟುಂಬ ಕಾಣೆಯಾಗಿದೆ. ಇದಕ್ಕಾಗಿ ಪೊಲೀಸರು ಅವರನ್ನು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.

Trending News