YouTube Star: ವಿಚಿತ್ರ ಕಾಯಿಲೆಗೆ ಬಲಿಯಾದ ಯೂಟ್ಯೂಬ್ ಸ್ಟಾರ್!, ಏನಾಗಿತ್ತು ಗೊತ್ತಾ..?

YouTube ನಲ್ಲಿ 3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಯೂಟ್ಯೂಬ್ ಸ್ಟಾರ್ ಅಡಾಲಿಯಾ ಕೇವಲ 15 ನೇ ವಯಸ್ಸಿನಲ್ಲಿ ನಿಧನರಾದರು. ವೃದ್ಧಾಪ್ಯವು ಅತಿ ವೇಗವಾಗಿ ಆಗುವ ವಿಚಿತ್ರ ಕಾಯಿಲೆಯಿಂದ ಈ ಸಾವು ಸಂಭವಿಸಿದೆ.

Written by - Puttaraj K Alur | Last Updated : Jan 15, 2022, 06:08 AM IST
  • ಕೇವಲ 15ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ಯೂಟ್ಯೂಬ್ ಸ್ಟಾರ್
  • ಅತಿವೇಗವಾಗಿ ವಯಸ್ಸಾಗುವಿಕೆ ಕಾಯಿಲೆಯಿಂದ ಬಳಲುತ್ತಿದ್ದ ಅಡಾಲಿಯಾ
  • ಯೂಟ್ಯೂಬ್‌ನಲ್ಲಿ ಸುಮಾರು 3 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು
YouTube Star: ವಿಚಿತ್ರ ಕಾಯಿಲೆಗೆ ಬಲಿಯಾದ ಯೂಟ್ಯೂಬ್ ಸ್ಟಾರ್!, ಏನಾಗಿತ್ತು ಗೊತ್ತಾ..? title=
ವಯಸ್ಸಾಗುವಿಕೆ ಕಾಯಿಲೆಯಿಂದ ಬಳಲುತ್ತಿದ್ದ ಅಡಾಲಿಯಾ

ನವದೆಹಲಿ: ಕೇವಲ 15ರ ಹರೆಯದಲ್ಲಿ ಸಾವು, ಅದೂ ವೃದ್ಧಾಪ್ಯದಿಂದ. ಇದು ವಿಚಿತ್ರ ಅಲ್ಲವೇ. ಆದರೆ ಈ ಘಟನೆ ಸತ್ಯವಾಗಿದೆ. ಯೂಟ್ಯೂಬ್ ತಾರೆ ಅಡಾಲಿಯಾ(Adalia Rose) ರೋಸ್ 15ನೇ ವಯಸ್ಸಿನಲ್ಲಿ ಇಹಲೋಕ ತ್ಯೆಜಿಸಿದ್ದಾರೆ. ಈ ಬಗ್ಗೆ ಅವರ ಕುಟುಂಬದವರು ಹೃದಯಸ್ಪರ್ಶಿ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ತಿಳಿದರೆ ನಿಮ್ಮ ಕಣ್ಣಲ್ಲಿಯೂ ನೀರು ಬರುತ್ತದೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಅಡಾಲಿಯಾ

ವರದಿಗಳ ಪ್ರಕಾರ ಅಡಾಲಿಯಾ ಯೂಟ್ಯೂಬ್‌(YouTube Star)ನಲ್ಲಿ ಸುಮಾರು 3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಅವರು ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ರೋಗ(Hutchinson-Gilford Progeria Disease)ವನ್ನು ಹೊಂದಿದ್ದರು, ಇದು ಆನುವಂಶಿಕ ಸ್ಥಿತಿಯಾಗಿದೆ. ಇದನ್ನು ಬೆಂಜಮಿನ್ ಬಟನ್ ಕಾಯಿಲೆ(Benjamin Button Disease) ಎಂದೂ ಕರೆಯುತ್ತಾರೆ. ಕೇವಲ 3 ತಿಂಗಳ ಮಗುವಾಗಿದ್ದಾಗ ಈ ಕಾಯಿಲೆಯ ಬಗ್ಗೆ ಕುಟುಂಬಸ್ಥರಿಗೆ ತಿಳಿದಿತ್ತು. ಇದು ಅಪರೂಪದ ಮತ್ತು ಅತ್ಯಂತ ಮಾರಣಾಂತಿಕ ಸ್ಥಿತಿಯಾಗಿದ್ದು, ಈ ರೋಗದಿಂದ ಬಳಲುವ ವ್ಯಕ್ತಿಯಲ್ಲಿ ವಯಸ್ಸಾಗುವಿಕೆಯ ಸ್ಥಿತಿ ಬಹಳ ವೇಗವಾಗಿರುತ್ತದೆ.

