ರಾಷ್ಟ್ರಪತಿ, ಪಿಎಂಓ, ಮೋದಿಯನ್ನು ಅನ್ ಫಾಲೋ ಮಾಡಿದ ಬಗ್ಗೆ ಶ್ವೇತಭವನ ಸ್ಪಷ್ಡೀಕರಣ

ಕೊರೋನಾ ರೋಗಕ್ಕೆ ತಾತ್ಕಾಲಿಕ ಔಷಧಿಯನ್ನಾಗಿ ಬಳಸಲ್ಪಡುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಭಾರತಕ್ಕೆ ಒತ್ತಡ ಹೇರಿ ಪಡೆದುಕೊಂಡ ಬಳಿಕ ಏಪ್ರಿಲ್ 10ರಂದು ಅಮೆರಿಕದ ಶ್ವೇತಭವನದ ಟ್ವೀಟರ್ ಖಾತೆಯು ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು

Last Updated : Apr 30, 2020, 01:11 PM IST
ರಾಷ್ಟ್ರಪತಿ, ಪಿಎಂಓ, ಮೋದಿಯನ್ನು ಅನ್ ಫಾಲೋ ಮಾಡಿದ ಬಗ್ಗೆ ಶ್ವೇತಭವನ ಸ್ಪಷ್ಡೀಕರಣ title=
File Image

ನವದೆಹಲಿ: ಫಾಲೋ ಮಾಡಲು ಆರಂಭಿಸಿದ ಮೂರೇ ವಾರಕ್ಕೆ ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್ (Ramnath Kovind), ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಅನ್ ಫಾಲೋ ಮಾಡಿದ್ದ ಅಮೆರಿಕಾದ ಶ್ವೇತಭವನ (White House) ಈಗ ತಾನು  ಭಾರತೀಯ ನಾಯಕರ ಟ್ವೀಟರ್ ಖಾತೆಗಳನ್ನು ಅನ್ ಫಾಲೋ‌ ಮಾಡಿದ್ದೇಕೆಂದು ಸ್ಪಷ್ಟೀಕರಣ ನೀಡಿದೆ.

ಕೊರೋನಾ ರೋಗಕ್ಕೆ ತಾತ್ಕಾಲಿಕ ಔಷಧಿಯನ್ನಾಗಿ ಬಳಸಲ್ಪಡುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್‌ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಭಾರತಕ್ಕೆ ಒತ್ತಡ ಹೇರಿ ಪಡೆದುಕೊಂಡ ಬಳಿಕ ಏಪ್ರಿಲ್ 10ರಂದು ಅಮೆರಿಕದ ಶ್ವೇತಭವನದ ಟ್ವೀಟರ್ ಖಾತೆಯು ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು. ಮೂರು ವಾರಗಳ ಬಳಿಕ ಏಪ್ರಿಲ್ 29ರಂದು ಆ ಮೂರು ಖಾತೆಗಳನ್ನು ಅನ್ ಫಾಲೋ ಮಾಡಿತ್ತು. ಈಗ ಈ ಬಗ್ಗೆ ಶ್ವೇತಭವನ ಸ್ಪಷ್ಟೀಕರಣ ನೀಡಿದೆ.

ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭೇಟಿ ನೀಡುತ್ತಿದ್ದ ಹಿನ್ನಲೆಯಲ್ಲಿ ಅತಿಥೇಯ ರಾಷ್ಟ್ರದ ಅಧ್ಯಕ್ಷರ, ಪ್ರಧಾನಿಗಳ ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡಲಾಗಿತ್ತು. ಇದು ಶ್ವೇತಭವನ ಅನುಸರಿಸುವ ಸಾಮಾನ್ಯ ಸಂಪ್ರದಾಯ. ಅಮೇರಿಕಾ ಅಧ್ಯಕ್ಷರ ಪ್ರವಾಸದ ಬಳಿಕ ಅನ್ ಫಾಲೋ ಮಾಡುವುದು ಕೂಡ 'ಆ ಸಂಪ್ರದಾಯದ ಭಾಗ'. ಹಾಗಾಗಿ ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಗಳನ್ನು ಅನ್ ಫಾಲೋ ಮಾಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಅಮೇರಿಕಾ (America)ದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವಿಟರ್ ಖಾತೆಯನ್ನು ಮತ್ತು ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಟ್ವಿಟರ್ ಖಾತೆಯನ್ನು ಕೂಡ ಅನ್ ಫಾಲೋ ಮಾಡಿದೆ. ಇದು ಕೂಡ ಸಹಜ ಮತ್ತು ಸಾಮಾನ್ಯ ಪ್ರಕ್ರಿಯೆಯಾಗಿದ್ದು ಇದಕ್ಕೆ ವಿಶೇಷ ಅರ್ಥಗಳನ್ನು ಕಲ್ಪಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಲಕ್ಷಗಟ್ಟಲೆ ಫಾಲೋಹರ್ಸ್ ಹೊಂದಿರುವ ಶ್ವೇತಭವನ ಮೊದಲು 18 ಮಂದಿಯನ್ನು ಫಾಲೋ ಮಾಡುತ್ತಿತ್ತು‌. ಭಾರತದ ರಾಷ್ಟ್ರಪತಿ ರಮಾನಾಥ್ ಕೊವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಕಚೇರಿ, ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿಯ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿದ್ದರಿಂದ ಈಗ ಶ್ವೇತಭವನ ಫಾಲೋ ಮಾಡುತ್ತಿರುವ ಟ್ವಿಟ್ಟರ್ ಖಾತೆಗಳ ಸಂಖ್ಯೆ 13ಕ್ಕೆಇಳಿದಿದೆ‌.
 

Trending News