ಇದನ್ನೂ ಓದಿ: US Embassy: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ

ಅಡಾಲಿಯಾ ಹುಟ್ಟಿದ ಸಮಯದಲ್ಲಿ 1 ತಿಂಗಳಂತೆ ಕಾಣುತ್ತಿದ್ದಳು!

ಟೆಕ್ಸಾಸ್‌ನಲ್ಲಿ ವಾಸಿಸುವ ಅವರ ಸಂಬಂಧಿಕರು ಇದೇ ತಿಂಗಳ ಜನವರಿ 12ರಂದು ಸಂಜೆ 7 ಗಂಟೆಗೆ ಅಡಾಲಿಯಾ ರೋಸ್(Adalia Rose) ವಿಲಿಯಮ್ಸ್ ಇಹಲೋಕ ತ್ಯಜಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅಡಾಲಿಯಾ ಅವರ ತಾಯಿ ನಟಾಲಿಯಾ ಪಲಾಂಟೆ, ಅಡಾಲಿಯಾ ಜನಿಸಿದಾಗ 1 ತಿಂಗಳ ವಯಸ್ಸಿನವಳಂತೆ ಕಾಣುತ್ತಿದ್ದಳು ಮತ್ತು ವೈದ್ಯರು ಅವಳ ಬೆಳವಣಿಗೆಯಿಂದ ಸಂತೋಷವಾಗಿರಲಿಲ್ಲ ಎಂದು ಹೇಳಿದ್ದಾರೆ. ಇದು ಮೊದಲು ಕಾಣಿಸಿಕೊಂಡ ರೋಗಲಕ್ಷಣಗಳಲ್ಲಿ ಒಂದಾಗಿದೆ. ಅವಳ ಹೊಟ್ಟೆಯ ಮೇಲಿನ ಚರ್ಮವು ನಿಜವಾಗಿಯೂ ವಿಸ್ತರಿಸಲ್ಪಟ್ಟಿದೆ ಮತ್ತು ವಿಭಿನ್ನವಾಗಿ ಕಾಣುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಲಕ್ಷಾಂತರ ಜನರನ್ನು ಪ್ರೇರೇಪಿಸಿದ ವಿಡಿಯೋ

ಅಡಾಲಿಯಾ ತನ್ನ ವಿಡಿಯೋ(YouTube Videos)ಗಳಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾಳೆ. ಅಡಾಲಿಯಾ ತನ್ನ ಚಾನಲ್‌ನಲ್ಲಿ ಟ್ಯುಟೋರಿಯಲ್‌ಗಳು, ಜೀವನ, ವ್ಯಕ್ತಿತ್ವ, ಸಾಧನೆ ಮತ್ತು ಹೆಚ್ಚಾಗಿ ಪಾಸಿಟಿವ್ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಪ್ರಪಂಚದಾದ್ಯಂತ ಸುಮಾರು 500 ಮಕ್ಕಳು ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ರೋಗಕ್ಕೆ ತುತ್ತಾಗಿದ್ದಾರೆ. ಈ ರೋಗದಿಂದ ಬಳಲುವ ವ್ಯಕ್ತಿಗಳ ಸರಾಸರಿ ಜೀವನ ಕೇವಲ 13 ವರ್ಷಗಳು ಮಾತ್ರ ಎಂದು ವರದಿಯಾಗಿದೆ.

ಇದನ್ನೂ ಓದಿ: Book On Prophet Mohammed: ಮುಹಮ್ಮದ್ ಪೈಗಂಬರ್ ಕಾರ್ಟೂನ್ ಗೆ ಬೆದರಿದ ಸರ್ಕಾರ, ಇಡೀ ಪುಸ್ತಕದ ಮೇಲೆ ಬ್ಯಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News